ರನ್ನ ಬೆಳಗಲಿ: ಮೇ.11: ಪಟ್ಟಣದ ಸಮೀಪದಲ್ಲಿರುವ ಸೈದಾಪುರ ಗ್ರಾಮಕ್ಕೆ ಹೊಂದಿಕೊಂಡರಿವ ಕಪ್ಪಲಗುದ್ದಿ ಗ್ರಾಮದ ತುಕ್ಕಾನಟ್ಟಿ ಕುಟುಂಬದಲ್ಲಿ ಅರಳಿದ ಬಡ ಅವಳಿ ಸೋದರರು ಶಾಲೆಗಳಿಗೆ ಪ್ರಥಮ ಸ್ಥಾನ ಪಡೆದು ಕುಟುಂಬ ವರ್ಗಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
ತಂದೆ ತಾಯಿಯರಾದ ಕೃಷ್ಣಪ್ಪ ತುಕ್ಕಾನಟ್ಟಿ ಹಾಗೂ ಬಂದವ್ವ ತುಕ್ಕಾನಟ್ಟಿ ಅವರ ಮೂರನೆಯ ಸಂತಾನವಾಗಿ ಮೂರು ಹೆಣ್ಣುಮಕ್ಕಳಾದ ಲಕ್ಷ್ಮೀ, ಅನಿತಾ, ಸಹನಾ ನಂತರ ಅವಳಿ ಗಂಡು ಮಗುವಾಗಿ ಜನ್ಮ ಪಡೆದವರೇ ಮುತ್ತಪ್ಪ ಮತ್ತು ಮಲ್ಲೇಶ. ತಾಯಿಯು ಅಂಗವಿಕಲ್ಯವನ್ನು ಮೀರಿ ಜೀವನ ನಡೆಸುತ್ತಿದ್ದಳು
ತಂದೆಯು ಕೂಡ ನೆರೆಹೊರೆಯ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾ ಮಕ್ಕಳ ಓದಿಗಾಗಿ ನಿರಂತರ ಕಷ್ಟ ಪಡುತ್ತಾ ಮಕ್ಕಳನ್ನು ಬೆಂಬಲಿಸುತ ಬಂದರು. ೫ನೇ ತರಗತಿ ಓದುತ್ತಿದ್ದಾಗಲೇ ಇಬ್ಬರು ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯನ್ನು ಬರೆದರು ಅದರಲ್ಲಿ ಮಲ್ಲೇಶ ಉತ್ತಮ ಅಂಕ ಪಡೆದುಕೊಂಡು ಮಹಾಲಿಂಗಪುರ ಮೊರಾರ್ಜಿ ಶಾಲೆಗೆ ಆಯ್ಕೆಗೊಂಡನು, ಆದರೆ ಮುತ್ತು ತಂದೆ ತಾಯಿಯರ ಜೊತೆ ಕೆಲಸ ಮಾಡುತ್ತಾ ಕಪ್ಪಲಗುದ್ದಿಯಲ್ಲೇ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡು ಗ್ರಾಮಕ್ಕೆ ಹೊಂದಿಕೊಂಡ ಶ್ರೀರಾಮ್ ವಿದ್ಯಾವರ್ಧಕ ಸಮಿತಿಯ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರೌಢಶಾಲೆ ಹಳ್ಳೂರು ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಂದುವರಿಸಿದನು.
ಪ್ರಸ್ತುತ ೨೦೨೩-೨೪ರ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಮಲ್ಲೇಶ ಕೃಷ್ಣಪ್ಪ ತುಕ್ಕಾನಟ್ಟಿ ೬೨೫ಕ್ಕೆ ೫೮೭ ಅಂಕ ಪಡೆದು ಪ್ರತಿಶತ ೯೩.೯೨% , ಮಹಾಲಿಂಗಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ. ಮತ್ತೊಬ್ಬ ಅವಳಿ ಸಹೋದರನಾದ ಮುತ್ತಪ್ಪ ಕೃಷ್ಣಪ್ಪ ತುಕ್ಕಾನಟ್ಟಿ ೬೨೫ಕ್ಕೆ ೫೯೭ ಅಂಕ ಪಡೆದು ಪ್ರತಿಶತ ೯೫.೫೨%, ಹಳ್ಳೂರಿನ ಶ್ರೀ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಜೊತೆಗೆ ಕಪ್ಪಲಗುದ್ದಿ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಯೋಗ ಶಿಕ್ಷಕರು, ಉಪನ್ಯಾಸಕರಾದ ರಾಘವೇಂದ್ರ ನೀಲಣ್ಣವರ ಅವರು ಒಂದೇ ಕುಟುಂಬದ ಅವಳಿಸುವುದರರು ಎರಡು ಶಾಲೆಗಳಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಅಪರೂಪದ ಸಂಗತಿಯಾಗಿದೆ. ಇವರ ಮುಂದಿನ ಶೈಕ್ಷಣಿಕ ಜೀವನವು ಉಜ್ವಲವಾಗಲೆಂದು ಶುಭ ಹಾರೈಸುವುದರ ಜೊತೆಗೆ ಅವರು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ವೈದ್ಯರಾಗುವ ಕನಸನ್ನು ಹೊತ್ತ ಅವಳಿ ಸಹೋದರಿಗೆ ಭಗೀರಥ ಸಮುದಾಯದಿಂದ ಸಾಧ್ಯವಾದಷ್ಟು ನೆರವು
ನೀಡುವುದಾಗಿ ಘೋಷಿಸಿ ಸ್ಥಳೀಯ ಪ್ರಮುಖರಾದ ಶಿವರಾಜ ಬಿರಾಜ, ವಿರಾಜ ಶರಣಪ್ಪ ಮೇಟಿ, ಪ್ರಮೋದ ದಡ್ಡಿಮನಿ, ಮಹಾಲಿಂಗ ಬಾಗೋಜಿ, ಕೆಂಪಣ್ಣ ಕುರನಿಂಗ, ಬಾಳು ಬಾಗೋಜಿ, ಆಕಾಶ್ ತುಕ್ಕಾನಟ್ಟಿ, ಮುಂತಾದವರು ಸೇರಿ ಗೌರವಿಸಿ ಸತ್ಕರಿಸಿ ಸನ್ಮಾನಿಸಿದರು. ತುಕ್ಕಾನಟ್ಟಿ ಕುಟುಂಬದ ಹಿರಿಯರಾದ
ಕಲ್ಲೋಳೆಪ್ಪ ತುಕ್ಕಾನಟ್ಟಿ, ಯಮನವ್ವ ತುಕ್ಕಾನಟ್ಟಿ, ಸಾಧಕ ವಿದ್ಯಾರ್ಥಿಯ ತಂದೆ ತಾಯಿಯರಾದ ಕೃಷ್ಣಪ್ಪ ತುಕ್ಕಾನಟ್ಟಿ, ಬಂದವ್ವ ತುಕ್ಕಾನಟ್ಟಿ, ಹಾಗೂ ಯಮನಪ್ಪ, ರಾಜವ್ವ, ಗೋವಿಂದ, ಸಂಗೀತಾ,ಅಜ್ಜಪ್ಪ, ಮುದಕಪ್ಪ, ಮಹೇಶ, ಸಾರ್ಥಕ ಕುಟುಂಬ ವರ್ಗದವರು ಉಪಸ್ಥಿತರಿದ್ದರು.