ಬಳ್ಳಾರಿ: 20.ಆಧುನಿಕ ತಂತ್ರಜ್ಞಾನ ಯುಗದಲ್ಲಿ ರೈತರು ಕೃಷಿ ಚಟುವಟಿಕೆಗೆ ಯಂತ್ರಗಳನ್ನು ಬಳಸುವುದರಿಂದ ಸಮಯದ ಉಳಿತಾಯ ಮತ್ತು ಅಧಿಕ ಲಾಭವನ್ನು ಗಳಿಸಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ತಿಳಿಸಿದರು.
ಬಳ್ಳಾರಿ ವರವಲಯದ ಕೊಳಗಲ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬಳ್ಳಾರಿ-೨ ಯೋಜನಾ ಕಛೇರಿ ವ್ಯಾಪ್ತಿಯ ಯಂತ್ರೋಪಕಾರಣ ಕೃಷಿ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಕೃಷಿ ಯಂತ್ರೋಪಕರಣಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಬೇಕು. ಹಾರ್ವೇಸ್ಟರ್, ನಡಕಟ್ಟಿ ನ ಕೂರಿಗೆ, ರೈತರಿಗೆ ಕೃಷಿ ಇಲಾಖೆ ಇಂದ ಸಬ್ಸಿಡಿ ದರದಲ್ಲಿ ಸಿಗುವ ಯಂತ್ರೋಪಕಾರಣಗಳು ಟ್ರ್ಯಾಕ್ಟರ್, ಟಿಲ್ಲರ್, ರೋಟವಿಟರ್, ಕಲ್ಟಿವಿಟರ್, ನೇಗಿಲು ಹೀಗೆ ವಿವಿಧ ಯಂತ್ರಗಳನ್ನು ಪಡೆಯುವ ಬಗ್ಗೆ ಹಾಗೂ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡಿದರು.
ಕೊಳಗಲ್ ಗ್ರಾಮದ ರೈತ ಮುಖಂಡ ಎರ್ರೀಸ್ವಾಮಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಬಲೀಕರಣ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರದ ಶ್ರೀಯುತ ಗೋಪಾಲಪ್ಪ, ಮಹಾಂತೇಶ್ ಹಿರೇಮಠ್, ವಲಯದ ಮೇಲ್ವಿಚಾರಕರು ಗಂಗದರ್, ಕೃಷಿ ಮೇಲ್ವಿಚಾರಕರು ವಿನಯ್, ಸ್ಥಳೀಯ ಸೇವಾ ಪ್ರತಿನಿಧಿ ರಾಧಾ, ಕೊಳಗಲ್ ಗ್ರಾಮದ ರೈತರು ಸಂಘ ಸಂಸ್ಥೆಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.