ಮುನವಳ್ಳಿ: ಯಕ್ಕುಂಡಿ ಗ್ರಾಮದಲ್ಲಿ ದಿ.೨೦ ರಿಂದ ಜರಗುವ ಉರುಸ ಅಂಗವಾಗಿ ಬೆಳಗಾವಿ ಜಿಲ್ಲಾ ಪೋಲಿಸ, ರಾಮದುರ್ಗ ಉಪವಿಭಾಗ, ಸವದತ್ತಿ ಪೋಲೀಸ ಠಾಣೆ ಹಾಗೂ ಮುನವಳ್ಳಿ ಉಪಠಾಣೆಯವರ ಶಾಂತಿ ಸಭೆ ಸೋಮವಾರ ಜರುಗಿತು.
ಸವದತ್ತಿ ಸಿ.ಪಿ.ಐ ಧರ್ಮಾಕರ ದುಂಡಾನಟ್ಟಿ ಮಾತನಾಡಿ ಗ್ರಾಮದಲ್ಲಿ ಯಾವುದೆ ದುರ್ಘಟನೆ ಸಂಭವಿಸಿದರೆ ಹಿಂದೂ ಮುಸ್ಲೀಂ ಸಂಘಟನೆಯಲ್ಲಿ ಗಲಾಟೆಗಳು ಉಂಟಾಗುತ್ತವೆ ಕಿಡಗೆಡಿಗಳು ಧರ್ಮದ ಹೆಸರಲ್ಲಿ ಗಲಾಟೆಗಳನ್ನು ಮಾಡುತ್ತಾರೆ ಶಾಂತರಿತಿಯಿಂದ ಊರಸನ್ನು ಮಾಡಿ ಊರಿನ ಹೆಸರು ಉಳಿಸಿ. ಇದು ಮೊಬೈಲ ಯುಗ ವಿಡಿಯೋ, ವ್ಯಾಟ್ಸಪ್ ಪೆಸಬುಕ್ ಕಾಲ ಅಲ್ಲೆ ಕುಳಿತು ನೋಡುತ್ತಾರೆ ಯುವಕರು ಕಮಿಟಿಯವರ ಸಲಹೆ ಮಾರ್ಗದರ್ಶನದಲ್ಲಿ ನಡೆದುಕೊಂಡು ಓಳ್ಳೆಯರಿತಿಯಲ್ಲಿ ಉರಸು ಜರಗಲು ಸಹಕರಿಸಬೇಕು ಶಾಂತರಿತಿಯಿಂದ ಉರುಸು ಜರುಗಲು ನಮ್ಮ ಇಲಾಖೆಯಿಂದ ಕಳೆದ ಬಾರಿಗಿಂತ ಉತ್ತಮ ರೀತಿಯಿಂದ ಬಂದುಬಸ್ತ ನೀಡುತ್ತೇವೆ ರಾಜ್ಯದಲ್ಲಿಯೇ ಹೆಸರು ವಾಸಿಯಾದ ಉರುಸು ಇದು ಎಲ್ಲರೂ ಶಾಂತತೆ ಕಾಯ್ದುಕೊಳ್ಳಿ ಕಮಿಟಿಯಾಗಲಿ ಸಾರ್ವಜನಿಕರಾಗಲಿ ಯುವಕರಾಗಲಿ ನಮಗೆ ಸಹಕಾರ ನೀಡಿ ಎಂದರು.
ಪಿ.ಎಸ್.ಐ ಕಲ್ಮೇಶ ಬನ್ನೂರ ಮಾತನಾಡಿ ಈ ಉರುಸು ರಾಜ್ಯದಲ್ಲಿಯೇ ಬಾವ್ಯಕ್ಯತೆಗೆ ಹೆಸರಾಗಿದೆ ಎಲ್ಲ ಧರ್ಮದವರು ಸೇರಿಕೊಂಡು ವಿಜ್ರಂಬಣೆಯಿಂದ ಆಚರಿಸುತ್ತಿರಿ ಬೇರೆ ಗ್ರಾಮದಲ್ಲಿ ಉರುಸು ನಡೆಬೇಕಾದರೆ ನಿಮ್ಮ ಗ್ರಾಮದ ಉರುಸು ಮಾದರಿಯಾಗಬೇಕು ಗ್ರಾಮಸ್ಥರು ಸ್ವಯಂ ಸೇವಕರು ಸೇರಿಕೊಂಡು ಬೇರೆ ಬೇರೆ ಸ್ಥಳಗಳಿಂದ ಬರುವ ಭಕ್ತರಿಗೆ ಹಾಗೂ ವಾಹನಗಳಿಗೆ ಪಾರ್ಕಿಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಡಬೇಕು ಪೋಲಿಸರಷ್ಟೆ ಜವಾಬ್ದಾರರಲ್ಲ ನಿಮ್ಮ ಸಹಕಾರಿ ನಾವು ಬಯಸುತ್ತೇವೆ ಎಂದರು.
ಶಂಕರಗೌಡ ಪಾಟೀಲ, ಜೈಲಾನಿ ಬಾರಿಗಿಡದ, ಶಂಕರ ಪಾಶ್ಚಾಪೂರ, ಬಸವನಗೌಡ ಪಾಟೀಲ, ನಿಜಾಮ ಬಾರಿಗಿಡದ, ಮುಕ್ತಾರ ಮುಲ್ಲಾ, ಹಜರತ ನಧಾಪ, ಹಸನಸಾಬ ಬಾರಿಗಿಡದ, ಗಂಗಪ್ಪ ಪೂಜೇರ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪೋಲಿಸ ಸಿಬ್ಬಂದಿಗಳು ಉಪಸ್ಥಿತರಿದ್ದರು.ಬಸವರಾಜ ಹೊಂಗಲ ಸ್ವಾಗತಿಸಿದರು, ಎಮ್.ಬಿ.ಬೇಣ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.