ನವದೆಹಲಿ,ಏಪ್ರಿಲ್ 16: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023 ರ ಸೆಪ್ಟೆಂಬರ್ 15 ರಿಂದ 24 ರ ನಡುವೆ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
https://upsc.gov.in/ ವೆಬ್ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಆದಿತ್ಯ ಶ್ರೀವಾಸ್ತವ ಎನ್ನುವರು ದೇಶಕ್ಕೆ ಟಾಪರ್ ಆಗಿದ್ದು. ಅನಿವೇಶ್ ಪ್ರಧಾನ್ ದ್ವಿತೀಯ ಹಾಗೂ ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನಗಳಿಸಿದ್ದಾರೆ. ಒಟ್ಟು 1016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರನ್ನು ಕೇಂದ್ರ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಲೋಕಸೇವ ಆಯೋಗ ತಿಳಿಸಿದೆ.
ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ನಿಮ್ಮ ಆಸಕ್ತಿ, ಶ್ರದ್ಧೆ, ಶ್ರಮದ ಪ್ರತಿಫಲ ನಿಮಗೆ ದಕ್ಕಿದೆ. ನಿಮ್ಮ ಪ್ರಾಮಾಣಿಕ ಸೇವೆಯನ್ನು ಮುಂದಿನ ದಿನಗಳಲ್ಲಿ ದೇಶ ನಿರೀಕ್ಷಿಸುತ್ತದೆ ಎಂದು ಪ್ರಧಾನಿ ಮೋದಿ ಶುಭಕೋರಿದ್ದಾರೆ.