ಅಥಣಿ. ಇಲ್ಲಿನ ಆರೂಢಜ್ಯೋತಿ ಪಟ್ಟಣ ಸಹಕಾರ ಬ್ಯಾಂಕ ನಿ. ಅಥಣಿ ಇದರ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯ ಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ಕ್ಷೇತ್ರದಿಂದ ಗುರುಬಸು ಮುರಘೆಪ್ಪ ತೆವರಮನಿ, ರಾಮಗೌಡ ಅಲಗೌಡ. ಗುಮತಾಜ, ಅಶೋಕ ಭೀಮಪ್ಪ ನಾಯಿಕ, ಸತೀಶ ಹಣಮಂತ ಶೇಡಶ್ಯಾಳ, ಯಂಕಪ್ಪ ಗೋವಿಂದಪ್ಪ ಖೋತ, ಮಹಾದೇವ ಅಲ್ಲಪ್ಪ ಕುಳಲಿ, ಪ್ರಭಾಕರ ಚಂದ್ರಶೇಖರ ಹಂಜಿ, ಸಂಜಯ ಶಿವಲಿಂಗಪ್ಪ ನಾಯಿಕ, ಅಭಿಜಿತ್ ಮಲ್ಲಿಕಾರ್ಜುನ ಮೆಣಸಿ ಮತ್ತು ಹಿಂದುಳಿದ ಅ ವರ್ಗದಿಂದ ತಮ್ಮಣ್ಣ ರಾಮಪ್ಪ ರಭಕವಿ, ಹಿಂದುಳಿದ ಬ ವರ್ಗದಿಂದ ಸುನೀಲ ಬಸಗೊಂಡ ನಾಯಿಕ, ಮಹಿಳಾ ವರ್ಗದಿಂದ ಶ್ರೀಮತಿ ಗೀತಾ ಶಂಕರ ಸಂಕ್ರಟ್ಟಿ, ಶ್ರೀಮತಿ ಶಾರದಾ ಹೊನಗೌಡ ಪಾಟೀಲ, ಪರಿಶಿಷ್ಟ ಜಾತಿಯಿಂದ ಶ್ರೀಮತಿ ಇಂದಿರಾ ಶಿವಚಂದ್ರ ಡಾಲೆ, ಪರಿಶಿಷ್ಟ ಪಂಗಡದಿಂದ ಶಿದರಾಯ ಹಣಮಂತ ನಾಯಿಕ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಆರ್ ಎನ್ ನೂಲಿ ಕಾರ್ಯನಿರ್ವಹಿಸಿದ್ದರು.ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಾದ ಸಿದ್ದು ಶಿರಗೂರ ಉಪಸ್ಥಿತರಿದ್ದರು.