ವಸುದೇವ ಕುಟುಂಬ ಇದು ಸ್ಟಾರ್ ಸುವರ್ಣದ ಹೊಸ ಧಾರಾವಾಹಿ 

Ravi Talawar
ವಸುದೇವ ಕುಟುಂಬ ಇದು ಸ್ಟಾರ್ ಸುವರ್ಣದ ಹೊಸ ಧಾರಾವಾಹಿ 
WhatsApp Group Join Now
Telegram Group Join Now
     ವೀಕ್ಷಕರಿಗೆ ವಿಭಿನ್ನ ಕಥೆಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ ‘ವಸುದೇವ ಕುಟುಂಬ’ ಎಂಬ ಹೊಸ ಧಾರಾವಾಹಿಯು ಬಿತ್ತರಗೊಳ್ಳಲು ಸಿದ್ದಗೊಂಡಿದೆ.
     ಕೋರಮಂಗಲ ಟಾಕೀಸ್ ಸಂಸ್ಥೆಯಡಿ ಅನಿಲ್ ಕೋರಮಂಗಲ ‘ವಸುದೇವ ಕುಟುಂಬ’ ನಿರ್ಮಾಣ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಶೀರ್ಷಿಕೆಗೆ ’ಒಂದೇ ಬೇರು, ಕವಲು ನೂರು’ ಎಂಬ ಅರ್ಥಪೂರ್ಣ ಅಡಿಬರಹವಿದೆ.
       ಸೀರಿಯಲ್ ಮುಖ್ಯ ಆಕರ್ಷಣೆ ಎಂದರೆ ಹಿರಿಯ ನಟ ಅವಿನಾಶ್. ಬರೋಬ್ಬರಿ ಮೂವತ್ತು ವರ್ಷಗಳ ನಂತರ ಕಿರುತೆರೆಗೆ  ಸ್ಟಾರ್ ಸುವರ್ಣ ವಾಹಿನಿ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಕುಟುಂಬದ ಯಜಮಾನ ವಸುದೇವ, ಹಾಗೂ ಮುದ್ದಿನ ನಾಲ್ಕು ಹೆಣ್ಣು ಮಕ್ಕಳ ತಂದೆಯಾಗಿ ಅಭಿನಯಿಸುತ್ತಿದ್ದಾರೆ. ಪತ್ನಿಯಾಗಿ ಹಿರಿಯ ನಟಿ ಅಂಜಲಿ. ಪುತ್ರಿಯರಾಗಿ ಭಾವನಾ ಪಾಟೀಲ್, ಚೈತ್ರಾತೋಟದ್, ಬೃಂದಾ ಕಶ್ಯಪ್, ಆರಾಧ್ಯ ಇವರೊಂದಿಗೆ ಹಂಸ, ಭಗತ್, ಆರ್.ಜಿ.ಅನೂಪ ಸೇರಿದಂತೆ ಅನೇಕ ಅನುಭವಿ ಕಲಾವಿದರು ನಟಿಸುತ್ತಿದ್ದಾರೆ.
      ಹಳ್ಳಿಯಲ್ಲಿ ವಸುದೇವನ ಹಿರಿಮಗಳ ಮದುವೆ ಸಿದ್ದತೆ ಸಂಭ್ರಮದಲ್ಲಿದ್ದಾಗ, ಆಕಸ್ಮಿಕವಾಗಿ ಸಂಭವಿಸುವ ಒಂದು ದುರ್ಘಟನೆ ಎಲ್ಲರ ಜೀವನವನ್ನು ತಲೆಕೆಳಗಾಗುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಕಷ್ಟದ ಸಮಯದಲ್ಲಿ ಕಥಾನಾಯಕಿ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ, ಅಕ್ಕ ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ಲುತ್ತಾಳೆ? ತನ್ನ ದುಖ:ವನ್ನು ಮರೆತು ಮನೆಯ ಬದುಕನ್ನು ಮತ್ತೆ ಕಟ್ಟುವಲ್ಲಿ ಅವಳು ಯಶಸ್ವಿಯಾಗುತ್ತಾಳಾ? ಮನೆತನದ ಮಾನ ಗೌರವವನ್ನು ಯಾವ ರೀತಿ ಕಾಪಾಡುತ್ತಾಳೆ ಎಂಬುದು ಕಥೆಯ ಮುಖ್ಯ ಸಾರಾಂಶವಾಗಿದೆ.
       ಇದೇ ಸೆಪ್ಟೆಂಬರ್ 15, ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ
‘ವಸುದೇವ ಕುಟುಂಬ’ ಹೊಸ ಧಾರಾವಾಹಿ  ಪ್ರಸಾರವಾಗಲಿದೆ.
WhatsApp Group Join Now
Telegram Group Join Now
Share This Article