ರಾಯಬಾಗ: ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊರ್ವಳ ಮಂಗಳಸೂತ್ರ ಕದ್ದು ಇಬ್ಬರು ಕಳ್ಳರು ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳ್ಳಿಗ್ಗೆ ನಡೆದಿದೆ. ಮುಗಳಖೋಡ ಗ್ರಾಮದ ನಿವಾಸಿ ರೂಪಾ ಮಹೇಶ ಕೇತಗೌಡರ ಎಂಬ ಮಹಿಳೆ ತನ್ನ ಸಂಬಂಧಿ ಮಹಿಳೆಯೊಂದಿಗೆ ಸಂಕೇಶ್ವರದ ನಿಲಗಾರ ಗಣಪತಿಯ ದರ್ಶನ ಪಡೆಯಲು ತೆರಳಲು ರಾಯಬಾಗ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಮಯದಲ್ಲಿ ಬೈಕ ಮೇಲೆ ಬಂದ ಇಬ್ಬರು ಕಳ್ಳರು ಮಹಿಳೆ ಕೊರಳಲಿದ್ದ 30 ಗ್ರಾಮ ತೂಕದ ಸುಮಾರು 3 ಲಕ್ಷ ರೂ. ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮಂಗಳಸೂತ್ರ ಕದ್ದು ಇಬ್ಬರು ಕಳ್ಳರು ಪರಾರಿ

ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಯಬಾಗ ಬಸ್ ನಿಲ್ದಾಣದಲ್ಲಿ ಸೇರಿದಂತೆ ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು, ಪೊಲೀಸರು ಕಳ್ಳತನ ಪ್ರಕರಣಗಳನ್ನು ತಡೆಯಲು ವಿಫಲರಾಗಿದ್ದು, ಹಾಡು ಹಗಲೆ ಕಳ್ಳತನ ಆಗುತ್ತಿರುವುದಕ್ಕೆ ಸಾರ್ವಜನಿಕರು ಪೊಲೀಸರ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.