ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Ravi Talawar
ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ
WhatsApp Group Join Now
Telegram Group Join Now
ಬಳ್ಳಾರಿ,ಅ.08..: ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ನಗರದ ವಾಲ್ಮೀಕಿ (ಎಸ್.ಪಿ.ಸರ್ಕಲ್) ವೃತ್ತದ ಬಳಿ ಇರುವ ವಾಲ್ಮೀಕಿ ಪ್ರತಿಮೆಗೆ ಹಾಗೂ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಮೊಟ್ಟಮೊದಲ ಸರ್ವಕಾಲಿಕ ಮೇರು ಕೃತಿ ರಾಮಾಯಣವನ್ನು ಕೊಟ್ಟ ಮಹಾಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ವಿಜೃಂಭಣೆಯಿAದ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ, ಸಂಸ್ಕೃತದಲ್ಲಿ ರಾಮಾಯಣ ರಚಿಸಿದ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ವಾಲ್ಮೀಕಿ ಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಪೂರ್ತೀಯ ನೆಲೆಯಾಗಿದ್ದಾರೆ ಎಂದು ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಮಹಾಪೌರರಾದ  ಮುಲ್ಲಂಗಿ ನಂದೀಶ್, ಡಿಸಿಸಿ ಕಾರ್ಯಾಧ್ಯಕ್ಷ ವಿಷ್ಣು ಭೂಯಾಪಾಟಿ, ಹಿರಿಯ ನಾಯಕ ಮಹಮ್ಮದ್ ಗೌಸ್, ವಿರಸೇನಾ ರೆಡ್ಡಿ, ಡಿಸಿಸಿ ಉಪಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಪೇರಂ ವಿವೇಕ್,  ಕಾರ್ಯಕಾರಿಣಿ ಸಮಿತಿಯ ಸದಸ್ಯ ವೆಂಕಟಲಕ್ಷ್ಮಿ ನಾರಾಯಣ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಕನೇಕಲ್ ಮೆಹಬೂಬ್ ಸಾಬ್, ಎರಕುಲ ಸ್ವಾಮಿ, ಮುರಾರ್ಜಿ ರೆಡ್ಡಿ, ಕಾರ್ಯಕರ್ತರಾದ ಸಮೀರ್,  ಬಿ.ಎ.ಮಲ್ಲೇಶ್ವರಿ, ಲಕ್ಷ್ಮೀದೇವಿ, ಲಿಂಗರಾಜ್, ಸಿ.ಅತ್ತವುಲ್ಲಾ, ಎರ್ರಿಸ್ವಾಮಿ ಇದ್ದರು.
WhatsApp Group Join Now
Telegram Group Join Now
Share This Article