ಗುರುಗಳು, ಪರಿವಾರ ದೇವತೆಗಳ ಆರಾಧನೆ ಮೊಕ್ಷಸಾಧನೆ ಮೆಟ್ಟಿಲಿದ್ದಂತೆ -ವೇದವರ್ಧನ ಶ್ರೀ

Hasiru Kranti
ಗುರುಗಳು, ಪರಿವಾರ ದೇವತೆಗಳ ಆರಾಧನೆ ಮೊಕ್ಷಸಾಧನೆ ಮೆಟ್ಟಿಲಿದ್ದಂತೆ -ವೇದವರ್ಧನ ಶ್ರೀ
WhatsApp Group Join Now
Telegram Group Join Now

ಜಮಖಂಡಿ; ಗುರುಗಳು, ಪರಿವಾರ ದೇವತೆಗಳ ಆರಾಧನೆ ಮೋಕ್ಷ ಸಾಧನೆಗೆ ಮೆಟ್ಟಿಲಿದ್ದಂತೆ, ಮೋಕ್ಷವನ್ನು ಕೊಡವವ ದೇವರು ಎಂದು ತಿಳಿದು ಗುರುಗಳು ಹಾಗೂ ಪರಿವಾರ ದೇವತೆಗಳನ್ನು ಬಿಟ್ಟರೆ ಮೋಕ್ಷ ಸಾಧನೆ ಅಸಾಧ್ಯ, ಎಂದು ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟರು.ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಂಚಾರದಲ್ಲಿರುವ ಅವರು ಭಾನುವಾರ ನಗರಕ್ಕೆ ಆಗಮಿಸಿ ಹೊಕ್ಕಳಬಾವಿ ಮೈದಾನದಲ್ಲಿ ಆಶೀರ್ವಚನ ನೀಡಿದರು. ಜೀವೋತ್ತಮರಾದ ವಾಯುದೇವರು, ಎಲ್ಲ ಗುರುಗಳ ಅನುಗ್ರಹ ದಿಂದ ಭಗವಂತನ ಜ್ಞಾನ ದೊರೆಯುತ್ತದೆ ಆದ್ದರಿಂದ ಎಲ್ಲ ಪರಿವಾರ ದೇವತೆಗಳು ಹಾಗೂ ಅಭಿಮಾನಿ ದೇವತೆಗಳನ್ನು ಅವಶ್ಯವಾಗಿ ಆರಾಧಿಸಬೇಕು ಇದರಿಂದ ಮೋಕ್ಷದ ಮಾರ್ಗ ಸುಲಭವಾಗುತ್ತದೆ. ಸಾಕಷ್ಟು ಪುಣ್ಯ ಸಾಧನೆ ಮಾಡಿ ಸ್ವರ್ಗಕ್ಕೆ ಹೋದರೆ ಅಲ್ಲಿ ಪುಣ್ಯ ಕರ್ಚುಮಾಡಿಕೊಂಡು ಮತ್ತೆ ಭೂಲೊಕದಲ್ಲಿ ಜನಿಸಬೇಕಾಗುತ್ತದೆ, ಸ್ವರ್ಗ ಶಾಶ್ವತವಾದ ಸುಖವನ್ನು ಕೊಡುವದಿಲ್ಲ. ಹುಟ್ಟು ಸಾವಿನಿಂದಾಚೆ ಶಾಶ್ವತ ಸುಖಕ್ಕಾಗಿ ಮೋಕ್ಷ ಸಾಧಿಸಬೇಕು ಅದಕ್ಕೆ ಎಲ್ಲ ಗುರುಗಳು, ಪರಿವಾರ ದೇವತೆಗಳು, ದೇವರ ಅನುಗ್ರಹ ಬೇಕು, ಅಂಥಹ ಮೋಕ್ಷ ಸಾಧನೆಗೆ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಉಡುಪಿಗೆ ಬನ್ನಿ; ಶಿರೂರು ಮಠದ ಪರ್ಯಾಯ ಉತ್ಸವಕ್ಕೆ ಎಲ್ಲ ಭಕ್ತರು ಉಡುಪಿಗೆ ಬರಬೇಕು ಎಂದು ಆಹ್ವಾನ ನೀಡಿದ ಅವರು, ಭಕ್ತರಿಗಾಗಿ ಉತ್ಸವಗಳನ್ನು ಏರ್ಪಡಿಸಲಾಗುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗ ಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಂಡಿತ ರಂಗಾಚಾರ್ಯ ಜೋಷಿ ಶ್ರೀಗಳು ಪಟ್ಟಾಭಿಶಿಕ್ಷರಾಗಿ ಇದೇ ಮೊದಲ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯವನ್ನು ನಡೆಸಿಕೊಡಲಿದ್ದಾರೆ, ವಿಶ್ವಗುರು ಮಧ್ವಾಚಾರ್ಯರಿಂದ ಪ್ರಾರಂಭವಾದ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠ ಪ್ರತಿ 16 ವರ್ಷಕ್ಕೊಮ್ಮೆ ಪರ್ಯಾಯ ನಡೆಸುತ್ತದೆ ಎಂದು ಹೇಳಿದರು.

ಮೆರವಣಿಗೆ; ತೆರೆದ ಸಾಲಂಕೃತ ವಾಹನದಲ್ಲಿ ಲಕ್ಕನಕೆರೆಯ ವೆಂಕಟರಮಣ ದೇವಸ್ಥಾನ ದಿಂದ ಶ್ರೀಗಳನ್ನು ಪೂರ್ಣಕುಂಭ ಮೆರವಣಿಗೆ ಯ ಮೂಲಕ ಸ್ವಾಗತಿಸಲಾಯಿತು. ನ್ಯಾಯವಾದಿ ನಿತಿನ ಹುಲ್ಯಾಳಕರ ಅವರ ಮನೆಯಲ್ಲಿ ಸಂಜೆಯ ತೊಟ್ಟಿಲು ಸೇವೆ ನಡೆಯಿತು. ಸೋಮವಾರ ಬೆಳಗ್ಗೆ ಪಾದಪೂಜೆ, ರಘೋತ್ತಮರಾಯರ ಮಠದಲ್ಲಿ ಸಂಸ್ಥಾನ ಪೂಜೆ, ಮಹಾಪ್ರಸಾದ ಫಲ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಗಳು ನಡೆದವು. ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article