ಯರಗಟ್ಟಿ: ಪಟ್ಟಣದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಬೆಳಗ್ಗೆ ರುದ್ರಾಭೀ?ಕ, ಮಹಾಪೂಜೆ ಹಾಗೂ ಭಕ್ತರ ಹರಕೆ ತೀರಿಸುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಹತ್ತು ಗಂಟೆಗೆ ವೀರಭದ್ರೇಶ್ವರ ಮೂರ್ತಿಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ಕರಡಿ ಮಜಲು, ಭಜನಾ ಮೇಳ, ಡೊಳ್ಳು ಮೇಳ, ಕುಂಭ ಹೊತ್ತ ನೂರಾರು ಮುತ್ತೈದೆಯರು ಪಾಲ್ಗೊಂಡಿದ್ದರು. ಪುರವಂತರ ಕುಣಿತ ಬೀದಿಯುದ್ದಕ್ಕೂ ಪಲ್ಲಕ್ಕಿ ಉತ್ಸವವು ಜನರ ಗಮನ ಸೆಳೆಯಿತು.
ನಂತರ ನಡೆದ ಅಗ್ನಿ ಪ್ರವೇಶ ಕಾರ್ಯಕ್ರಮಕ್ಕೆ ತೋರಣಗಟ್ಟಿ ಪುರವಂತರಾದ ಪರಪ್ಪ ಶಿಂಗಾರಗೊಪ್ಪ ಹಾಗೂ ತಂಡದವರು ಪಾಲ್ಗೊಂಡಿದ್ದರು. ಅಗ್ನಿ ಪ್ರವೇಶದಲ್ಲಿ ಹಲವು ಭಕ್ತರು ಕೆಂಡ ಹಾಯ್ದು ತಮ್ಮ ಹರಕೆ ತೀರಿಸಿದರು.
ನಂತರ ಬಂಡಿಗಣಿ ಮಠದ ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಪೂಜ್ಯರನ್ನು ಸಕಲ ವಾದ್ಯಗೋಷ್ಠಿ ಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಂತರ ಜಾತ್ರಾ ಮಹೋತ್ಸವ ಕಮೀಟಿ ವತಿಯಿಂದ ಬಂಡಿಗಣಿ ಮಠದ ಪೂಜ್ಯ ದಾಸೋಹ ಚಕ್ರವರ್ತಿ ಅನ್ನದಾನೇಶ್ವರಿಗೆ ವೀರಭದ್ರೇಶ್ವರ ಕುಲಪುತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಈರಪ್ಪ ಹಾದಿಮನಿ ಹಾದಿಮನಿ, ಕುಮಾರ ಹಿರೇಮಠ, ಈರಣ್ಣಾ ಮಠಪತಿ, ದುಂಡಯ್ಯ ಹಿರೇಮಠ, ಶಿವಲಿಂಗಪ್ಪ ವಾಲಿ, ಬಾಬು ಪಟ್ಟೇದ, ಶಿವಾನಂದ ಕರ್ಜಗಿಮಠ, ಸದಾನಂದ ಹಣಬರ, ಬಸವರಾಜ ವಾಲಿ, ಶಿವಾನಂದ ಬಳಿಗಾರ, ಶಂಕರ ಇಟ್ನಾಳ, ರಫೀಕ ಬಾಂಬೆ, ಮೋಹನ ಹಾದಿಮನಿ, ಗೌಡಪ್ಪ ಸವದತ್ತಿ, ಪ್ರವೀಣ ಬೆಣ್ಣಿ, ಸಂತೋ? ವಾಲಿ, ಸೇರಿದಂತೆ ತೋರಣಗಟ್ಟಿ, ಮುಗಳಿಹಾಳ, ಹಳ್ಳೂರ ಪುರವಂತರು ಸೇರಿದಂತೆ ಅನೇಕರು ಇದ್ದರು.
೦೮ ಯರಗಟ್ಟಿ ೦೧
ಪೋಟೋ ಶೀರ್ಷಿಕೆ