ಪ್ರಸಕ್ತ 2026 ರ ಬಜೆಟ್ 2047 ರ ದೇಶ ಅಭಿವೃದ್ಧಿಗೆ ಪೂರಕ
ಬೆಳಗಾವಿ. ಜಿಲ್ಲೆಯ ಮಹತ್ವಕಾಂಕ್ಷೆಯ 70 ಕೀ ಮಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭ ಆಗದಿರಲು ಕರ್ನಾಟಕ ರಾಜ್ಯ ಸರ್ಕಾರದ ನಿರಾಸಕ್ತಿ ಕಾರಣ, ಈ ಬಗ್ಗೆ ಅನೇಕ ಭಾರೀ ರಾಜ್ಯದ ಮಂತ್ರಿಗಳನ್ನು ಹಾಗೂ ಅಧಿಕಾರಿಗಳನ್ನು ಸ್ವತಹ ನಾನೇ ಬೇಟಿ ಆಗಿ ಮನವಿ ಮಾಡಿದ್ದೇನೆ, ಮುಂದೆಯೂ ಬೇಟಿ ಆಗಿ ಈ ಭಾಗಕ್ಕೆ ಆಗುವ ಕೆಲಸಗಳನ್ನು ತ್ವರಿತಗತಿಯಲ್ಲಿ ಕಾಮಗಾರಿ ಮಾಡಲು ರಾಜ್ಯ ಸರ್ಕಾರ ಅನುವು ಮಾಡಿಕೊಡಬೇಕು. ಪಕ್ಷಪಾಥ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರ ರೈಲು ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು.
ಅವರು ಶನಿವಾರದಂದು ನಗರದ ಪೈ ರೆಸಾರ್ಟ್ನಲ್ಲಿ ಆಯೋಜಿಸಲಾಗಿದ್ದ ಬಜೆಟ್ ಹಾಗೂ ರಾಜ್ಯದ ಯೋಜನೆಗಳ ಅನುಷ್ಠಾನ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೆಲವು ದಿನಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋಧೀಜಿ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2026 ನೇ ಸಾಲಿನ ಬಜೆಟನ್ನು ಕೇವಲ ವರ್ಷದ ಬಜೆಟ್ ಆಗಿ ಘೋಷಣೆ ಮಾಡದೇ 2047 ರ ದೇಶ ಸುಧಾರಣೆ ದೃಷ್ಟಿಯಿಂದ ಮಂಡಿಸಲಾಗಿದೆ. ಈ ಬಜೆಟ್ ನಲ್ಲಿ ಎಲ್ಲ ರಾಜ್ಯಗಳಿಗೆ ಅನುಧಾನ ನೀಡಲಾಗಿದೆ, ಕರ್ನಾಟಕ ರಾಜ್ಯಕ್ಕೆ ಬಜೆಟ್ ಕೊಡುಗೆ ಏನೂ ಇಲ್ಲಾ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ, ಅದು ಅದಾರಹಿತ ಆರೋಪ ಅಷ್ಟೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾದ ರೀತಿಯಲ್ಲಿ ಅನುಧಾನ ನೀಡಿದ್ದು ಇದು ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ಹಾಗೂ ನಾಯಕರಿಗೆ ಕಾಮಾಲೆ ಆಗಿರುವ ತರಹ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಪ್ರಸಕ್ತ ಬಜೆಟ್ ನಲ್ಲಿ ರಕ್ಷಣಾ ವಲಯಕ್ಕೆ 7.85 ಲಕ್ಷ ಕೋಟಿ ರೂಪಾಯಿ, ಜಿ ರಾಮ ಜಿ ಯೋಜನೆಗೆ 95,692 ಕೋಟಿ ರೂಪಾಯಿ, ದೇಶದ ಎಲ್ಲ 700 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ದೇಶದ ಕೃಷಿಗೆ 1.63 ಲಕ್ಷ ರೂಪಾಯಿ, ಶಿಕ್ಷಣಕ್ಕೆ 1.39 ಲಕ್ಷ ಕೋಟಿ ರೂಪಾಯಿ, ಮೇಕ್ ಇನ್ ಇಂಡಿಯಾ – ಆತ್ಮ ನಿರ್ಭರ ಭಾರತ ಮೂಲಕ 140 ಕೋಟಿ ಭಾರತೀಯರ ಬೇಡಿಕೆಯನ್ನು ಬಜೆಟ್ ಪ್ರತಿನಿಧಿಸಿದೆ, ಎಮ್ ಎಸ್ ಎಮ್ ಇ ವಲಯಕ್ಕೆ 10,000 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಮೂಲಭೂತ ಸೌಕರ್ಯಗಳಿಗೆ 12.20 ಲಕ್ಷ ಕೋಟಿ ರೂಪಾಯಿ, ಗ್ರಾಮೀಣ ಮೂಲಸೌಕರ್ಯ 1 ಲಕ್ಷ ಕೋಟಿ ಹೂಡಿಕೆ, ಸಾರಿಗೆ 5.98 ಲಕ್ಷ ಕೋಟಿ ರೂಪಾಯಿ ಮೀಸಲು, ರೈಲ್ವೆ 2.93 ಲಕ್ಷ ಕೋಟಿ ರೂಪಾಯಿ ಮೀಸಲು, ಕರ್ನಾಟಕ ರಾಜ್ಯದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ಅನುಧಾನ, ಜೈವಿಕ ಔಷದಿ ತಯಾರಿಕಾ ಕೇಂದ್ರಕ್ಕೆ 10,000 ಕೋಟಿ ರೂಪಾಯಿ ಅನುಧಾನ, ಆಯುರ್ವೇದ ಸಂಸ್ಥೆಗಳ ಸ್ಥಾಪನೆ, ಹೈಸ್ಪಿಡ ರೈಲು ಕಾರಿಡಾರ ಮೂಲಕ ಸಂಪರ್ಕ, 2026-27 ಆರ್ಥಿಕ ಬೆಳವಣಿಗೆ ವೇಗ ಹೆಚ್ಚಳ, ವಿಪ್ಪತ್ತು ನಿರ್ವಹಣೆ ರಾಜ್ಯಕ್ಕೆ 8,559 ಕೋಟಿ ರೂಪಾಯಿ ಹಂಚಿಕೆ, ಅತೀ ಸಣ್ಣ, ಸಣ್ಣ ಉದ್ಯಮಗಳಿಗೆ ಬಜೆಟ್ ಅಡಿಪಾಯ ನೀಡಿದೆ, ಕೈಮಗ್ಗ, ಕರಕುಶಲ ವಸ್ತುಗಳ ಅಭಿವೃದ್ಧಿಗೆ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ಕಂಟೆನರ ಉತ್ಪಾದನೆ ಐದು ವರ್ಷ 10000 ಕೋಟಿ ರೂಪಾಯಿ ಹಂಚಿಕೆ, ಸೆಮಿಕಂಡಕ್ಟರ ಮಿಷನ್ 2.0 40,000 ಕೋಟಿ ರೂ ಹಂಚಿಕೆ, ಮೀನುಗಾರಿಕೆ ಉತ್ತೇಜನಕ್ಕೆ 500 ಜಲಾಶಯಗಳ ಅಭಿವೃದ್ಧಿ, ತೆಂಗು ಉತ್ಪಾದನೆಗೆ ಆದ್ಯತೆ, ತೆಂಗು ಬೆಳೆಯುವ ರಾಜ್ಯಗಳಿಗೆ ಸಹಕಾರ, 15000 ಮಾಧ್ಯಮಿಕ ಶಾಲೆಗಳು, 500 ಕಾಲೇಜುಗಳಲ್ಲಿ ಎ ವಿ ಜಿ ಸಿ ವಿಷಯ ರಚನೆ, ಪ್ರಯೋಗಶಾಲೆ ಸ್ಥಾಪನೆ ಮಾಡಲಾಗುವದು ಎಂದರು.ರಾಜ್ಯದ ಮುಖ್ಯ ಮಂತ್ರಿ ಸಿದ್ರಾಮಯ್ಯ ಎಲ್ಲ ಜನತೆಗೆ ಅನುಧಾನ ನೀಡದೆ, ಕೇವಲ ಅಲ್ಪಸಂಖ್ಯಾತ ಒಂದು ಸಮುಧಾಯಕ್ಕೆ ಪ್ರಾಮುಖ್ಯತೆ ಕೊಟ್ಟು ಉಳಿದ ಸಮುದಾಯಗಳನ್ನು ಅಲ್ಲಗಳೆದು ಅತೀ ಹೆಚ್ಚಿನ ಅವಧಿಯ ಸಿ ಎಮ್ ಆಗಿ ಕೆಲಸ ಮಾಡಿದ್ದು ಸಾಧನೆ ಎಂದರು.ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಗಣನೆಗೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದು, ಬೆಂಗಳೂರು, ಚೈನೈ, ಬೆಂಗಳೂರು ಹೈದರಾಬಾದ, ಬೆಂಗಳೂರು ಪೂನಾ ಇನ್ನೂ ಅನೇಕ ನಗರಗಳಿಗೆ ಹೈಸ್ಪೀಡ್ ರೈಲು ಯೋಜನೆ ಜಾರಿಗೆ ಮಾಡಿದ್ದು, ನಾನು ಈಗ ಕೇವಲ 18 ತಿಂಗಳಿಂದ ಕೇಂದ್ರದ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದು,ರಾಜ್ಯದ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಸದಾ ಸಿದ್ದನಿದ್ದು ಇದಕ್ಕೆ ರಾಜ್ಯ ಸರ್ಕಾರ ಕೈಜೋಡಿಸಬೇಕು. ಮತ್ತು ಆಯಾ ರಾಜ್ಯ ಭಾಷೆಗಳಲ್ಲಿ ರೈಲ್ವೆ ಇಲಾಖೆಯ ಪರೀಕ್ಷೆ ನಡೆಯುತ್ತಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಅರವಿಂದ ಪಾಟೀಲ, ಜಗದೀಶ ಮೆಟಗುಡ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ವಿಧಾನ ಪರಿಷತ ಸಚೇತಕ ಮಹಾಂತೇಶ ಕವಟಗಿಮಠ,ಎಮ್ ಬಿ ಜಿರಲಿ, ರಾಜ್ಯ ಮಾಧ್ಯಮ ಸಲಹೆಗಾರ ಎಫ್ ಎಸ್ ಸಿದ್ದನಗೌಡರ,ಡಾ ರವಿ ಪಾಟೀಲ,ಹಣಮಂತ ಕೊಂಗಾಲಿ, ಮುರುಗೇಂದ್ರಗೌಡ ಪಾಟೀಲ, ಸಚಿನ್ ಕಡಿ, ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು, ಪಧಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.


