ಮಹಾಲಿಂಗಪುರ: ಎರಡು ಹೃದಯಗಳು ಒಂದೇ ಭಾವ ದಂಪತಿಗಳಿಗಾಗಿ ’ಜನುಮದ ಜೋಡಿ’ ಕಾರ್ಯಕ್ರಮ ಜನವರಿ ೦೩, ಶನಿವಾರ ರಂದು ಸಂಜೆ ೪ ಗಂಟೆಗೆ (ಇಂದು) ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪಟ್ಟಣದ ಲೈನ್ಸ್ ಕ್ಲಬ್ ಗ್ರೀನ್ ಬೇಸಿನ್ ಅಧ್ಯಕ್ಷರಾದ ಸಿದ್ಧಲಿಂಗೇಶ್ವರ ನಕಾತಿ ತಿಳಿಸಿದ್ದಾರೆ.
ಗುರುವಾರ ಸಂಜೆ ವೈದ್ಯಕೀಯ ಭವನದಲ್ಲಿ ಪ್ರಕಟಣೆ ಮತ್ತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಪತ್ರಿಕೆಗಳಿಗೆ ವಿವರ ನೀಡಿದರು. ಈ ಕಾರ್ಯಕ್ರಮದಲ್ಲಿ ಸ್ಪರ್ಧೆ ಮಾಡಿ ಪ್ರಥಮ ಸ್ಥಾನ ಪಡೆಯುವ ಜನುಮದ ಜೋಡಿ ದಂಪತಿಗಳು ಪ್ರಶಸ್ತಿಯೊಂದಿಗೆ ೫೦ ಸಾವಿರ ರೂಗಳ ಟನ್ವೆಲ್ ಇಲೇಕ್ಟ್ರಕ್ ಬೈಕ್, ದ್ವಿತೀಯ ಸ್ಥಾನ ಪಡೆಯುವ ಭಲೆ ಜೋಡಿಗೆ ಪ್ರಶಸ್ತಿ ಸೇರಿ ೩೦ ಸಾವಿರ ಬೆಲೆಯ ಫ್ರಿಡ್ಜ್ ಮತ್ತು ತೃತೀಯ ಸ್ಥಾನ ಪಡೆಯುವ ಅಪೂರ್ವ ಜೋಡಿ ಪ್ರಶಸ್ತಿ ಜೊತೆ ೨೮ ಸಾವಿರ ಕಿಮ್ಮತ್ತಿನ ಫ್ಯುರಿಫೈಯರ್ರ್ ಆಕ್ವಾ ಗೋಲ್ಡ್ ಪಡೆಯುವರು.
೨೦೦೬ ರಲ್ಲಿ ಇದೆ ರೀತಿಯ ಅದ್ಧೂರಿ ಕಾರ್ಯಕ್ರಮ ನಡೆದಿತ್ತು.ತದ ನಂತರ ಪಟ್ಟಣದಲ್ಲಿ ವಿನೂತನ ಕಾರ್ಯಕ್ರಮ ಇದಾಗಿದೆ. ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಹಾಗೂ ಪ್ರಸ್ತುತ ಕಿರು ತೆರೆ ನಿರೂಪಕರಾದ ಮಾಸ್ಟರ್ ಆನಂದ್ ಮತ್ತು ಕಾಮಿಡಿ ಕಿಲಾಡಿಯ ನಯನಾ ಅವರು ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಮಾಡಿ, ಜನುಮದ ಜೋಡಿಗಳಿಗೆ ಮನೋರಂಜನೆ ನೀಡಲಿದ್ದಾರೆ.
ಇದೆ ಸಮಯದಲ್ಲಿ ಚಿಕ್ಕ ಮಕ್ಕಳನ್ನು ಮನ ರಂಜಿಸಲು ಮಾಸ್ಟರ್ ಆನಂದ್ ಅವರ ಪುತ್ರಿ ಕುಮಾರಿ ವಂಶಿಕಾ ವಿಶೇ? ಕಾರ್ಯಕ್ರಮ ನಡೆಸಿಕೊಡಲಿದ್ದರೆ, ಸಂಗೀತ ರಸಿಕರ ಮನಗಳಿಗೆ ಮುದ ನೀಡುವ ಸುಂದರ ಹಾಡುಗಳೊಂದಿಗೆ ವಿಶೇ? ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು.
ಸದಾ ಸಮಾಜಮುಖಿ ಚಿಂತನೆ ನಡೆಸುವ ಲೈನ್ಸ್, ಶ್ರೇ? ಸಾಧಕರಿಗೆ ವಿಶೇ? ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದೆ.ಶ್ರೇ? ಜೀವಮಾನ ಸಾಧನೆ (ವೈದ್ಯಕೀಯ), ಶ್ರೇ? ಕಾಯಕಯೋಗಿ, ಶ್ರೇ? ಯುವ ರತ್ನ, ಶ್ರೇ? ಸಮಾಜ ಸೇವೆ ಮತ್ತು ಶ್ರೇ? ಕೃಷಿ ರತ್ನ ಪ್ರಶಸ್ತಿಗಳು ಸೇರಿವೆ.
ಡಾ.ವಿಶ್ವನಾಥ ಗುಂಡಾ ಮತ್ತು ಹಿರಿಯ ಪತ್ರಕರ್ತರಾದ ಜಯರಾಂ ಶೆಟ್ಟಿ ಮಾತನಾಡಿದರು.ಈ ಸಂದರ್ಭದಲ್ಲಿ ಲೈನ್ಸ್ ಕ್ಲಬ್ ಗ್ರೀನ್ ಬೇಸಿನ್ ಅಧ್ಯಕ್ಷ ಸಿದ್ಧಲಿಂಗೇಶ್ವರ ನಕಾತಿ, ಸಂಘಟನಾ ಅಧ್ಯಕ್ಷ ಸೋಮಶೇಖರ ಸಂಶಿ, ಕಾರ್ಯದರ್ಶಿ ಡಾ.ವಿದ್ಯಾ ದಿನ್ನಿಮನಿ, ಖಜಾಂಚಿ ಪ್ರಶಾಂತ್ ಅಂಗಡಿ, ಡಾ.ಮಹಾಲಿಂಗ ಚನ್ನಾಳ, ಅರ್ಚನಾ ಕಡಪಟ್ಟಿ ಇದ್ದರು. ಡಾ.ಅಶೋಕ ದಿನ್ನಿಮನಿ ಸ್ವಾಗತಿಸಿ, ರಾಜು ತಾಳಿಕೋಟಿ ನಿರೂಪಿಸಿ, ಡಾ.ಮಾರುತಿ ಮೇದಾರ ವಂದಿಸಿದರು.
೦೨ mಟಠಿ ೦೧ ಠಿhoಣo
ಎರಡು ಹೃದಯಗಳು, ಒಂದೇ ಭಾವ ಮಹಾಲಿಂಗಪುರದಲ್ಲಿ ಶನಿವಾರ ’ಜನುಮದ ಜೋಡಿ’ ಕಾರ್ಯಕ್ರಮ


