ತೊಗಲಗೊಂಬೆ ಆಟ ಉಳಿಸುವಲ್ಲಿ ಉತ್ತಮ ಪ್ರಯತ್ನ: ಉಮಾದೇವಿ

Ravi Talawar
ತೊಗಲಗೊಂಬೆ ಆಟ ಉಳಿಸುವಲ್ಲಿ ಉತ್ತಮ ಪ್ರಯತ್ನ: ಉಮಾದೇವಿ
WhatsApp Group Join Now
Telegram Group Join Now
ಬಳ್ಳಾರಿ:  ಜು 25  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾವಂಬಾವಿಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿAದ “ಬಾ ಮರಳಿ… ಶಾಲೆಗೆ” ಎಂಬ ತೊಗಲುಗೊಂಬೆ ಯಾಟದ ಮೂಲಕ ಅತ್ಯತ್ತುಮವಾಗಿ ಪ್ರದರ್ಶನೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಆರ್. ಉಮಾದೇವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ ರಂಗಕಲೆಯ ಪ್ರಕಾರಗಳಲ್ಲಿ ತೊಗಲುಗೊಂಬೆಯಾಟವು ಸಹ ಒಂದಾಗಿದೆ. ಅಳಿವಿನ ಹಂಚಿನಲ್ಲಿರುವ ಈ ತೊಂಗಲುಗೊAಬೆಯಾಟವನ್ನು ಉಳಿಸಲು ಕೆ. ಹೊನ್ನೂರಸ್ವಾಮಿ ರವರು ಉತ್ತಮ ಪ್ರಯತ್ನಮಾಡಿದ್ದಾರೆ. ಶಿಕ್ಷಣ ಕ್ಷೇತ್ರದ ಜ್ವಲಂತ ಸಮಸ್ಯೆಯಾದ ಮಕ್ಕಳು ಶಾಲೆ ಬಿಡುವುದರ ಬಗ್ಗೆ “ಬಾ ಮರಳಿ… ಶಾಲೆಗೆ” ಎಂಬ ಕಥಾವಸ್ತುವನ್ನು ತೊಗಲುಗೊಂಬೆ ಮೂಲಕ ಪ್ರದರ್ಶನ ಮಾಡಿದ್ದು ಮಕ್ಕಳ ಮನ ಮುಟ್ಟಿದೆ ಎಂದರು.
ಈ ಸಂಧರ್ಭದಲ್ಲಿ ಬಾ ಮರಳಿ… ಶಾಲೆ ಎಂಬ ತೊಗಲುಗೊಂಬೆ ಪ್ರದರ್ಶವನ್ನು ಇಡಿ ಬಳ್ಳಾರಿ ಜಿಲ್ಲಾಧ್ಯಂತ ಶಾಲೆಗಳಿಗೆ ಜಾಗೃತ ಮೂಡಿಸಲು ಕೋರಿದರು.
ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಮನ್ವಯ ಅಧಿಕಾರಿ ಮನೋಹರ್.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರಸ್ವಾಮಿ ಪ್ರಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಕಲ್ಪನ ರೆಡ್ಡಿ, ನಿಂಗಪ್ಪ.ಸಿ ನೇತಿ ರಘುರಾಮ್, ಉಪಧ್ಯಾಕ್ಷರು, ತುಕರಾಮ್ ಗೊರವ, ಸಣ್ಣ ಮಾರೆಪ್ಪ, ಜಿ. ಶಿವಶಂಕರ, ಬಿ.ಶೀಲಾ, ಗಂಗಮ್ಮ ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article