ಚೀಟಿ ರೂಪದಲ್ಲಿ ವಂಚಿಸುತ್ತಿದ್ದ ವಾಸವಿ ಸ್ವಗೃಹ ಹೋಮ್ ನೀಡ್ ನ ವಿಶ್ವನಾಥ ನಾಪತ್ತೆ

Ravi Talawar
ಚೀಟಿ ರೂಪದಲ್ಲಿ ವಂಚಿಸುತ್ತಿದ್ದ ವಾಸವಿ ಸ್ವಗೃಹ ಹೋಮ್ ನೀಡ್ ನ ವಿಶ್ವನಾಥ ನಾಪತ್ತೆ
WhatsApp Group Join Now
Telegram Group Join Now
ಬಳ್ಳಾರಿ, ಏ.08: ನಗರದ ಗೋಲ್ಡ್ ಸ್ಮಿತ್ ರಸ್ತೆಯ ಕುಂಬಾರ ಓಣಿ ಬಳಿ ವಾಸವಿ ಸ್ವಗೃಹ ಹೋಮ್ ನೀಡ್ ಎಂಬ ಅಂಗಡಿ ತೆರೆದು ಅಲ್ಲಿಗೆ ಬಂದ ಗ್ರಾಹಕರಿಂದ ಚೀಟಿ ರೂಪದಲ್ಲಿ ಹಣ ಪಡೆದು ಮಾಸಿಕ ಶೇ 25 ರಷ್ಟು ಲಾಭ(ಬಡ್ಡಿ) ನೀಡುವುದಾಗಿ ವಂಚಿಸುತ್ತಿದ್ದ ಟಿ.ವಿಶ್ವನಾಥ ಕುಟುಂಬದ ಸಮೇತ ನಿನ್ನೆ ರಾತ್ರಿ ಪರಾರಿಯಾಗಿದ್ದಾನೆ. ಇದರಿಂದ ಈತನಿಗೆ ಹಣಕಟ್ಟಿದ್ದ ನೂರಾರು ಜನ ಇಂದು ಬ್ರೂಸ್ ಪೇಟೆ ಠಾಣೆಗೆ ಬಂದು ದೂರು ಕೊಡಲು ಮುಂದಾಗಿದ್ದರು.ಈ ಪ್ರಕರಣದಲ್ಲಿ ಬ್ರೂಸ್ ಪೇಟೆ ಪೊಲೀಸರು ವಿಶ್ವನಾಥನನ್ನು  ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ನಿನ್ನೆ ಸಂಜೆ ವರೆಗೂ ಆತನ ಬಳಿ ಹೋದ ಗ್ರಾಹಕರಿಗೆ ನಿಮ್ಮ ಹಣ ಎಲ್ಲಿ ಹೋಗಲ್ಲ ಕೊಡುತ್ತೇನೆಂದು ಭರವಸೆ ನೀಡಿ ರಾತ್ರಿ  ನಾನು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಚೀಟಿ ಬರೆದಿಟ್ಟು ಪರಾರಿಯಾಗಿದ್ದಾನೆ.
ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದರು  ಎಂದು  ಕೆಲ ದಿನಗಳ ಹಿಂದೆ ವಾಸವಿ ಸ್ವಗೃಹ ಹೋಮ್ ನೀಡ್ ಅಂಗಡಿಯ ಮಾಲೀಕ ಟಿ.ವಿಶ್ವನಾಥ(58) ನನ್ನು ಪೊಲೀಸರು ಬಂಧಿಸಿ 19,38,500 ರೂ  ಮತ್ತು ಗ್ರಾಹಕರಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗು ವ್ಯವಹಾರಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಂಡಿದ್ದರು.
ಕಳೆದ ಸೆಪ್ಟಂಬರ್ ನಿಂದ, ಹರ್ಬಲ್ ಲೈಫ್, ಕಿರಾಣಿ ಮತ್ತು ಪೆಟ್ರೋಲ್ ಖರೀದಿಸಿದವರಿಗೆ ಮಾತ್ರ ಚೀಡಿ ಕಟ್ಡಿಸಿಕೊಳ್ಳುತ್ತಿದ್ದ.  ಮಂಜೂರು ಮಾಡುವ ಯಾವುದೇ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದ್ದೇಶದಿಂದ, ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡುತ್ತಿದ್ದನಂತೆ ಈ ವಿಶ್ವನಾಥ.ತಾನು ತೆಗೆದುಕೊಳ್ಳುವ ಹಣವನ್ನು ವೀರೇಶ್, ಸಿದ್ದಪ್ಪ, ಸುರೇಶ್, ಬಸವರಾಜ್, ವೆಂಕಟೇಶ್, ಸೂರಜ್ ಎಂಬುವವರಿಂದ ತೆಗೆದುಕೊಳ್ಳುತ್ತಿದ್ದನಂತೆ.ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿ.ಐ. ಟಿ. ಮಹಾಂತೇಶ್ ಮತ್ತು ಪೊಲೀಸ್ ಸಿಬ್ಬಂದಿ ಬಂಧಿಸಿತ್ತು.
ಈ ವಿಷಯತಿಳಿದು ಹಣಕಟ್ಟಿದ ಮಹಿಳೆ ಇಂದು ಠಾಣೆಗೆ ಬಂದು ವಿಶ್ವನಾಥ್ ಒಂದಲ್ಲ ಎರೆಡಲ್ಲ 200 ಕೋಟಿ ರೂ ವಂಚನೆ ಮಾಡಿದ್ದಾನೆಂದು ಆರು ಜನ ಈತನಿಗೆ ಸಪೋಟ್ ಆಗಿದ್ದಾರೆಂದು ದೂರಿದರು.
ಠಾಣಾಧಿಕಾರಿಗಳು ನೀವು ನೀಡುವ ದಾಖಲೆಗಳು ಅಧಿಕೃತವಾದುವುಗಳಲ್ಲ. ಜಿಎಸ್ ಟಿ ನಂಬರ್ ಇಲ್ಲ. ಸೂಕ್ತ ದಾಖಲೆ ನೀಡಿದರೆ ಕ್ರಮ ಜರುಗಿಸಲಿದೆಂದು ಹೇಳಿ‌ಕಳಿಸಿದ್ದಾರೆ.
ಹೆಚ್ಚಿನ ಹಣದ ಆಸೆಗೆ ಸಾವಿರಾರು, ಲಕ್ಷಾಂತರ ರೂ ಕಟ್ಟಿ ಕಳೆದುಕೊಂಡಿರುವ ಜನತೆ ತಲೆ ಮೇಲೆ ಕೈ ಒತ್ತುಕೊಂಡು ವಿಶ್ವನಾಥನ ಬಗ್ಗೆ ಶಪಿಸುತ್ತ  ಮನೆ ಕಡೆ ತೆರಳಿದರು.
WhatsApp Group Join Now
Telegram Group Join Now
Share This Article