ಬೆಂಗಳೂರು: ಪ್ರತಿ ಬಾರಿ ಬಿಗ್ ಬಜೆಟ್ ಸಿನಿಮಾಗಳು ಬರುವಾಗಲೂ ದುಬಾರಿ ಟಿಕೆಟ್ ದರ ನಿಗದಿ ಮಾಡಲಾಗುತ್ತದೆ. ಅದರಲ್ಲೂ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗುತ್ತವೆ ಎಂದರೆ ಟಿಕೆಟ್ ದರ 500ರಿಂದ ಆರಂಭ ಆಗಿ 1000 ರೂಪಾಯಿ ತಲುಪಿದ ಉದಾಹರಣೆ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತರೋದಾಗಿ ಹೇಳಿತ್ತು. ಸೆಪ್ಟೆಂಬರ್ 12ರಿಂದ ಈ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದಕ್ಕೆ ಕೆಲವು ಷರತ್ತುಗಳು ಕೂಡ ಇರಲಿವೆ.
ಹೊಸ ಆದೇಶವು ಇಂದಿನಿಂದಲೇ ಅನ್ವಯ ಆಗಲಿದೆ. ಇದರ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಆಗಲಿದೆ. ಇದು ಪ್ರೇಕ್ಷಕ ನಿಟ್ಟುಸಿರು ಬಿಡುವಂತೆ ಮಾಡಿದೆ.