.
ಮುಗಳಖೋಡ ,08:ಪಟ್ಟಣದ ಶ್ರೀಚಂದ್ರವ್ವತಾಯಿ ಶ್ರೀ ಗೋಣಿಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ಯ ಮಂಗಳವಾರ ದಿ 7 ರಂದು ಬೆಳಿಗ್ಗೆ ರುದ್ರಾಭಿಷೇಕ ನಂತರ ಶ್ರೀ ಯಲ್ಲಾಲಿಂಗೇಶ್ವರರ ಭೃಹ್ನ ಮಠದಿಂದ ಶ್ರೀ ಯಲ್ಲಾಲಿಂಗೇಶ್ವರ ಸಿದ್ದರಾಮೇಶ್ವರ ಹಾಗೂ ಚಂದ್ರವ್ವತಾಯಿ ಗೋಣಿಬಸವೇಶ್ವರ ಪಲ್ಲಕ್ಕಿ ಉತ್ಸವ ಆರತಿ ಕುಂಭ ಹೊತ್ತ ಸುಮಂಗಲೆಯರು ಮತ್ತು ಸಕಲವಾಧ್ಯವೃಂದದಿಂದ ಮಂದಿರದವರೆಗೆ ಭವ್ಯ ಮೆರವಣಿಗೆ ಜರುಗಿತು.
ಬುಧವಾರ 8 ರಂದು ಡಾ.ಮುರುಘರಾಜೇಂದ್ರ ಶ್ರೀಗಳವರ ತುಲಾಭಾರ ಸೇವೆ ನಡೆಯಿತು 5 ದಿನಗಳ ಕಾಲ ಪ್ರವಚನ ನೀಡಿದ ಹನ್ನಿಕೇರಿಯ ಬಸವರಾಜ ಶಾಸ್ತ್ರಿ, ಕಂಕಣವಾಡಿಯ ನಾಗಯ್ಯ ಸ್ವಾಮಿಗಳು,ಮಾರುತಿ ಶರಣರು, ಮಾತೋಶ್ರೀ ಮಂಜುಳಾ ಗಲಗಲಿ, ಸಂಗೀತ ಕಲಾವಿದ ಶ್ರೀಕಾಂತ ಕೆಂದುಳಿ ಮತ್ತು ಕಾರ್ಯಕ್ರಮದಲ್ಲಿ ಸೇವೆಸಲ್ಲಸಿದವರನ್ನು ಸತ್ಕರಿಸಲಾಯಿ .
ಸಕಲರಿಗೂ ಅನ್ನಪ್ರಸಾದ ವ್ಯವಸ್ಥೆಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಸಿದ್ದರಾಮ ಎತ್ತಿನಮನಿ, ಭೀಮಪ್ಪ ಎತ್ತಿನಮನಿ, ರಾಮಣ್ಣ ಮಂಟೂರ, ಸದಾಶಿವ ಎತ್ತಿನಮನಿ, ಭೀಮಪ್ಪ ಹಳಿಂಗಳಿ, ಎತ್ತಿನಮನಿ,ರೇವಪ್ಪ ಕಾಮಣಿ, ಪುಂಡಲೀಕ ಎತ್ತಿನಮನಿ, ಶಿವು ಗೋಕಾಕ,ಭೀಮಪ್ಪ ಬಿರಾದರ, ಚನ್ನಪ್ಪ ಮುಗಳಿ, ಸುರೇಶ ಎತ್ತಿನಮನಿ, ಕುಮಾರ ಬಾಬಣ್ಣವರ, ಪರುಶುರಾಮ ಮುಗಳಿ, ಆನಂದ ಎತ್ತಿನಮನಿ, ಮಾರುತಿ ನಿಂಗಪ್ಪ ಹಳಂಗಳಿ, ತಮ್ಮಣ್ಣಾ ಎತ್ತಿನಮನಿ, ರಾಜು ಎತ್ತಿನಮನಿ, ಸುಭಾಷ ಶೇಗುಣಸಿ, ಲಕ್ಷ್ಮಣ್ಣ ತುಗದೇಲಿ, ಮಲ್ಲಪ್ಪ ಗೋಕಾಕ, ಬಸಪ್ಪ ಬಿರಾದಾರ, ಭಗವಂತ ಹಿಟ್ಟಣಗಿ,ಹಾಗೂ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.ನಿರೂಪಣೆ ಉಪನ್ಯಾಸಕ ಕಾಂತೇಶ ಕೊಚೇರಿ ನಡೆಸಿಕೊಟ್ಟರು.