ಬಳ್ಳಾರಿ ಜುಲೈ 19 : ನಗರದ ಬಂಡಿಹಟ್ಟಿ ಪ್ರದೇಶದ ಸಿದ್ದರಾಮೇಶ್ವರ ಕಾಲೋನಿ, 2ನೇ ಅಡ್ಡರಸ್ತೆ, 29 ನೇವಾರ್ಡ್ ಪ್ರದೇಶದಲ್ಲಿ ಅತ್ಯಂತ ಸುಸಜ್ಜಿತವಾಗಿದ್ದ ಸಿಸಿ ರಸ್ತೆಯನ್ನು ಒಡೆದು ಹಾಕಿ ಅವೈಜ್ಞಾನಿಕವಾಗಿ ತೆರೆದ ಚರಂಡಿಯನ್ನು ನಿರ್ಮಿಸುತ್ತಿದ್ದಾರೆ ಇದರಿಂದ ಈ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂದು ಬಂಡಿಹಟ್ಟಿ ಪ್ರದೇಶದ ಸಿದ್ದರಾಮೇಶ್ವರ ಕಾಲೋನಿಯ ಸಾರ್ವಜನಿಕರು ಮಹಾನಗರ ಪಾಲಿಕೆ ವಲಯ ಮೂರು ಕಚೇರಿ ಆಯುಕ್ತರಿಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಇಂದು ಪಾಲಿಕೆ ಆಯುಕ್ತರಿಗೆ ಅರ್ಜಿಯನ್ನು ಸಲ್ಲಿಸಿದ ಸಾರ್ವಜನಿಕರು,, ಈ ರಸ್ತೆ ಈಗಾಗಲೇ ಎಂಟರಿಂದ 10 ಅಡಿ ಇದ್ದು ಅತ್ಯಂತ ಕಿರಿದಾಗಿದೆ, ಸುಮಾರು ಸಾವಿರಾರು ಮಂದಿ ದಿನನಿತ್ಯ ಈ ರಸ್ತೆಯಲ್ಲಿ ಓಡಾಡುತ್ತಾರೆ , ಸಿದ್ಧರಾಮೇಶ್ವರ ಕಾಲೋನಿಯ ಸಾರ್ವಜನಿಕರಿಗೆ ಓಡಾಡಲು ಇದೇ ಮುಖ್ಯ ರಸ್ತೆ ಆಗಿರುತ್ತದೆ,, ಜೊತೆಗೆ ಪ್ರತಿನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನ ಓಡಾಡುತ್ತಾರೆ ಓಡಾಡುವ ಸಂದರ್ಭದಲ್ಲಿ ಈಗಲೇ ತೊಂದರೆಯನ್ನು ಅನುಭವಿಸುತ್ತಿದ್ದಾರೆ,, ಅದರಲ್ಲಿ ಮತ್ತೆ ತೆರೆದ ಚರಂಡಿಯನ್ನು ನಿರ್ಮಿಸಿದಲ್ಲಿ ರಸ್ತೆ ಇನ್ನೂ ಚಿಕ್ಕದಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲಿದೆ. ಕಾರಣ ಕೂಡಲೇ ಈ ಅವಜ್ಞಾನಿಕವಾದ ತೆರೆದ ಚರಂಡಿ ನಿರ್ಮಾಣವನ್ನು ನಿಲ್ಲಿಸಬೇಕೆಂದು ಸಾರ್ವಜನಿಕರು ಆಯ್ತು ರಿಗೆ ಮನವಿ ಮಾಡಿದ್ದಾರೆ.