ಅಕ್ರಮ ಗ್ರಾವೇಲ್/ಮುರಂ, ಸಾಗಾಣಿಕೆ,   ಗಣಿ  ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ  ಕ್ರಮ ಕೈಗೊಳ್ಳಲು  : ಊಳೂರು ಸಿದ್ದೇಶ್ ಮನವಿ

Pratibha Boi
ಅಕ್ರಮ ಗ್ರಾವೇಲ್/ಮುರಂ, ಸಾಗಾಣಿಕೆ,   ಗಣಿ  ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ  ಕ್ರಮ ಕೈಗೊಳ್ಳಲು  : ಊಳೂರು ಸಿದ್ದೇಶ್ ಮನವಿ
WhatsApp Group Join Now
Telegram Group Join Now
ಬಳ್ಳಾರಿ. ಏಪ್ರಿಲ್ 6 :  ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಾಗಲೂರು ಗ್ರಾಮದಿಂದ ಸಿಂಧಿಗೇರಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಕಾಲುವೆ ಪಕ್ಕದಲ್ಲಿ ಅಕ್ರಮವಾಗಿ ಗ್ರಾವೇಲ್ ಸಾಗಾಣಿಕೆ ನಡೆಯುತ್ತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಬಾಯಿಸಲು ವಿಫಲರಾಗಿರುವ ಬಗ್ಗೆ ಕಂಡು ಬಂದಿರುತ್ತದೆ
ಜಮೀನಿನ ಅಭಿವೃದ್ಧಿ/ಸಮತಟ್ಟು ಮಾಡಿಕೊಳ್ಳುವಾಗ ಉತ್ಪಾದನೆಯಾಗುವ ಮುರಂ/ಗ್ರಾವೇಲ್ ಉಪ ಖನಿಜವನ್ನು ಸಾಗಾಣಿಕೆ ಮಾಡಲು ಅನುಮತಿ ಪಡೆಯದೆ ಅಕ್ರಮವಾಗಿ ಗ್ರಾವೇಲ್ ಸಾಗಾಣಿಕೆ ಮಾಡಿರುತ್ತಾರೆ. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ತಿದ್ದುಪಡಿ 2024ರ ನಿಯಮ 3ಂ(b) ಅಡಿಯಲ್ಲಿ ಪ್ರಸ್ತಾಪಿತ ಪಟ್ಟಾ ಜಮೀನನ್ನು ಕೃಷಿ ಇಲಾಖೆಯ ಹಾಗೂ ಕಂದಾಯ ಇಲಾಖೆಗಳ ಅನುಮತಿ ಪಡೆದು, ವರದಿಗಳನ್ವಯ ಅಭಿವೃದ್ಧಿ ಮಾಡಿಕೊಳ್ಳಲು ಮತ್ತು ಸದರಿ ಸಮಯದಲ್ಲಿ ಉತ್ಪಾದನೆಯಾಗುವ ಮುರಂ/ಗ್ರಾವೆಲ್ ಉಪಖನಿಜವನ್ನು ಸಾಗಾಣಿಕೆ ಮಾಡಲು ಏಒಒಅಖ, 1994 ತಿದ್ದುಪಡಿ 2024ರ ನಿಯಮ 3ಂ(b) ರಡಿಯಲ್ಲಿ ಈ ಕೆಳಗಿನ ಷರತ್ತುಗಳಿಗೆ ಅನುಗುಣವಾಗಿ ಅನುಮತಿ ಯನ್ನು ಪಡೆದು ಗ್ರಾವೇಲ್ ಸಾಗಾಣಿಕೆ ಮಾಡಬೇಕು. ಈ ಎಲ್ಲಾ ಷರತ್ತುಗಳನ್ನು ಉಲ್ಲಂಘನೆ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು   ಸರ್ಕಾರದ ಖಜಾನೆಗೆ ನಷ್ಟವನ್ನು ಉಂಟು ಮಾಡಿರುತ್ತಾರೆ ಇವರ ಕರ್ತವ್ಯ ಲೋಪ ದಿಂದಾಗಿ ಈ ಅಕ್ರಮ ನಡೆಯುತ್ತಿದ್ದು ಇವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಬೂಲೂರು ಸಿದ್ದೇಶ್ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಜಂಟಿ ಕೃಷಿ ನಿರ್ದೇಶಕರು, ಬಳ್ಳಾರಿ ಇವರ ಉಲ್ಲೇಖ-4ರ ಪತ್ರದೊಂದಿಗೆ ತಾವು ಸಲ್ಲಿಸಿರುವ ಈ ಕಛೇರಿಗೆ ಸ್ವೀಕೃತಿಯಾದ ಸಹಾಯಕ ಕೃಷಿ ನಿರ್ದೇಶಕರವರು ಸ್ಥಳ ತಪಾಸಣೆ ವರದಿಯಂತೆ ತಮ್ಮ ಕೃಷಿ ಜಮೀನನ್ನು/ಪಟ್ಟಾ ಜಮೀನನ್ನು ಅಭಿವೃದ್ಧಿ ಮಾಡಿಕೊಳ್ಳುವುದು, ಪ್ರಸ್ತಾಪಿತ ಸರ್ವೆ ನಂಬರ್ನ ಜಮೀನನ್ನು ಅಭಿವೃದ್ಧಿ/ಸಮತಟ್ಟು ಮಾಡಿಕೊಳ್ಳುವಾಗ ಅಕ್ಕ-ಪಕ್ಕದ ಜಮೀನುಗಳಿಗೆ ಮತ್ತು ಸಾರ್ವಜನಿಕ ರಚನೆಗಳಿಗೆ ಹಾಗೂ ಸುತ್ತ-ಮುತ್ತಲಿನ ಕೃಷಿ ಚಟುವಟಿಕೆಗೆ, ಜನ-ಜಾನುವಾರುಗಳಿಗೆ ತೊಂದರೆಯಾಗದAತೆ ಅಭಿವೃದ್ಧಿ ಮಾಡಿಕೊಳ್ಳುವುದು, ಜಮೀನಿನಲ್ಲಿ  ಅಭಿವೃದ್ಧಿ ಮಾಡಿಕೊಳ್ಳುವಾಗ ಪಕ್ಕದ ಕಾಲುವೆ ಹಾಗೂ ಕಾಲುವೆಯ ಸರ್ವಿಸ್ ರಸ್ತೆಗೆ ಹಾಗೂ ವಿದ್ಯುತ್ ಲೈನ್ಗೆ ಯಾವುದೇ ತೊಂದರೆಯಾಗದAತೆ ತಮ್ಮ ಕೃಷಿ ಜಮೀನನ್ನು ಅಭಿವೃದ್ಧಿ ಮಾಡಿಕೊಳ್ಳತಕ್ಕದ್ದು. ಕೆ.ಎಂ.ಎA.ಸಿ.ಆರ್-1994ರ ನಿಯಮ-6(2)ರನ್ವಯ ಸಾರ್ವಜನಿಕ ರಚನೆಗಳಿಂದ 50 ಮೀಟರ್ ಅಂತರವನ್ನು ಕಾಯ್ದಿರಿಸಿಕೊಂಡು ಸಮತಟ್ಟು/ಅಭಿವೃದ್ಧಿ ಮಾಡಿಕೊಳ್ಳುವುದು, ಜಮೀನಿನಲ್ಲಿ ಅಭಿವೃದ್ಧಿ/ಸಮತಟ್ಟು ಮಾಡಿಕೊಳ್ಳುವಾಗ ತೆಗೆದ ಉಪ ಖನಿಜವನ್ನು ಖನಿಜ ರವಾನೆ ಪರವಾನಿಗೆ ಪಡೆದು ರಾಜಧನದ ಮತ್ತು ಎ.ಪಿ ಸಂದಾಯದ ಮೊತ್ತ ಪಾವತಿಸಿ ನಿಯಮಾನುಸಾರ ಸಾಗಾಣಿಕೆ ಮಾಡುವುದು. ಜಮೀನಿನಲ್ಲಿ ಅಭಿವೃದ್ಧಿ/ಸಮತಟ್ಟು ಮಾಡಿಕೊಳ್ಳುವ ಸಂದರ್ಭದಲ್ಲಿ ಬೇರೆ ಇತರೆ ಖನಿಜಗಳು ಲಭ್ಯವಿದ್ದಲ್ಲಿ ಕಛೇರಿಗೆ ಮಾಹಿತಿ ತಿಳಿಸತಕ್ಕದ್ದು, ಜಮೀನಿನಲ್ಲಿ ಅಭಿವೃದ್ಧಿ/ಸಮತಟ್ಟು ಮಾಡುವುದು ಹಾಗೂ ಸಾಗಾಣಿಕೆಯನ್ನು ರಾತ್ರಿಯ ಸಮಯದಲ್ಲಿ ನಡೆಸತಕ್ಕದಲ್ಲ (ಬೆಳಿಗ್ಗೆ 06 ಂm ಣo ಸಂಜೆ 06 Pm) ವರೆಗೆ ಮಾತ್ರ ನಡೆಸತಕ್ಕದು.
 ಇದು ಯಾವುದನ್ನು ಪರಿಗಣಿಸದೆ  ಗಣಿ ಮತ್ತು ಭೂ ವಿಜ್ಞಾನಿ ಕಚೇರಿಯ ಅಧಿಕಾರಿಗಳ ಕರ್ತವಲೋಪದಿಂದಾಗಿ ಈ ಅಕ್ರಮ ನಡೆಯುತ್ತಿದೆ ಇದಕ್ಕೆ ಕಾರಣರಾದ  ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
 ಈ ಸಂದರ್ಭದಲ್ಲಿ  ತಿರುಮಲ, ಮರೇಗೌಡ ವಕೀಲರು, ಶಿವಶಂಕರ ವಕೀಲರು ಮತ್ತಿತರರು ಇದ್ದರು‌.
WhatsApp Group Join Now
Telegram Group Join Now
Share This Article