ಕಾಣದ ಕೈಗಳು ವೀರಶೈವ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾ ಬರುತ್ತೀವೆ : ಶ್ರೀಕಂಠ ಚೌಕಿಮಠ

MK HasiruKranti
ಕಾಣದ ಕೈಗಳು ವೀರಶೈವ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾ ಬರುತ್ತೀವೆ : ಶ್ರೀಕಂಠ ಚೌಕಿಮಠ
WhatsApp Group Join Now
Telegram Group Join Now

ಘಟಪ್ರಭಾ: ವೀರಶೈವ ಸಮಾಜವನ್ನು ಇಂದು ನಿನ್ನೆಯಲ್ಲ ಹಲವು ದಶಕಗಳಿಂದ ಒಡೆಯುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಆದರೆ ನೂರು ವರ್ಷಗಳ ಹಿಂದೆ ಗುರು ಕುಮಾರ ಮಹಾಸ್ವಾಮಿಗಳು ದುರುದೃಷ್ಠಿಯಿಟ್ಟುಕೊಂಡು ಕಟ್ಟಿದ ವೀರಶೈವ ಮಹಾಸಭಾ ಹಾಗೂ ಶಿವಯೋಗ ಮಂದಿರದಿಂದ ನಾವೆಲ್ಲರೂ ಒಂದಾಗಿದ್ದೇವೆ ಎಂದು ಅಖಿಲಭಾರತ ವೀರಶೈವ ಮಹಾಸಭಾ ದೆಹಲಿಯ ಅಧ್ಯಕ್ಷರು ಹಾಗೂ ಸುಕುಮಾರ ಶ್ರೀ ಪ್ರಶಸ್ತಿ ಪುರಸ್ಕೃತರು ಆಗಿರುವ ಶ್ರೀಕಂಠ ಚೌಕಿಮಠ ಹೇಳಿದರು.
ಅವರು ಮಂಗಳವಾರ ಸಂಜೆ ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ಮಹೋತ್ಸವದಲ್ಲಿ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು ನೀಡುತ್ತಿರುವ ೯ನೇ ವರ್ಷದ ಸುಕುಮಾರ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ ಕಾಣದ ಕೈಗಳು ವೀರಶೈವ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾ ಬರುತ್ತೀವೆ. ೨೦೧೮ರಲ್ಲಿ ನಮ್ಮ ಸಮಾಜ ಒಡೆದು ಹಂಚಿ ಛಿದ್ರವಾಗುತಿತ್ತು ಆದರೆ ಕುಮಾರ ಮಹಾಸ್ವಾಮಿಗಳು ಅಂದು ಕಟ್ಟಿ ಬೆಳೆಸಿದ ಆಲದ ಮರದಂತಿರುವ ತಾಯಿ ಬೇರು ನಮ್ಮ ಎರಡು ಸಂಸ್ಕೃತಿಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುವಂತೆ ಮಾಡಿದೆ. ಅವರ ಪ್ರಯತ್ನ ಸಫಲವಾಗದೆರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳ ಬಗ್ಗೆ ಇಲ್ಲದ ಅಪಪ್ರಚಾರ ಅವಹೇಳನ ಮಾಡುತ್ತಿದ್ದಾರೆ ಅಂತವರ ವಿರುದ್ಧ ಕಾನೂನು ಹೋರಾಟ ಮಾಡುವ ಸಲುವಾಗಿಯೆ ನಾನು ದೆಹಲಿಯಲ್ಲಿ ಕುಮಾರ ಮಹಾಸ್ವಾಮಿಗಳ ಸೇವಾಸಮಿತಿಯನ್ನು ಸ್ಥಾಪನೆ ಮಾಡಿ ಕಾನೂನು ಹೋರಾಟ ನಡೆಸುತ್ತಿದ್ದೇನೆ. ಇಲ್ಲಿ ತನಕ ೧೨ ಪ್ರಕರಣಗಳನ್ನು ನಾನು ದಾಖಲು ಮಾಡಿ ಅವರನ್ನು ಕಾನೂನು ಕಟ್ಟೆಗೆ ತಂದು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ಅವರೆಲ್ಲರು ಹಿಂಬಾಗಿಲಿನಿಂದ ಓಡಿ ಹೋಗುತ್ತಿದ್ದಾರೆ.
ಕಾರ್ಯಕ್ರಮದ ಸಾನಿದ್ಯವಹಿಸಿರುವ ಹುಬ್ಬಳ್ಳಿ ಮೂರುಸಾವಿರ ಮಠದ ಡಾ|| ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ ಕುಮಾರ ಶಿವಯೋಗಿಗಳ ನಡೆ-ನುಡಿ ಮನಸ್ಸು ಪರಿಶುದ್ಧತೆಯಿಂದ ಕೂಡಿದ್ದು ಅವರು ಈ ಸಮಾಜವನ್ನು ಬೆಳೆಸುವ ಸಲುವಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದರು. ಅವರು ಸ್ಥಾಪಿಸಿದ ಶಿವಯೋಗ ಮಂದಿರವೇ ಇಂದಿನ ಕಾವಿಸಂಕುಲಕ್ಕೆ ಮಾರ್ಗದರ್ಶನ ನೀಡಿ ಸಮಾಜದ ಪ್ರತಿಯೊಂದು ಧಾರ್ಮಿಕ, ಆಧ್ಯಾತ್ಮಿಕ ಸಮಾಜಿಕ ಕಾಯಕದಲ್ಲಿ ಭಾಗಿಯಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅವರ ಹೆಸರಿನಲ್ಲಿ ಘಟಪ್ರಭಾ ಮಠದಲ್ಲಿ ಪ್ರತಿ ವರ್ಷ ನೀಡುತ್ತಿರುವ ರಾಜ್ಯಮಟ್ಟದ ಸುಕುಮಾರ ಶ್ರೀ ಪ್ರಶಸ್ತಿಗೆ ತುಂಬಾ ಗೌರವವಿದೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿರುವ ಹುಕ್ಕೇರಿಯ ಶಿವಬಸವ ಮಹಾಸ್ವಾಮಿಗಳು ಮಾತನಾಡಿ ಇಂದಿನ ಕಾಲದಲ್ಲಿ ನಮಗೆ ಎಷ್ಟು ಭೂಮಿ ಇದೆ ಆ ಭೂಮಿಯಲ್ಲಿ ಎಷ್ಟು ಚೀಲ ಬೆಳೆ ಬೆಳೆದಿದ್ದೇವೆ ಎಂದು ಲೆಕ್ಕ ಮಾಡಲು ಸಹ ಬರುತ್ತಿರಲಿಲ್ಲ. ಆಗ ಸಮಾಜದ ಸಂಜೀವಿನಿಯಾಗಿ ಬಂದಿರುವ ಹಾನಗಲ್ಲ ಕುಮಾರ ಶಿವಯೋಗಿಗಳು ಎಲ್ಲಾ ಮಠ ಮಾನ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಸಮಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗುವಂತೆ ಮಾಡಿರುವುದರಿಂದ ಈ ಸಮಾಜ ಬೆಳೆಯುವಂತೆ ಆಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಯುವ ಮುಖಂಡರಾದ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಅಹಂಕಾರ ಎನ್ನುವುದು ನಮ್ಮ ಅವನತಿ ಮಾಡಿದರೆ, ಭಕ್ತಿ ನಮ್ಮನ್ನ ಕಾಪಾಡುತ್ತದೆ. ಎಂತಹ ಕಷ್ಟಗಳಿದ್ದರು ಜೀವನದಲ್ಲಿ ಭಕ್ತಿ ಬಿಡಬಾರದು ಇಂದಿನ ದಿನಗಳಲ್ಲಿ ಭಕ್ತಿ ಎನ್ನುವುದು ಮಠಮಾನ್ಯಗಳಲ್ಲಿ ಸಿಗುತ್ತದೆ ಯಾರು ಗುರು ಸೇವೆಯನ್ನು ಮಾಡುತ್ತಾರೊ ಅವರಿಗೆ ಯಾವುದೇ ಕಷ್ಟಗಳು ಬರುವುದಿಲ್ಲವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು, ಕವಲಗುಡ್ಡ ಸಿದ್ಧಸಿರಿ ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು, ಉಪನ್ಯಾಸಕರಾದ ವಿರೇಶ ಪಾಟೀಲ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ತಿಪಟೂರು ಷಡಕ್ಷರಿ ಮಠದ ಡಾ|| ರುದ್ರಮುನಿ ಮಹಾಸ್ವಾಮಿಗಳು, ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ ದೇವರು, ಗೋಕಾಕದ ಶೂನ್ಯ ಸಂಪಾದನ ಮಠದ ಬಸವಪ್ರಭು ಮಹಾಸ್ವಾಮಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಿವಕುಮಾರ ದೇವರು ಬಳೂಟುಗಿ, ಶಶಿಕುಮಾರ ದೇವರು ಮೆಳಕುಂದ, ಚನ್ನಬಸವ ದೇವರು ಹೊಳಲು, ಶಿವಮೂರ್ತಿ ಮಹಾಸ್ವಾಮಿಗಳು ಅರಳಿಕಟ್ಟಿ, ಚರಲಿಂಗ ಮಹಾಸ್ವಾಮಿಗಳು ಕಲಬುರ್ಗಿ, ಜೆ.ಜಿ.ಸಹಕಾರಿ ಆಸ್ಪತ್ರೆಯ ನಿರ್ದೇಶಕ ಮಂಡಳಿಯ ಸದಸ್ಯರು, ಸ್ಥಳೀಯ ಮುಖಂಡರುಉಪಸ್ಥಿತರಿಇದ್ದರು.
ಇದೇ ಸಂದರ್ಭದಲ್ಲಿ ವಿಜಯಕರ್ನಾಟಕ ಬೆಳಗವಿ ಅವೃತ್ತಿಯ ಸ್ಥಾನಿಕ ಸಂಪಾದಕರಾದ ಸುರೇಶ.ಕೆ ಇವರಿಗೆ ಗೌರವ ಶ್ರೀರಕ್ಷೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಸಂಗೀತ ಪ್ರವೀಣೆ ಕುಮಾರಿ.ದಿಯಾ ಹೆಗಡೆಯಿಂದ ಸಂಗೀತ ಸಂಜೆ ನಡೆಯಿತು.

ಪೋಟೋ: ೧ಜಿಪಿಬಿ೧
ಘಟಪ್ರಭಾ: ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ನವದೆಹಲಿಯ ಶ್ರೀಕಂಠ ಚೌಕಿಮಠರವರಿಗೆ ಸುಮಾರ ಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು.

WhatsApp Group Join Now
Telegram Group Join Now
Share This Article