ನೇಹಾ ಮತಾಂತರಕ್ಕೆ ಫಯಾಜ್ ಯತ್ನ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ

Ravi Talawar
ನೇಹಾ ಮತಾಂತರಕ್ಕೆ ಫಯಾಜ್ ಯತ್ನ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ
WhatsApp Group Join Now
Telegram Group Join Now

ಹುಬ್ಬಳ್ಳಿ, ಏಪ್ರಿಲ್ 25: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ  ಅವರನ್ನು ಮತಾಂತರ ಮಾಡಲು ಕೊಲೆ ಆರೋಪಿ ಫಯಾಜ್ ಯತ್ನಿಸಿದ್ದ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದು, ಹಿಗಾಗಿ ಆ ಆಯಾಮದಿಂದಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ  ಮಾತನಾಡಿದ ಅವರು, ನೇಹಾ ಮತಾಂತರ‌ ಮಾಡಲು ಫಯಾಜ್ ಯತ್ನಿಸಿದ್ದ. ಈ ಬಗ್ಗೆ ನೇಹಾ ತಂದೆ ನಿರಂಜನ ಹಿರೇಮಠ ಕೂಡ ಆರೋಪ ಮಾಡಿದ್ದಾರೆ. ನೇಹಾ ಕೊಲೆ ಕೇಸ್ ಲವ್ ಅ್ಯಂಗಲ್​​ನಲ್ಲಿಯೇ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ್ದು ದ್ವಂದ್ವ ನಿಲುವು ಅನ್ನೋದಕ್ಕೆ ನೇಹಾ ಹಿರೇಮಠ ಪ್ರಕರಣವೂ ಒಂದು. ನೇಹಾ ತಂದೆ ನಿರಂಜನ ನೀವೇ ನ್ಯಾಯ ಕೊಡಿಸಬೇಕು ಅಂದಿದ್ದರು. ಹೀಗಾಗಿ ನಾವು ಸಂವೇದಾನಶೀಲದಿಂದ ಹೋರಾಟ ಮಾಡಿದೆವು. ಕಾಂಗ್ರೆಸ್ ಪಕ್ಷದವರು ಅಸಭ್ಯ, ಅಸಡ್ಡೆಯಿಂದ ಮಾತನಾಡಿದರು. ‘ಹೇ ಅದೇನ್ ಬಿಡ್ರೀ’ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಜನರ ಜೀವದ ಜೊತೆ ಚೆಲ್ಲಾಟ ಆಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಇವರ ಡಬಲ್ ಸ್ಟ್ಯಾಂಡರ್ಡ್ ಎಂದು ಜೋಶಿ ಕಿಡಿಕಾರಿದರು.

ಕರ್ನಾಟಕದಲ್ಲಿ ಮುಸ್ಲಿಮರಿಗೆ ಯಾಕೆ ಧರ್ಮಾಧಾರಿತ ಮೀಸಲಾತಿ ಕೊಟ್ಟಿದೀರಿ ಎಂದು ಕಾಂಗ್ರೆಸ್​ ಪಕ್ಷವನ್ನು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಹಿಂದುಳಿದ ದಲಿತರ, ಮೀಸಲಾತಿಯನ್ನು ಮುಸ್ಲಿಮರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕಕ್ಕೆ ಕೊಟ್ಟವರು ನೀವೇ, ಕರ್ನಾಟಕಕ್ಕೆ ನೀವು ವಸೂಲಿಗೆ ಬರುತ್ತೀರಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

ಈ ಮಧ್ಯೆ ನೇಹಾ ಹತ್ಯೆಗೆ ಆರೋಪಿ ಫಯಾಜ್ ಒಂದು ವಾರದಿಂದ ಸಂಚು ಹೂಡಿದ್ದ ಮತ್ತು ಸಿದ್ಧತೆ ನಡೆಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಮಾಡುವ ಕೆಲವು ದಿನಗಳ ಮುನ್ನ ನೇಹಾ ಹಿರೇಮಠ ಮನೆ ಬಳಿಯೇ ಫಯಾಜ್​​ ಓಡಾಡಿದ್ದಾನೆ. ಹತ್ಯೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ ಎಂಬ ವಿಚಾರವೂ ಬೆಳಕಿಗೆ‌ ಬಂದಿದೆ.

 

WhatsApp Group Join Now
Telegram Group Join Now
Share This Article