ಬಳ್ಳಾರಿ ಮೇ 12 : ರಾಜ್ಯ ಸರ್ಕಾರ ನಡೆಸುತ್ತಿರುವ 101 ಜಾತಿಗಳ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸುವ ಸಲುವಾಗಿ ಜಾತಿ ಜನಗಣತಿಯನ್ನು ಆರಂಭಿಸಲಾಗಿದೆ, ಸರ್ಕಾರದ ಈ ನಡೆ, ಸ್ವಾಗತಾರ್ಹ, ಆದರೆ ವೀರಶೈವ ಜಂಗಮರು ನಾವು ಸಹ ಬೇಡ ಜಂಗಮರೆಂದು ಉಪ ಜಾತಿ ಕಲಂ ನಲ್ಲಿ ಬರೆಸುತ್ತಿದ್ದಾರೆ. ಇದು ನಿಜವಾದ ಬೇಡ ಜಂಗಮರಾದ ನಮ್ಮ ಅನ್ನವನ್ನು ಕಸಿದ್ದು ತಿಂದಂತಾಗುತ್ತದೆ ಬೇಡಿ ಜಂಗಮರು ಸಮಾಜದಲ್ಲಿ ಮೇಲ್ವರ್ಗ ಜಾತಿ ಮತ್ತು ಸಮುದಾಯವಾದ ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಯಾವುದೇ ಕಾರಣಕ್ಕೂ ತಾವುಗಳು ಪರಿಶಿಷ್ಟ ಜಾತಿ ಬೇಡಿ ಜಂಗಮರೆಂದು ಜಾತಿ ಜನಗಣತಿಯಲ್ಲಿ ಬರೆಸಬಾರದು ಒಂದು ವೇಳೆ ಜಂಗಮ ಸಮುದಾಯದ ಸ್ವಾಮಿಗಳು ಹೀಗೆ ಮಾಡಿದ್ದು ಕಂಡು ಬಂದಲ್ಲಿ ಬೇಡಿ ಅಥವಾ ಬುಡ್ಗ ಜಂಗಮರಾದ ನಾವು ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಪರಿಶಿಷ್ಟ ಜಾತಿ ಅಲೆಮಾರಿ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ಅವರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿ, ಬೇಡಿ ಜಂಗಮರು ಮೇಲ್ವರ್ಗ ಜಾತಿ ಮತ್ತು ಸಮುದಾಯಕ್ಕೆ ಸೇರಿದವರಾಗಿದ್ದು ಇವರು ದೇವಸ್ಥಾನಗಳಲ್ಲಿ ಅರ್ಚಕ ಸೇವೆಯನ್ನು ಮಾಡುತ್ತಾ ದಲಿತ, ಹಿಂದುಳಿದ ವರ್ಗದವರಿಂದ ಪಾದಗಳನ್ನು ತೊಳೆಸಿಕೊಂಡು ಪಾದಪೂಜೆಯನ್ನು ಮಾಡಿಸಿಕೊಳ್ಳುತ್ತಾರೆ ಹೀಗೆ ಉನ್ನತ ಜಾತಿ ಜನಾಂಗಕ್ಕೆ ಸೇರಿದ ಬೇಡಿ ಜಂಗಮ ಜನಾಂಗದವರು ನಾವು ಸಹ ಪರಿಶಿಷ್ಟ ಜಾತಿ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದವಾಗಿದೆ, ನಾಗಮೋಹನ್ ದಾಸ್ ಅವರ ವರದಿಯಲ್ಲಿ ಹೀಗಿರುವ 101 ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳನ್ನು ಗುರುತಿಸಲು ಸರ್ವೇ ಕಾರ್ಯ ನಡೆಯುತ್ತಿದೆ ಯಾವುದೇ ಕಾರಣಕ್ಕೂ ಅನ್ಯ ಜಾತಿಯವರನ್ನು ಜಾತಿ ಜನಗಣತಿಯಲ್ಲಿ ಸೇರಿಸಬಾರದು ಎಂದು
ಸ್ಪಷ್ಟವಾಗಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಮೇ 8ರಂದು ಸರ್ಕಾರ ಬಿಡುಗಡೆಗೊಳಿಸಿದ ಆದೇಶದಲ್ಲಿ ಪರಿಶಿಷ್ಟ ಜಾತಿ ಜನಗಣತಿಯನ್ನು ಕಟ್ಟುನಿಟ್ಟಾಗಿ ನಡೆಸಿ ಯಾವುದೇ ಕಾರಣಕ್ಕೂ ಉನ್ನತ ಜಾತಿಯವರನ್ನು ಸೇರಿಸಬೇಡಿ ಒಂದು ವೇಳೆ ಹೀಗೆ ಲೋಪವಾಗಿದ್ದು ಕಂಡಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಆದರೂ ಸಹ ವೀರಶೈವ ಬೇಡಿ ಜಂಗಮರು ವೀರಶೈವ ಜಂಗಮ ಸಮುದಾಯಕ್ಕೆ ಸೇರಿದ್ದರು ಕೇವಲ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯಲ್ಲಿ ತಮ್ಮ ಜಾತಿಯನ್ನು ಸೇರಿಸಲು ಯತ್ನಿಸುತ್ತಿದ್ದಾರೆ ಇದು ಅತ್ಯಂತ ಅಪರಾಧ ಕೃತ್ಯವಾಗಿದೆ. ಯಾವುದೇ ಕಾರಣಕ್ಕೂ ಈ ವೀರಶೈವ ಬೇಡಿ ಜಂಗಮರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಬಾರದು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರರು ಮತ್ತು ಸರ್ವೆ ಕಾರ್ಯ ನಡೆಸುತ್ತಿರುವ ಸಿಬ್ಬಂದಿಗಳಲ್ಲಿ ಶಿವಕುಮಾರ್ ಮನವಿ ಮಾಡಿದ್ದಾರೆ.