ಯರಗಟ್ಟಿ: ಧರ್ಮದ ರಕ್ಷಣೆಗಾಗಿ ಭಗವಂತ ಅನೇಕ ಅವತಾರಗಳನ್ನು ಎತ್ತಿ ಧರ್ಮವನ್ನು ಉದ್ಧಾರ ಮಾಡಿದ್ದಾನೆ. ಅಂತೆಯೇ ಈ ಕಲಿಯುಗದಲ್ಲಿ ಅವತರಿಸಿ ಈ ಧರ್ಮವನ್ನು, ಸಂಸ್ಕಾರವನ್ನು ಹಾಗೂ ಸಮಾಜವನ್ನ ಪುನರುತ್ಥಾನ ಮಾಡಿ ಸನಾತನ ಧರ್ಮದ ಜಾಗೃತಿ ಮೂಡಿಸಬೇಕು ಎಂದು ಹಾರಿಕಾ ಮಂಜುನಾಥ ಹೇಳಿದರು.
ಪಟ್ಟಣದ ಸಾರ್ವಜನಿಕ ಗಜಾನನ ಯುವಕ ಮಂಡಳಿಯಿಂದ ಆಯೋಜಿಸಿದ್ದ ನಮ್ಮ ಧರ್ಮ ರಕ್ಷಣೆ ನಮ್ಮ ಹೊಣೆ ಎಂಬ ವಿಶೇ? ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು ನಾವು ಸುಖ ಶಾಂತಿ, ಸಂತೋ?ದಿಂದ ಇರಬೇಕಾದರೆ ಧರ್ಮ ಚೆನ್ನಾಗಿರಬೇಕು. ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ತಾಯಂದಿರು ಇಂದಿನ ಮಕ್ಕಳಿಗೆ ನಮ್ಮ ಸನಾತನ ಧರ್ಮದ ಉಳಿವಿಗಾಗಿ ಪಾಠ ಮಾಡಿಸಬೇಕು ಮಕ್ಕಳಿಗೆ ದೇವಾಲಯಗಳಿಗೆ ಭೇಟಿ ನೀಡಿವಂತೆ ಪ್ರೋತ್ಸಾಹಿಸಬೇಕು, ಭಜನೆ, ವಚನ ಸಾಹಿತ್ಯ, ಮಂತ್ರ ಪಠಣ, ರಾಮಾಯಣ, ಮಹಾಭಾರತ ಓದಿಸುವ ಹವ್ಯಾಸ ಬೇಳೆಸಬೇಕು ಎಂದು.
ನಮ್ಮ ಧರ್ಮ ರಕ್ಷಣೆಗಾಗಿ ಅನೇಕ ಮಹನಿಯರು ತ್ಯಾಗ ಮಾಡಿದ್ದಾರೆ
ನಮ್ಮ ಭಾರತ ಮಾತೆಯ ರಕ್ಷಣೆಗಾಗಿ ಮತ್ತು ಪಹಲ್ಗಾಮ್ ದಾಳಿ ನಡೆಸಿ ಭಾರತೀಯ ಹೆಣ್ಣುಮಕ್ಕಳು ಸಿಂಧೂರ ಅಳಿಸಿದ ಹೇಡಿ ಪಾಕಿಸ್ತಾನಕ್ಕೆ ನಮ್ಮ ಭಾರತೀಯ ಸೇನೆಯ ಹೆಣ್ಣು ಮಕ್ಕಳು ಆಪರೇ?ನ್ ಸಿಂಧೂರ ಮೂಲಕ ಉತ್ತರ ನೀಡಿದ್ದಾರೆ ಭಾರತ ಮಲಗಿದ್ರೆ ಮಾತ್ರ ಕುಂಭಕರ್ಣ ಎದ್ದರೆ ವೀರಭದ್ರನ ಅವತಾರ ಎಂದು ಹಾರಿಕಾ ಮಂಜುನಾಥ ಹೇಳಿದರು.
ಶಿಂಧೋಗಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು, ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಅಜೀತಕುಮಾರ ದೇಸಾಯಿ, ಮುಖ್ಯ ಅತಿಥಿಗಳಾಗಿ ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ ದೇವರಡ್ಡಿ, ಮಾಜಿ ಸೈನಿಕ ಕುಮಾರ ಹಿರೇಮಠ, ಮೋಹನ ಹಾದಿಮನಿ, ರಾಜೇಂದ್ರ ಶೆಟ್ಟಿ, ವ್ಹಿ. ಎಂ. ಮರಡಿ, ಬಸಯ್ಯ ಹಿರೇಮಠ, ಶಿವಲಿಂಗಪ್ಪ ವಾಲಿ, ಚೇತನ ಜಕಾತಿ, ಗಿರೀಶ ಪಾಟೀಲ, ಬಸವರಾಜ ದುಗ್ಗಾಣಿ, ಕೃ?ಮೂರ್ತಿ ತೊರಗಲ್ಲ, ಸದಾನಂದ ಪಾಟೀಲ, ಕುಮಾರ ಜಕಾತಿ, ಈರಣ್ಣಾ ಪೂಜೇರ, ದುಂಡಯ್ಯ ಹಿರೇಮಠ ಸೇರಿದಂತೆ ಸಾರ್ವಜನಿಕ ಗಜಾನನ ಯುವಕ ಮಂಡಳಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಇದ್ದರು.
ಭಾರತ ಮಲಗಿದ್ರೆ ಕುಂಭಕರ್ಣ ಎದ್ದರೆ ವೀರಭದ್ರ: ಹರಿಕಾ ಮಂಜುನಾಥ
