ಟ್ರಾನ್ಸ್ ಜೆಂಡರ್ ತಿದ್ದುಪಡಿ ಮಸೂದೆ ರದ್ದುಗೊಳಿಸಿ ಕೇಂದ್ರ ಸರ್ಕಾರಕ್ಕೆ : ವೀಣಾ ಆಗ್ರಹ  

MK HasiruKranti
ಟ್ರಾನ್ಸ್ ಜೆಂಡರ್ ತಿದ್ದುಪಡಿ ಮಸೂದೆ ರದ್ದುಗೊಳಿಸಿ ಕೇಂದ್ರ ಸರ್ಕಾರಕ್ಕೆ : ವೀಣಾ ಆಗ್ರಹ  
WhatsApp Group Join Now
Telegram Group Join Now
ಬಳ್ಳಾರಿ. ಮಾ. 24: ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದು ಇದು ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾರಕವಾಗುತ್ತದೆ ಕಾರಣ ಕೂಡಲೇ ಕೇಂದ್ರ ಸರ್ಕಾರ ಈ ಮಸೂದೆಯನ್ನು ರದ್ದುಪಡಿಸಿ ಹಿಂಪಡೆಯಬೇಕೆಂದು ಈ ಸಂದರ್ಭದಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವ ಚಳುವಳಿಯ ವೀಣಾ ಆಗ್ರಹಿಸಿದರು.
 ಈ ಕುರಿತು ಅವರು ತಮ್ಮ ಸಂಗಡಿಗರೊಂದಿಗೆ ಲಿಂಗತ್ವ ಮತ್ತು ಲೈಂಗಿಕ ಬಹುತೊಕ್ಕಾಗಿ ಚಳುವಳಿ ಸಂಘಟನೆಯಿಂದ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಈ ದೇಹ ನನ್ನದು ಇದನ್ನು ನನ್ನಿಷ್ಟದ ಪ್ರಕಾರ ಬಳಸಿಕೊಳ್ಳುತ್ತೇನೆ, ನಮ್ಮ ಸ್ವಾಯುಕ್ತತೆಯನ್ನು ಕಸಿದುಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಇದು ಸುಪ್ರೀಂ ಕೋರ್ಟ್ ನ 2014ನೇ ತೀರ್ಪಿನ ಉಲ್ಲಂಘನೆ ಯಾಗಿರುತ್ತದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ  ಆಕ್ರೋಶವನ್ನು ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಈ ಕಾನೂನು ಟ್ರಾನ್ಸ್ಲೆಂಡರ್ ಎಂಬ ವಾಕ್ಯವನ್ನು ಸೀಮಿತಗೊಳಿಸಿ ನಮ್ಮ ಸಮುದಾಯಗಳನ್ನು ವಿಭಜಿಸಲು ಪ್ರಯತ್ನಿಸುತ್ತದೆ, ಕೂಡಲೇ ಕೇಂದ್ರ ಸರ್ಕಾರ ಈ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಬೇಕೆಂದರು. ಕೇಂದ್ರ ಸರ್ಕಾರದ ಈ ಹೊಸ ಕಾಯ್ದೆಯ ಅನ್ವಯ ಲಿಂಗತ್ವ ಅಲ್ಪಸಂಖ್ಯಾತರು  ವೈದ್ಯಕೀಯ ತಪಾಸಣೆ ಒಳಗೊಂಡು ವೈದ್ಯರ ಪ್ರಮಾಣ ಪತ್ರ ಪಡಿ ಬೇಕಾಗಿರುತ್ತದೆ ಆದರೆ ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂತ ಕಾಯ್ದೆಯಾಗಿದೆ ನಮಗೆ ಯಾವುದೇ ವೈದ್ಯರ ಪ್ರಮಾಣಪತ್ರ ಬೇಕಿಲ್ಲ ಜೊತೆಗೆ ನಾವು ಲಿಂಗತ್ವ ಅಲ್ಪಸಂಖ್ಯಾತರೆಂದು ಸಾಬೀತುಪಡಿಸಿಕೊಳ್ಳುವ ಅಗತ್ಯವಿಲ್ಲ ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪುನರವಸತಿ ಕಾರ್ಯಕ್ರಮಗಳು ಬೇಕೆ ಹೊರತು ಈ ರೀತಿಯ ನಮ್ಮ ಜೀವನಕ್ಕೆ ಮಾರಕವಾದ ಕಾಯ್ದೆ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
 ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಪರ್ವೀನ್ ಬಾನು ಸೇರಿದಂತೆ ಹಲವು ಜನ ಲಿಂಗತ್ವ ಅಲ್ಪಸಂಖ್ಯಾತರಿದ್ದರು.
WhatsApp Group Join Now
Telegram Group Join Now
Share This Article