ಕುಡುತಿನಿ ಭೂಸಂತ್ರಸ್ಥ ಹೋರಾಟದ ವೇದಿಕೆಯಲ್ಲಿ ವಾಲ್ಮೀಕಿ ಜಯಂತಿ : ಎಂ ತಿಪ್ಪೇಸ್ವಾಮಿ 

Ravi Talawar
ಕುಡುತಿನಿ ಭೂಸಂತ್ರಸ್ಥ ಹೋರಾಟದ ವೇದಿಕೆಯಲ್ಲಿ ವಾಲ್ಮೀಕಿ ಜಯಂತಿ : ಎಂ ತಿಪ್ಪೇಸ್ವಾಮಿ 
WhatsApp Group Join Now
Telegram Group Join Now
ಬಳ್ಳಾರಿ. ಅ. 08.. ಕುಡುತಿನಿ ಭೂ  ಸಂತ್ರಸ್ತರ 1026 ನೇ ದಿನದ ಹೋರಾಟದ ವೇದಿಕೆಯಲ್ಲಿ  ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಭೂ ಸಂತ್ರಸ್ತರು ವೇದಿಕೆಯಲ್ಲಿ ಮಹರ್ಷಿ ವಾಲ್ಮೀಕಿ  ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಅತ್ಯಂತ ಭಕ್ತಿ ಭಾವದಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು.
 ಹೋರಾಟದ ವೇದಿಕೆಯಲ್ಲಿ ರೈತರು ಹಾಗೂ ರೈತ ತಾಯಂದಿರು ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ಎಂ ತಿಪ್ಪೇಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು. ಸಂಪತ್ತು. ಪ್ರಗತಿಪರರು ರೇಣುಕ ರಾಜ ಮಾತನಾಡಿ,  ಮುಖ್ಯಮಂತ್ರಿ ಹಾಗೂ ಬೃಹತ್ ಕೈಗಾರಿಕಾ ಸಚಿವರು ರೈತರೊಂದಿಗೆ ಕೂಡಲೇ ಮಾತುಕತೆ ನಡೆಸಿ ನಮ್ಮ ಸಾವಿರ ಜನಗಳ ಹೋರಾಟಕ್ಕೆ ಬೆಲೆ ನೀಡಬೇಕೆಂದು ಆಗ್ರಹಿಸಿದರು.
 ಈ ಹೋರಾಟದ ವೇದಿಕೆಯಲ್ಲಿ ಸಾಮಿಯಾನ ಕುಮಾರಸ್ವಾಮಿ, ಹೋಳಿಗೆ ಸಿದ್ದಪ್ಪ, ಗುಡದೂರು ಮಹೇಶ್ ಗೌಡ,  ಕಾರೇಗೌಡ,  ನಾಗದೇವ, ಯು ಸ್ವಾಮಿ, ಅಟ್ಟಿ ಪಂಪಾಪತಿ, ಹುಸೇನಿ, ಶಿವಣ್ಣ, ಬಿಳಿ ಬಾಯಪ್ಪ, ಕೊರವರ ಸೋಮಶೇಖರ, ಹೋಳಿಗೆ ನಾಗಪ್ಪ, ಪಾವಗಡ ಕೃಷ್ಣಪ್ಪ, ಹುಸೇನ್ ಸಾಬು, ಸಿದ್ದಪ್ಪ, ಹರಗಿನ ದೋಣಿ ಜಂಬಣ್ಣ,ಪಂಪಣ್ಣ,  ಮಲ್ಯಪ್ಪ, ಶಿವರಾಜ್,  ತಾಯಪ್ಪ,  ರಮೇಶ, ತಿಪ್ಪೇಸ್ವಾಮಿ,  ಹನುಮಯ್ಯ, ಶಂಕ್ರಪ್ಪ. ಈರಣ್ಣ. ರುದ್ರಪ್ಪ. ಕಲಾವಿದರು. ಪ್ರಕಾಶ್,  ಭೀಮಣ್ಣ. ಬನ್ನಿಹಟ್ಟಿ ಪಂಪಣ್ಣ, ಹೋಳಿಗೆ ರಾಮಣ್ಣ,  ಎರಿಸ್ವಾಮಿ,  ಮಹಿಳಾ ಮುಖಂಡರಾಗಿರುವ ದ್ಯಾವಮ್ಮ, ಹುಲಿಗೆಮ್ಮ. ಹೊನ್ನೂರ್ ಬಿ. ಲೋಕಮ್ಮ. ನಾಗಮ್ಮ. ಹುಲಿಗೆಮ್ಮ. ಪದ್ದಮ್ಮ. ಉಪ್ಪಾರ್ ಕರೆಯಮ್ಮ. ದುರ್ಗಮ್ಮ. ಮಲ್ಲಮ್ಮ. ಈಶ್ವರಮ್ಮ. ಹನುಮಕ್ಕ. ನಾಗಮ್ಮ. ಹುಲಿಗೆಮ್ಮ ಮೊದಲಾದವರು  ಭೂ ಸಂತ್ರಸ್ತರ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article