ನುವಾಪಾಡಾ (ಒಡಿಶಾ) : ಜಿಲ್ಲೆಯಲ್ಲಿ 4 ಬೇಟೆಗಾರರು ಹುಲಿಯನ್ನು ಬೇಟೆಯಾಡಿ ಅದರ ಮಾಂಸವನ್ನು ತಿಂದಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ನುವಾಪಾಡಾ ಕೋಮನ ಅರಣ್ಯ ಇಲಾಖೆ ಸಿಬ್ಬಂದಿ 2 ಬೇಟೆಗಾರರನ್ನು ಬಂಧಿಸಿದ್ದಾರೆ.
ಪುಷ್ಟಮ್ ಚಿಂದಾ ಮತ್ತು ಟಿಕು ಚಿಂದಾ ಬಂಧಿತರು. ಇನ್ನಿಬ್ಬರು ಬೇಟೆಗಾರರಾದ ದೇವೇಂದ್ರ ಚಿಂದಾ ಮತ್ತು ಜಗಬಂಧು ಚಿಂದಾ ಎಂಬುವವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ಹುಲಿ ಚರ್ಮ, ಮಾಂಸ, ಉಗುರು, ಹಲ್ಲುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
ಬೇಟೆಗಾರರ ಪ್ರಕಾರ, ಕಾಡು ಹಂದಿ ಬೇಟೆಯಾಡಲು ಕಾಡಿನಲ್ಲಿ ವಿದ್ಯುತ್ ತಂತಿಯನ್ನ ಹರಡಿದ್ದಾರೆ. ಆದರೆ ಕಾಡುಹಂದಿಯ ಬದಲು ಹುಲಿ ಬಿದ್ದಿದೆ. ಅದರ ನಂತರ, ಹುಲಿಯ ಕಾಲುಗಳು, ಬಾಲ, ಉಗುರುಗಳು ಮತ್ತು ಹಲ್ಲುಗಳನ್ನು ಪ್ರತ್ಯೇಕವಾಗಿ ಕತ್ತರಿಸಿದ್ದಾರೆ. ನಂತರ 4 ಮಂದಿ ಹುಲಿ ಮಾಂಸವನ್ನು ಬೇಯಿಸಿ ತಿಂದಿದ್ದಾರೆ.