ಬಿಟ್​ ಕಾಯಿನ್​ ಹಗರಣಕ್ಕೆ ಮಹತ್ವದ ತಿರುವು: ಬೆಳಗಾವಿ  ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಭಾಗಿ ಆರೋಪ

Ravi Talawar
ಬಿಟ್​ ಕಾಯಿನ್​ ಹಗರಣಕ್ಕೆ ಮಹತ್ವದ ತಿರುವು: ಬೆಳಗಾವಿ  ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಭಾಗಿ ಆರೋಪ
WhatsApp Group Join Now
Telegram Group Join Now

ಬೆಳಗಾವಿ, ಜುಲೈ 10: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್ ಕಾಯಿನ್  ಹಗರಣ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಈ ಹಗರಣದಲ್ಲಿ ಪೊಲೀಸ್​ ಇಲಾಖೆ  ಹಿರಿಯ ಅಧಿಕಾರಿಯೊಬ್ಬರ ಹೆಸರು ತಳುಕು ಹಾಕಿಕೊಂಡಿದೆ. ಪ್ರಕರಣದಲ್ಲಿ ಬಂದಿಖಾನೆ ಇಲಾಖೆ ಮತ್ತು ಬೆಳಗಾವಿ  ಉತ್ತರ ವಲಯ ಡಿಐಜಿ ಟಿ.ಪಿ.ಶೇಷ  ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಗರಣದಲ್ಲಿ ಡಿಐಜಿ ಟಿ.ಪಿ.ಶೇಷ ಅವರು ಭಾಗಿಯಾಗಿದ ಬಗ್ಗೆ ನಾಗೇಂದ್ರ ಅಲಿಯಾಸ್​ ನಾಗ ಎಂಬ ಕೈದಿ ಎಡಿಜಿಪಿ ಅವರಿಗೆ ಜೂನ್​ 26 ರಂದು ದೂರು ನೀಡಿದ್ದನು. ಈ ಕೈದಿಯನ್ನು ಹಿಂಡಲಾಗದಲ್ಲಿದ್ದ ಕಾರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡವು ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ದೂರಿನ ಅರ್ಜಿ ಇಟ್ಟುಕೊಂಡು ಮೂರು ಗಂಟೆಗಳ ಕಾಲ ಕೈದಿಯ ವಿಚಾರಣೆ ನಡೆಸಿದ ಎಸ್​ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಟಿಪಿ ಶೇಷ ಅವರು ಹ್ಯಾಕರ್​​ ಶ್ರೀಕಿಗೆ ಲ್ಯಾಪ್​ಟಾಪ್​ ನೀಡಿ 20 ಕೋಟಿ ಮೌಲ್ಯದ ಬಿಟ್​ಕಾಯಿನ್​ ವರ್ಗಾವಣೆ ಮಾಡಿಸಿದ್ದಾರೆ ಎಂದು ನಾಗೇಂದ್ರ ದೂರಿದ್ದನು.

ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಶ್ರೀಕಿಯನ್ನು ನೋಡಿಯೇ ಇಲ್ಲ ಎಂದು ಡಿಐಜಿ ಟಿ.ಪಿ.ಶೇಷ ಅವರು ಹೇಳಿದ್ದಾರೆ. ಪ್ರಕರಣ ಸಂಬಂಧ ಡಿಐಜಿ ಟಿ.ಪಿ.ಶೇಷ ಅವರಿಗೂ ಎಸ್​ಐಟಿ ತಂಡ ನೋಟಿಸ್ ನೀಡಿವ ಸಾಧ್ಯತೆ ಇದೆ.

WhatsApp Group Join Now
Telegram Group Join Now
Share This Article