*ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ ನಬಿನ*
ದೇಷ್ಯಾದ್ಯಂತ ಅರಳಲಿದೆ ಕಮಲ: ಸುಭಾಷ ಪಾಟೀಲ
ಬೆಳಗಾವಿ.ಯುವ, ಚುರುಕು ಹಾಗೂ ದೂರದೃಷ್ಟಿಯ ನಾಯಕತ್ವದೊಂದಿಗೆ ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷವನ್ನು ಹೊಸ ಶಿಖರಗಳಿಗೆ ಕೊಂಡೊಯ್ಯಲಿದ್ದಾರೆ.
ಭಾರತದ ಸಂಸ್ಕೃತಿ, ಪರಂಪರೆ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಆಧಾರವಾಗಿಸಿಕೊಂಡು, ಅವರ ಸಮರ್ಥ ನಾಯಕತ್ವವು ಪ್ರತಿಯೊಬ್ಬ ಕಾರ್ಯಕರ್ತನಲ್ಲಿಯೂ ಹೊಸ ಶಕ್ತಿ ಮತ್ತು ಉತ್ಸಾಹ ತುಂಬಲಿದೆ. ಎಲ್ಲ ರಾಜ್ಯಗಳಲ್ಲೂ ಪಕ್ಷ ಅಧಿಕಾರಕ್ಕೆ ಬಂದು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಅಂತ್ಯೋದಯದ ಸಂದೇಶವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಿದ್ದಾರೆ. ನಿತಿನ ನಬಿನ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷ ಪ್ರತಿಯೊಬ್ಬ ಭಾರತೀಯನ ಪಕ್ಷವಾಗಿ, ಏಕ ಭಾರತ–ಶ್ರೇಷ್ಠ ಭಾರತ ಎಂಬ ಸಂಕಲ್ಪದೊಂದಿಗೆ ಬಿಜೆಪಿ ಇನ್ನಷ್ಟು ಬಲವಾಗಿ ಮುನ್ನಡೆಯಲಿದೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


