ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Ravi Talawar
ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
WhatsApp Group Join Now
Telegram Group Join Now

ನವದೆಹಲಿ, ಸೆಪ್ಟೆಂಬರ್ 4: ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ದೆಹಲಿಯಲ್ಲಿ ಸೆಪ್ಟೆಂಬರ್ 11ರಿಂದ 13ರ ವರೆಗೆ ನಡೆಯಲಿರುವ ಗ್ರೀನ್​ ಹೈಡ್ರೋಜನ್​ ಮಿಷನ್​​​​ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರೀನ್ ಹೈಡ್ರೋಜನ್​ ಹಬ್​​ನಿಂದ ಸುಸ್ಥಿರ ಭವಿಷ್ಯ ನಿರ್ಮಾಣ ಸಾಧ್ಯ. ಭೂಮಂಡಲ ಸುರಕ್ಷತೆ ವಿಚಾರದಲ್ಲಿ ಭಾರತ ಜಾಗತಿಕ ನಾಯಕನಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಂತೆ ಭಾರತವೂ ಹೊಸ ಆವಿಷ್ಕಾರ ಶುರುಮಾಡಿದೆ ಎಂದರು.

ಗ್ರೀನ್​ ಹೈಡ್ರೋಜನ್​ ಮಿಷನ್​​​​ ಅಂತಾರಾಷ್ಟ್ರೀಯ ಸಮ್ಮೇಳನದ ಉತ್ಪನ್ನ ಮತ್ತು ತಂತ್ರಜ್ಞಾನದ ಪ್ರದರ್ಶನದಲ್ಲಿ 120 ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. 150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಿಕರು ಭಾಗವಹಿಸಲಿದ್ದಾರೆ.

ಗ್ರೀನ್​ ಹೈಡ್ರೋಜನ್ ಸಂಬಂಧ ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ನೆದರ್ಲ್ಯಾಂಡ್ಸ್ ಬಗ್ಗೆ ಅಧಿವೇಶನಗಳಲ್ಲಿ ಚರ್ಚೆ ನಡೆಯಲಿದೆ.

WhatsApp Group Join Now
Telegram Group Join Now
Share This Article