ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ 2 ದಿನಗಳ ಕಾಲ ವಯನಾಡಿನಲ್ಲಿ ಭರ್ಜರಿ ಮತ ಪ್ರಚಾರ

Ravi Talawar
ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ 2 ದಿನಗಳ ಕಾಲ ವಯನಾಡಿನಲ್ಲಿ ಭರ್ಜರಿ ಮತ ಪ್ರಚಾರ
WhatsApp Group Join Now
Telegram Group Join Now

ವಯಾನಾಡು (ಕೇರಳ): ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಇಂದಿನಿಂದ ಎರಡು ದಿನಗಳ ಕಾಲ ವಯನಾಡಿನಲ್ಲಿ ಭರ್ಜರಿ ಮತ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಅನೇಕ ಪ್ರಚಾರ ಸಭೆ, ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದು, ಮತದಾರರನ್ನು ಸೆಳೆಯಲಿದ್ದಾರೆ ಎಂದು ಕಾಂಗ್ರೆಸ್​ ಪಕ್ಷ ತಿಳಿಸಿದೆ.

ಕ್ಷೇತ್ರಕ್ಕೆ 11.20ರ ಸುಮಾರಿಗೆ ಹೆಲಿಕಾಪ್ಟರ್​ ಮೂಲಕ ಆಗಮಿಸಿದ ಪ್ರಿಯಾಂಕಾ, ಇಂದು ನೀಲಿಗಿರಿ ಕಾಲೇಜ್​ ಆಫ್​ ಆರ್ಟ್ಸ್​ ಅಂಡ್​ ಸೈನ್ಸ್​ನಿಂದ ತಮ್ಮ ಪ್ರಚಾರ ಆರಂಭಿಸಲಿದ್ದಾರೆ.

ಸುಲ್ತಾನ್​ ಬಥೇರಿ ವಿಧಾನಸಭಾ ಕ್ಷೇತ್ರದಲ್ಲಿನ ಮೀನಂಗಡಿಯಲ್ಲಿ ಮೊದಲ ಸಭೆ ನಡೆಸಲಿದ್ದಾರೆ. ಇದಾದ ಬಳಿಕ 2.30ಕ್ಕೆ ಅವರು ಮಾನಂತವಾಡಿ ವಿಧಾನಸಭಾ ಕ್ಷೇತ್ರದ ಪನಮರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ಸಂಜೆ 4.30ಕ್ಕೆ ಕಲ್ಪೆಟ್ಟ ಕ್ಷೇತ್ರದ ಪೊಝುತಾನದಲ್ಲಿ ಅವರು ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುವ ಮೂಲಕ ಇಂದಿನ ಪ್ರಚಾರ ಮುಗಿಸಲಿದ್ದಾರೆ.

WhatsApp Group Join Now
Telegram Group Join Now
Share This Article