ವಚನಾನಂದ ಬುಕ್ಕಿಂಗ್ ಮಹಾಸ್ವಾಮಿ: ಬಿಜೆಪಿ ಶಾಸಕ ಯತ್ನಾಳ್ ಗೇಲಿ

Ravi Talawar
ವಚನಾನಂದ ಬುಕ್ಕಿಂಗ್ ಮಹಾಸ್ವಾಮಿ: ಬಿಜೆಪಿ ಶಾಸಕ ಯತ್ನಾಳ್ ಗೇಲಿ
WhatsApp Group Join Now
Telegram Group Join Now

ವಿಜಯಪುರ,.17: ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರಮಪೂಜ್ಯ ಬುಕ್ಕಿಂಗ್ ಮಹಾಸ್ವಾಮಿ ಅಂತ ಗೇಲಿ ಮಾಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ್, ಶ್ವಾಸಗುರು ಅಂತಲೂ ಕರೆಸಿಕೊಳ್ಳುವ ವಚನಾನಂದ ಸ್ವಾಮಿಗಳು ಬಿಎಸ್ ಯಡಿಯೂರಪ್ಪ ಮಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಮಠಕ್ಕೆ ಎಷ್ಟೆಷ್ಟು ಅನುದಾನ ತೆಗೆದುಕೊಂಡು ಹೋಗಿದ್ದಾರೆ ಮತ್ತು ಅದರಲ್ಲಿ ಮಠಕ್ಕಾಗಿ ವಿನಿಯೋಗಿಸಿದ ಹಣವೆಷ್ಟು ಮತ್ತು ದುರುಪಯೋಗಪಡಿಸಿಕೊಂಡಿದ್ದು ಎಷ್ಟು ಅನ್ನೋದನ್ನು ಹೇಳಲಿ ಎಂದು ಸವಾಲೆಸೆದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ವಾಮೀಜಿಗೆ ಹೆಲಿಕಾಪ್ಟರ್ ಲ್ಲಿ ಹಾರಾಡುವ ಹಂಬಲ ಹುಟ್ಟಿಕೊಂಡುಬಿಟ್ಟಿತ್ತು, ತಾವು ಆಕಾಶದಲ್ಲಿ ಹಾರಾಡುವುದನ್ನು ಜನ ನೋಡಲಿ ಅಂತ ಅವರು ಆಸೆ ಪಡುತ್ತಿದರು ಎಂದು ಯತ್ನಾಳ್ ಹೇಳಿದರು.

ಯಡಿಯೂರಪ್ಪ ಅವಧಿಯಲ್ಲಿ ಅವರು 10 ಕೋಟಿ ಅನುದಾನ ತೆಗೆದುಕೊಂಡು ಹೋಗಿದ್ದು ಎಲ್ಲರಿಗೂ ಗೊತ್ತಿದೆ, ಸ್ವಾಮೀಜಿಯವರಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ, ಆದರೆ ಯಾಕೆ ಮಾತಾಡುತ್ತಿದ್ದಾರೆ ಅಂದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿದ್ದಾರೆ ಎಂದ ಎಂದು ಯತ್ನಾಳ್ ಹೇಳಿದರು.

WhatsApp Group Join Now
Telegram Group Join Now
Share This Article