ಬೆಂಗಳೂರು, ಏಪ್ರಿಲ್ 08:ಯುಗಾದಿ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗಳಿಯಿಂದ ಕೂಡಿರುತ್ತದೆ. ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ ಈ ವರ್ಷ ಮಾರಕಟ್ಟೆಯಲ್ಲಿ ಹೇಳಿಕೊಳ್ಳುವಷ್ಟು ಜನರಿಲ್ಲ. ಬಿಸಿಲಿಗೆ ಹೆದರಿ ಜನರು ಮಾರುಕಟ್ಟೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದು ಒಂದು ಕಡೆಯಾದರೆ, ಬರಗಾಲದಿಂದ ನೀರಿಲ್ಲದೆ ಹಣ್ಣು, ಹೂವು, ತರಕಾರಿ ಬೆಳೆ ಕಡಿಮೆಯಾಗಿದೆ. ಇದರಿಂದ ಹೂವು, ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೆ ಏರಿದೆ.
ಎರಡು ವಾರಗಳ ಮಾರುಕಟ್ಟೆಯಲ್ಲಿ ಕೆಜಿ ಬೀನ್ಸ್ಗೆ 50 ರಿಂದ 60 ರೂ. ಇತ್ತು. ಇದೀಗ ಬೀನ್ಸ್ ಬೆಲೆ 70 ರೂ.ಗೆ ಏರಿಕೆಯಾಗಿದೆ. 40 ರಿಂದ 50 ರೂ. ವರೆಗೆ ಮಾರಾಟವಾಗುತ್ತಿದ್ದ ಕ್ಯಾರೆಟ್ 60 ರೂ. ಕ್ಕೆ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಾದ ಕ್ಯಾಪ್ಸಿಕಂ, ಬದನೆ, ಟೊಮೇಟೊ ಬೆಲೆ ಕೆಜಿಗೆ 10 ರೂ. ಏರಿಕೆಯಾಗಿದೆ.
ಹೂವಿನ ಬೆಲೆ
| ಹೂವು | ದರ (ರೂ. ಗಳಲ್ಲಿ) |
| ಮಲ್ಲಿಗೆ | 500-600 |
| ಸೇವಂತಿಗೆ | 300-350 |
| ಗುಲಾಬಿ | 250 |
| ಚೆಂಡು | 150 |
| ಕಾಕಡ | 800 |
| ಕನಕಾಂಬರ | 800-1000 |
| ಸುಗಂದರಾಜ | 300 |
| ಆಸ್ಟ್ರೀಲಿಯಾ | 600 |
| ತುಳಸಿ 1 ಮಾರ್ಗೆ | 100 |
| ಬೇವು 1 ಕಟ್ಗೆ | 20-30 |
| ಮಾವಿನ ಎಲೆ | 30 |
ಹಣ್ಣಿನ ಬೆಲೆ
| ಅನಾನಸ್ (ಜೋಡಿ | 80 |
| ಸೇಬು | 220 |
| ದ್ರಾಕ್ಷಿ | 100 |
| ಸಪೋಟ | 100 |
| ಮೂಸಂಬಿ | 100 |
| ಕಿತ್ತಲೆ | 140 |
| ಕಿವಿ (3ಕ್ಕೆ) | 100 |
| ಡ್ಯ್ರಾಗನ್ ಫ್ರೂಟ್ 1ಕ್ಕೆ | 80 |
| ದಾಳಿಂಬೆ | 200 |
| ಬಟರ್ ಫ್ರೂಟ್ | 200 |
| ಮರಸೇಬು | 200 |
| ಏಲಕ್ಕಿ ಬಾಳೆ | 80 |
| ಪಚ್ಚಬಾಳೆ | 40 |
ತರಕಾರಿ ಬೆಲೆ
| ತರಕಾರಿ | ದರ (ರೂ. ಗಳಲ್ಲಿ) |
| ಬೀನ್ಸ್ | 60-80 |
| ಮೂಲಂಗಿ | 40-30 |
| ಬದನೆಕಾಯಿ | 35-25 |
| ಊಟಿ ಗಜ್ಜರಿ | 35-40 |
| ಹಾಗಲಕಾಯಿ | 40-60 |
| ಈರುಳ್ಳಿ | 20-25 |
| ಬೀಟ್‍ರೂಟ್ | 30-40 |
| ನವಿಲುಕೋಸು | 35-40 |
| ಬೆಂಡೆಕಾಯಿ | 30-50 |
| ಬೆಳ್ಳುಳ್ಳಿ | 180-300 |
| ಆಲೂಗಡ್ಡೆ | 25-30 |
| ಹೀರೆಕಾಯಿ | 35-40 |
| ಟೊಮೆಟೊ | 20-25 |
| ಮೆಣಸಿನಕಾಯಿ | 60-65 |
| ಕೊತ್ತಂಬರಿ | 20-30 |
| ಕ್ಯಾಪ್ಸಕಮ್ | 20-45 |
| ನುಗ್ಗೆಕಾಯಿ | 60-80 |
ಬೆಂಗಳೂರಿನ ಸುತ್ತಮುತ್ತಲಿನ ಪ್ರಮುಖ ತೋಟಗಾರಿಕೆ ವಲಯದಲ್ಲಿ ಕೃಷಿಯ ಚಟುವಟಿಕೆ ಸುಮಾರು 50% ರಷ್ಟು ಕಡಿಮೆಯಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳ ಬೆಲೆಗಳು ಈಗ ಸ್ವಲ್ಪ ಏರಿಕೆಯಾಗಿದೆ. ಮಳೆಯಾಗದ ಹಿನ್ನೆಲೆಯಲ್ಲಿ, ಮುಂಬರುವ ವಾರಗಳಲ್ಲಿ ಈ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.


