ಭೂಗತ ಪಾತಕಿ ಛೋಟಾ ರಾಜನ್ ಚಿತ್ರ 9 ವರ್ಷಗಳ ಬಳಿಕ ಹೊರಬಿದ್ದಿದೆ!

Ravi Talawar
ಭೂಗತ ಪಾತಕಿ ಛೋಟಾ ರಾಜನ್ ಚಿತ್ರ 9 ವರ್ಷಗಳ ಬಳಿಕ ಹೊರಬಿದ್ದಿದೆ!
WhatsApp Group Join Now
Telegram Group Join Now

ದೆಹಲಿ, ಏಪ್ರಿಲ್​ 22: ದೆಹಲಿಯ ತಿಹಾರ್ ಜೈಲಿ ಪಾಲಾಗಿ 9 ವರ್ಷಗಳ ಬಳಿಕ ಮೊದಲ ಬಾರಿಗೆ ಭೂಗತ ಪಾತಕಿ ಛೋಟಾ ರಾಜನ್ ಚಿತ್ರ ಹೊರಬಿದ್ದಿದೆ.

ಈ ಚಿತ್ರಗಳಲ್ಲಿ ಛೋಟಾ ರಾಜನ್ ಸಂಪೂರ್ಣವಾಗಿ ಆರೋಗ್ಯವಂತನಾಗಿ ಕಾಣುತ್ತಾನೆ. ಕಳೆದ 9 ವರ್ಷಗಳಲ್ಲಿ ಛೋಟಾ ರಾಜನ್ ಅವರ ಇತ್ತೀಚಿನ ಚಿತ್ರಗಳಾಗಿವೆ. ಛೋಟಾ ರಾಜನ್ ಸಾವಿನ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಾಗಲೇ ಈ ಫೋಟೋ ಹೊರ ಬಿದ್ದಿದೆ. ಛೋಟಾ ರಾಜನ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎನ್ನುವ ಗುಸುಗುಸು ಹಬ್ಬಿತ್ತು.

ದಾವೂದ್ ಇಬ್ರಾಹಿಂನ ಶತ್ರು ಛೋಟಾ ರಾಜನ್ 2015 ರಿಂದ ತಿಹಾರ್ ಜೈಲು ನಂಬರ್ 2 ನಲ್ಲಿದ್ದಾನೆ. ಈ ಜೈಲು ಅತ್ಯಂತ ಹೆಚ್ಚಿನ ಭದ್ರತೆಯನ್ನು ಹೊಂದಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಛೋಟಾ ರಾಜನ್ ಅವರ ಫೋಟೋ 2021 ರದ್ದಾಗಿದೆ. ಏಪ್ರಿಲ್ 2021 ರಲ್ಲಿ, ಛೋಟಾ ರಾಜನ್​ಗೆ ಕರೊನಾ ಪಾಸಿಟಿವ್  ಆಗಿತ್ತು, ಹಾಗೂ ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ದಾಖಲಾಗಿದ್ದರು.

ಮೊಹಮ್ಮದ್ ಶಹಾಬುದ್ದೀನ್ ಸಾವಿನ ನಂತರ, ಛೋಟಾ ರಾಜನ್ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಆದಾಗ್ಯೂ, ಈ ಬಗ್ಗೆ ಅಧಿಕೃತವಾಗಿ ಯಾವ ವರದಿಯೂ ಇರಲಿಲ್ಲ ಇದೀಗ ಛೋಟಾ ರಾಜನ್ ಅವರ ಇತ್ತೀಚಿನ ಚಿತ್ರವು ಅವರ ಸಾವಿನ ಸುದ್ದಿ ನಿಜವಲ್ಲ ಎಂದು ಸ್ಪಷ್ಟಪಡಿಸಿದೆ.

ಛೋಟಾ ರಾಜನ್ ಮತ್ತು ದಾವೂದ್ ಇಬ್ರಾಹಿಂ 1993 ರಲ್ಲಿ ಬೇರ್ಪಟ್ಟರು. 1993ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಒಂದು ವರ್ಷದ ನಂತರ, ಅಂದರೆ 1994 ರಲ್ಲಿ, ಛೋಟಾ ರಾಜನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಯಿತು. ಇದರ ನಂತರ, ರಾಜನ್ ತನ್ನ ಡಿ ಕಂಪನಿ ವಿರುದ್ಧ ತನಿಖಾ ಸಂಸ್ಥೆಗೆ ಸಹಾಯ ಮಾಡುತ್ತಿದ್ದಾನೆ ಎಂಬ ಊಹಾಪೋಹಗಳು ಪ್ರಾರಂಭವಾದವು.

ಛೋಟಾ ರಾಜನ್ 2015 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿಸಲಾಯಿತು, ಅವರು ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದಿದ್ದ. ರಾಜನ್ ಮೋಹನ್ ಕುಮಾರ್ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ.

WhatsApp Group Join Now
Telegram Group Join Now
Share This Article