ದಾಖಲೆ ಇಲ್ಲದ ರೂ. ೫.೪೫ ಲಕ್ಷ ಹಣ ವಶಕ್ಕೆ..!

Hasiru Kranti
ದಾಖಲೆ ಇಲ್ಲದ ರೂ. ೫.೪೫ ಲಕ್ಷ ಹಣ ವಶಕ್ಕೆ..!
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 4588; AI_Scene: (-1, -1); aec_lux: 43.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 45;
WhatsApp Group Join Now
Telegram Group Join Now
ಕಾಗವಾಡ: ಪಟ್ಟಣ ಕಾಗವಾಡ-ಮಿರಜ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕಾರಿನಲ್ಲಿ ಅನಧಿಕೃತ ಸುಮಾರು ೫.೪೫ ರೂ. ಲಕ್ಷ ಹಣವನ್ನು ಕಾಗವಾಡ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಗವಾಡ ಪಟ್ಟಣದಲ್ಲಿ ರಾತ್ರಿ ಗಸ್ತಿನಲ್ಲಿ ಇದ್ದ ಪಿಎಸ್‌ಐ ಎಂ.ಬಿ. ಬಿರಾದರ ಹಾಗೂ ಸಿಬ್ಬಂದಿ ಅನುಮಾನದಿಂದ ತಿರುಗಾಡುತ್ತಿದ್ದ ಹೋಂಡಾ ವೆರ್ನಾ ಕಾರ್ ನಂ. ಎಮ್‌ಎಚ್-೧೨-ಪಿಟಿ-೫೭೦೦ ವಾಹನ ತಪಾಸಣೆ ಮಾಡಲಾಗಿ ಕಾರ್ ಮಾಲೀಕರು ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದು, ಹಣದ ಸಮೇತವಾಗಿ ಕಾರು ಹಾಗೂ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು, ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಈ ವೇಳೆ ಸಾಹಾಯಕ ಚುನಾವಣಾಧಿಕಾರಿ ಬಸಪ್ಪ ಪೂಜಾರಿ, ತಹಶಿಲ್ದಾರ ಎಸ್.ಬಿ. ಇಂಗಳೆ ಸೇರಿದಂತೆ ಎಫ್‌ಎಸ್‌ಟಿ ತಂಡದ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article