ಇಂಡಿ: ಇಂಡಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನುದಾನ ರಹಿತ ಶಾಲಾ ಕಾಲೇಜುಗಳ ಸಂಘಟನೆ ಹಾಗೂ ಕರ್ನಾಟಕ ಯುವರಕ್ಷಣಾ ವೇದಿಕೆ ವಿಜಯಪುರ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘನೆಯ ಪದಾಧಿಕಾರಿಗಳು ಸೋಮವಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ಪ್ರತಿಶತ ೬೦ ರಷ್ಟು ಕನ್ನಡ ಭಾಷೆಯನ್ನು ಎಲ್ಲ ಮಹಲಗಳು, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮ ಫಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ೧೯೯೫ ರಿಂದ ಇಲ್ಲಿಯವರೆಗೆ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ನೀಡಿಲ್ಲ. ಸುಮಾರು ವರ್ಷಗಳಿಂದ ದುಡಿಯುತ್ತಿರುವ ಶಿಕ್ಷಕರಿಗೆ ಅನುದಾನಕ್ಕೆ ಒಳಪಡಿಸಿಲ್ಲ ಇದರಿಂದಾಗಿ ತಿವೃ ತೊಂದರೆ ಅನುಭವಿಸಿಸುತ್ತಿದ್ದಾರೆ. ಆದ್ದರಿಂದ ದಯವಿಟ್ಟು ಕೂಡಲೆ ಅನುದಾನ ನೀಡಬೇಕು, ಶಾಲ ನವಿಕರಣ ಸರಳಿಕರಣ ಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಯುವ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಪಾಸೋಡಿ, ಇಂಡಿ ತಾಲೂಕ ಅಧ್ಯಕ್ಷ ವಿಜಯ ರಾಠೋಡ, ಉಪಾಧ್ಯಕ್ಷ ಸುನೀಲ ರಾಠೋಡ, ಮಹಿಳಾ ಜಿಲ್ಲಾಧ್ಯಕ್ಷೆ ಭಾಗ್ಯಶ್ರೀ ನಾಟಿಕಾರ, ಮಹಿಳಾ ಜಿಲ್ಲಾ ಕಾರ್ಯದ್ಯಕ್ಷೆ ದ್ಯಾನೇಶ್ವರಿ ಕೆ, ಸವಿತಾ ಛಲವಾದಿ, ಪು?ಲತಾ ಇಮಾಂದಾರ, ತೈಶಾನ ಸಂಜವಾಡ ಸೇರಿದಂತೆ ಅನೇಕ ಪದಾಧಿಕಾರಿಗಳು ಇದ್ದರು.