ಸಿಎಂಗೆ ಶೋಕಾಸ್ ನೋಟೀಸ್ ನೀಡಿದ್ದನ್ನು ವಿರೋಧಿಸಿ ಶೋಷಿತ ಸಮುದಾಯಗಳ ಒಕ್ಕೂಟ ರಾಜಭವನ ಚಲೋ ಎಚ್ಚರಿಕೆ!

Ravi Talawar
ಸಿಎಂಗೆ ಶೋಕಾಸ್ ನೋಟೀಸ್ ನೀಡಿದ್ದನ್ನು ವಿರೋಧಿಸಿ ಶೋಷಿತ ಸಮುದಾಯಗಳ ಒಕ್ಕೂಟ ರಾಜಭವನ ಚಲೋ ಎಚ್ಚರಿಕೆ!
WhatsApp Group Join Now
Telegram Group Join Now

ಬೆಂಗಳೂರು: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ, ಶೋಕಾಸ್ ನೀಡಿ ಅವರನ್ನು ವಿಚಲಿತಗೊಳಿಸುತ್ತಿದ್ದಾರೆ. ಹೀಗಾಗಿ ರಾಜ್ಯಪಾಲ ಥಾವರ್‌ಚಂದ್ ಅವರು ಕೂಡಲೇ ಈ ಗೊಂದಲಕ್ಕೆ ತಾರ್ಕಿಕ ಅಂತ್ಯ ನೀಡಿ ಸಿದ್ದರಾಮಯ್ಯ ಅವರು ಪ್ರವಾಹ ಸ್ಥಿತಿ ನಿರ್ವಹಣೆ ಕಡೆಗೆ ಹೆಚ್ಚಿನ ಗಮನ ನೀಡಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ರಾಜ್ಯಪಾಲರ ಕ್ರಮ ಖಂಡಿಸಿ ಶೀಘ್ರವೇ ರಾಜಭವನ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಎಚ್ಚರಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಚಂದ್ರಪ್ಪ ಯಾರೋ ಒಬ್ಬ ದೂರು ಕೊಟ್ಟ ತಕ್ಷಣ ಕೂಲಂಕಷವಾಗಿ ವಿಚಾರಿಸದೇ ನೇರವಾಗಿ ನೋಟಿಸ್ ನೀಡಿರುವ ರಾಜ್ಯಪಾಲರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಹೀಗಾಗಿ ಕೂಡಲೇ ಈ ದ್ವಂದ್ವಕ್ಕೆ ಸೂಕ್ತ ನಿರ್ಣಯ ಕೈಗೊಂಡು ಈ ವಿಚಾರವನ್ನು ಶಮನಗೊಳಿಸಬೇಕು. ಮನವಿಗೆ ಮಣಿಯದೇ ಹೋದರೇ ಜಿಲ್ಲೆ ಜಿಲ್ಲೆಗಳಲ್ಲಿಯೂ ತೀವ್ರವಾಗಿ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಹೇಳಿದ್ದಾರೆ. ಅನಗತ್ಯವಾಗಿ ದೂರಬೇಡಿ, ಆರೋಪಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೂ ಪ್ರಾಮಾಣಿಕ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿರುವುದು, ನೋಟೀಸ್ ನೀಡಿರುವುದನ್ನು ಶೋಷಿತ ಸಮುದಾಯ ಖಂಡಿಸುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಕೈಗೊಂಡಿರು ಈ ಪಾದಯಾತ್ರೆ ಜನರ ಒಳತಿಗಾಗಿ ಅಲ್ಲ ಅವರ ರಾಜಕೀಯ ಲಾಭಕ್ಕಾಗಿ ಹಾಗಾಗಿ ಇದನ್ನು ಪಾದಯಾತ್ರೆ ಅನ್ನುವುದಕ್ಕಿಂತ ಪಾಪಯಾತ್ರೆ ಎನ್ನಬಹುದು ಎಂದು ಒಕ್ಕೂಟದ ಬಿ.ಟಿ.ಲಲಿತಾನಾಯಕ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಜಯದೇವ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article