ಬಳ್ಳಾರಿ,ಜು.22.. ಅನುವ್ರತ ಕ್ರಿಯೇಟಿವಿಟಿ ಸ್ಪರ್ಧೆ ೨೦೨೫ ಜುಲೈ ೨ ರಂದು ಶ್ರೀ ವಾಸವಿ ವಿದ್ಯಾಲಯದಲ್ಲಿ ನಡೆದಿದ್ದು,ಈ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ೫ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಮತ್ತು ಬಹುಮಾನಗಳನ್ನು ಪಡೆದು ನಮ್ಮ ಶಾಲೆಗೆ ಗೌರವ ತಂದಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಭಾಷಣ, ಹಾಡುಗಾರಿಕೆ, ಕವನ ರಚನೆ, ಚಿತ್ರ ರಚನೆ, ಪ್ರಬಂಧ ಬರವಣಿಗೆ ಸೇರಿದಂತೆ ಹಲವು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು.
ನಮ್ಮ ಶಾಲೆಯ ೫ನೇ ತರಗತಿಯಿಂದ ೧೦ನೇ ತರಗತಿಯ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಹಲವು ವಿದ್ಯಾರ್ಥಿಗಳು ಬಹುಮಾನಗಳನ್ನು ಗೆದ್ದಿದ್ದು ಮತ್ತು ಕೆಲವು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇದು ನಮ್ಮ ಶಾಲೆಗೆ ಹೆಮ್ಮೆಯ ಕ್ಷಣವಾಗಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಅನುವ್ರತ ಕ್ರಿಯೇಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಯೋಜಕರಿಂದ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಅವರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜೇತರ ಸಾಧನೆ ಶಾಲೆಗೆ ಗೌರವ ತಂದಿದ್ದು, ಶಾಲೆಯ ಎಲ್ಲಾ ಸಿಬ್ಬಂದಿ ಹಾಗೂ ಪಾಲಕರು ಸಂತೋಷ ವ್ಯಕ್ತಪಡಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶ್ರೀವಾಸವಿ ಎಜ್ಯುಕೇಷನ್ ಟ್ರಸ್ಟ್ನ ಕಾರ್ಯದರ್ಶಿಗಳಾದ ಪಿ.ಎನ್. ಸುರೇಶ್, ಅನುವ್ರತ್ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಪಾರಸ್ಮಲ್,ಉಪಾಧ್ಯಾಕ್ಷರಾದ ಮಂಗಲ್ ಚಂದ್, ಸಂಯೋಜಕರಾದ ವಿನೋದ್ ಜೈನ್, ಚಾರ್ಟರ್ಡ್ ಅಕೌಂಟೆAಟ್ ರಾದ ಕೋಮಾಲ್, ಶ್ರೀಕರಣ್, ಶಾಲಾ ಮುಖ್ಯೋಪಾಧ್ಯಾರಾದ ವೀರೇಶ್. ಯು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.
ಶ್ರೀವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪಿ.ಎನ್. ಸುರೇಶ್ ರವರು ವಿಜೇತ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯವೂ ಯಶಸ್ವಿಯಾಗಿ ಬೆಳೆಯಲಿ,ನಮ್ಮ ಮಕ್ಕಳಿಗೆ ಈ ವೇದಿಕೆ ಕಲೆಯ ಮೂಲಕ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಿಕೊಳ್ಳಲು ಸಹಾಯಮಾಡಿದ್ದು ಅತ್ಯಂತ ಶ್ಲಾಘನೀಯ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸುತ್ತವೆ ಎಂದು ಸಂತೋಷ ವ್ಯಕ್ತಪಡಿಸಿದರು.