ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ವಸತಿ ಪದವಿ ಪೂರ್ವ ಕಾಲೇಜು, ಮತ್ತು ಅಂತರಾಷ್ತ್ರೀಯ ವಸತಿ ಶಾಲೆ ಕವಲಗಿ, ಇಲ್ಲಿ ವಸಂತ ಪಂಚಮಿಯ ಪಾವನದಿನದಂದು ಜ್ಞಾನ, ವಿದ್ಯೆ ಮತ್ತು ಕಲೆಗಳ ಅಧಿದೇವತೆಯಾದ ಸರಸ್ವತಿ ದೇವಿಯ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಹೇಮಂತ್ ಕೃಷ್ಣರವರು ವಸಂತ ಪಂಚಮಿಯು ವಿದ್ಯೆಯ ಮಹತ್ವವನ್ನು ಸ್ಮರಿಸುವ ಹಬ್ಬವಾಗಿದ್ದು, ಇಂದು ಸರಸ್ವತಿ ವಂದನೆಯ ಮೂಲಕ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವ ಸಂಕಲ್ಪ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ಗೊಟ್ಟರು.
ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ದೀಪಾ ಪಿರಡ್ಡಿ ಅವರು ಶ್ಲೋಕ ಪಠಣವನ್ನು ಗೈದರು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಶರ್ಮಿಳಾ ಹೇಮಂತ್ ಶುಭಾಶಂಸನೆಗೈದರು. ಶಾಲಾ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಸನ್ಮಾನ್ಯ ಶ್ರೀ ಬಸನಗೌಡ ಆರ್. ಪಾಟೀಲ್ (ಯತ್ನಾಳ್), ಚೇರ್‌ಮನ್ ನಾಮಿನಿ ಶ್ರೀ ಬಸಯ್ಯ ಹಿರೇಮಠ, ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು


