ಬೆಳಗಾವಿ:: ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ಬೆಳಗಾವಿ ಹಾಗೂ ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಡಿ. ೨೨ (ರವಿವಾರ) ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ವರೆಗೆ ನಡೆಯಲಿದೆ.
ಅಂದು ಕಾನೂನು ಮತ್ತು ಪ್ರವಾಸೋಧ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಸಚೇತಕರು, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಆಗಮಿಸಲಿದ್ದು, ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿವೃತ್ತ ಅಧೀಕ್ಷಕ ಅಭಿಯಂತರಾದ ರಮೇಶ ಜಂಗ ಅವರು ವಹಿಸಲಿದ್ದು, ಕೆ.ರೇವಣ್ಣ ಉಪಸ್ಥಿತರಿರುವರು. ಭಾಗವತರು ಪ್ರಕಾಶನಗೊಳಿಸಿದ ಡಾ.ರಾಮಕೃಷ್ಣ ಮರಾಠೆ ಅವರು ಬರೆದ ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ ಕೃತಿಯನ್ನು ಸಾಹಿತಿಗಳಾದ ಡಾ.ಸರಜೂ ಕಾಟ್ಕರ್ ಬಿಡುಗಡೆಗೊಳಿಸುವರು. ಈ ಕಾರ್ಯಕ್ರಮದ ಸಾನಿಧ್ಯವನ್ನು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ.ಅಲ್ಲಮಪ್ರಭು ಸ್ವಾಮಿಜಿ ಅವರು ವಹಿಸುವರು.
ಅಂದು ಮಧ್ಯಾಹ್ನ ೧೨ ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು ಬೆಳಗಾವಿ ಅಧಿವೇಶನ ಮತ್ತು ಗಾಂಧೀಜಿ ವಿಷಯವಾಗಿ ಡಾ.ಪಿ.ಜಿ ಕೆಂಪಣ್ಣವರ ಹಾಗೂ ಕನ್ನಡ ರಂಗಭೂಮಿಯಲ್ಲಿ ಗಾಂಧೀಜಿ ವಿಷಯವಾಗಿ ಧಾರವಾಡ ರಂಗಕರ್ಮಿಗಳಾದ ಡಾ. ಪ್ರಕಾಶ ಗರುಡ ಇವರುಗಳು ಮಾತನಾಡಲಿರುವರು. ಪ್ರಗತಿವಾಹಿನಿಯ ಎಂ.ಕೆ.ಹೆಗಡೆ ಇವರು ಪ್ರತಿಕ್ರಿಯೆ ನೀಡಲಿರುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ ವಹಿಸುವರು
ಮದ್ಯಾಹ್ನ ೨.೩೦ ಗಂಟೆಗೆ ಸಾಹಿತಿಗಳಾದ ಬಿ.ಎಸ್ ಗವಿಮಠ ಅವರ ಅಧ್ಯಕ್ಷತೆಯಲ್ಲಿ ರಂಗಗೌರವ ಮತ್ತು ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ಅಥಿತಿಗಳಾಗಿ ವಿಶ್ವಜ್ಯೋತಿ ನಾಟಕ ಮಂಡಳಿಯ ಮಾಲೀಕರಾದ ರಾಜಣ್ಣ ಜೇವರಗಿ, ಸಾಹಿತಿಗಳಾದ ರವಿ ಕೋಟಾರಗಸ್ತಿ, ಬೆಂಗಳೂರು ರಂಗಕರ್ಮಿ ಮತ್ತು ಪ್ರಕಾಶಕರಾದ ಬಿ.ಎಸ್ ವಿದ್ಯಾರಣ್ಯ, ಭಾಗವತರು ಸಂಘಟನೆ ಉಪಾಧ್ಯಕ್ಷರಾದ ಹೆಚ್.ಬಿ. ಚಂದ್ರೇಗೌಡ ಅವರು ಉಪಸ್ಥಿತರಿರುವರು.