ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

Ravi Talawar
ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ
WhatsApp Group Join Now
Telegram Group Join Now
ಬೈಲಹೊಂಗಲ:  ಚನ್ನಮ್ಮನ ಕಿತ್ತೂರು ಕ್ಷೇತ್ರದ ಮಾಜಿ ಶಾಸಕರು, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ  ಅವರು ಇಂದು ತಮ್ಮ 52 ನೇ ಜನ್ಮದಿನವನ್ನು ವಿನೂತನವಾಗಿ ಅಭಿಮಾನಿಗಳ, ಕಾರ್ಯಕರ್ತರ ಸಮ್ಮುಖದಲ್ಲಿ ಬಡರೋಗಿಗಳ, ಶಾಲಾ ಮಕ್ಕಳ ಸೇವೆಯೊಂದಿಗೆ  ಆಚರಿಸಿಕೊಂಡರು.
   ಅವರು ನಗರದ ಮಲಪ್ರಭಾ ಮಲ್ಟಿಸ್ಪೆಷಾಲಿಟಿ  ಆಸ್ಪತ್ರೆ ತೆರಳಿ ಅಲ್ಲಿನ ಒಳ ರೋಗಿಗಳಿಗೆ  ಹಣ್ಣು ಹಂಪಲು ವಿತರಿಸಿ ಮಾತನಾಡಿ ನಾನು ಅಧಿಕಾರ ಇದ್ದರು, ಇಲ್ಲದಿದ್ದರೂ ಬಡವರ ಪರ ಕೆಲಸ ಮಾಡಲು ನನಗೆ ಶಕ್ತಿಯನ್ನು ನನ್ನ ಅಭಿಮಾನಿಗಳು ಹಾಗೂ ಬೆಂಬಲಿಗರು ಕೊಟ್ಟಿದ್ದು ಅವರಿಗೆ ಚುತಿ ತರದ ಹಾಗೆ ಸದಾ ಸಮಾಜ ಸೇವೆ ಮಾಡಲು ಸಿದ್ದನಿದ್ದೇನೆ  ಇದಕ್ಕೆ ಕಾರಣ ನಮ್ಮ ತಂದೆ ದಿ. ಬಸವಂತರಾಯ ದೊಡ್ಡಗೌಡರ ಹಾಗೂ ತಾಯಿ ದಿ. ಗಂಗಮ್ಮ  ಅವರು ಹಾಕಿಕೊಟ್ಟ ದಾರಿ ಕಾರಣ   ಎಂದರು.
    ಮಹಾಂತೇಶ ದೊಡ್ಡಗೌಡರ ಅವರ ಪತ್ನಿ ಶ್ರೀಮತಿ ಮಂಜುಳಾ ದೊಡ್ಡಗೌಡರ ಮಾತನಾಡಿ ನೀವು ಗೌಡರ ಮೇಲೆ ಇಟ್ಟಿರುವ ಪ್ರೀತಿಗೆ  ನಮ್ಮ ಕುಟುಂಬ ಸದಾ ನಿಮಗೆ ಚಿರಋಣಿ ಅಗಿದ್ದು, ನಿಮ್ಮ ಅಭಿಮಾನಕ್ಕೆ  ನಮ್ಮ ಯಜನಾನರಿಗೆ  ಸಮಾಜ ಸೇವೆ ಮಾಡಲು ಸ್ಫೂರ್ತಿ ಎಂದರು.
    52 ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ರಕ್ತದಾನ ಶಿಭಿರ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ, ತಾಲೂಕಾ ಸರ್ಕಾರಿ ಆಸ್ಪತ್ರೆ  ಒಳರೋಗಿಗಳಿಗೆ  ಹಣ್ಣುವಿತರಣೆ ಇನ್ನೂ ಅನೇಕ ವಿಶಿಷ್ಟ ಜನಪರ  ಕಾರ್ಯಕ್ರಮ  ಮಹಾಂತೇಶ್ ದೊಡ್ಡಗೌಡರ  ಅಭಿಮಾನಿ ಬಳಗ ಮಾಡುವ ಮೂಲಕ  ಅರ್ಥಗರ್ಭಿತವಾಗಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರ   ಜನ್ಮದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ವೈದ್ಯರು, ದೊಡ್ಡಗೌಡರ ಕುಟುಂಬದ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article