ಸತ್ಯ ಮತ್ತು ಅಹಿಂಸೆ ವಿಶಿಷ್ಟ ಮೌಲ್ಯಗಳು : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

Ravi Talawar
ಸತ್ಯ ಮತ್ತು ಅಹಿಂಸೆ ವಿಶಿಷ್ಟ ಮೌಲ್ಯಗಳು : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
WhatsApp Group Join Now
Telegram Group Join Now
ಗದಗ : ಸತ್ಯ ಮತ್ತು ಅಹಿಂಸೆ ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳು ಹೊರಹೊಮ್ಮುವಂತೆ ಮಾಡುತ್ತವೆ. ಸತ್ಯ ಮತ್ತು ಅಹಿಂಸೆ ವಿಶಿ? ಮೌಲ್ಯಗಳು ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನೆಡೆದ ೨೭೬೬ ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಬಸವಣ್ಣ ಬ್ರಹ್ಮ ಪದವಿನೊಲ್ಲೆ ವಿ?ಪದವಿಯನೊಲ್ಲೆ ಎಂದರು. ಹಾಗೆಯೇ ಮಹಾತ್ಮ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೂ ಯಾವ ಅಧಿಕಾರ ಬಯಸಲಿಲ್ಲ. ಸತ್ಯ, ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಬಸವಣ್ಣ ಮತ್ತು ಗಾಂಧೀಜಿ ಸಾಗಿದರು. ದಯವೇ ಧರ್ಮದ ಮೂಲವಯ್ಯ ಇದರಲ್ಲಿ ಅಹಿಂಸೆ ಇದೆ. ಅಹಿಂಸೆಗೆ ತಲೆಬಾಗದ ವ್ಯಕ್ತಿಗಳೇ ಇಲ್ಲ. ಸಾಮಾಜಿಕವಾಗಿ, ಧಾರ್ಮಿಕವಾಗಿ, ಸತ್ಯ ಅಹಿಂಸೆಯಂತ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಇ?ಲಿಂಗ ಧರಿಸಬೇಕು. ಜಂಗಮಸೇವೆ ಮಾಡಬೇಕು. ಇ?ಲಿಂಗ ಸಮಾನತೆಯ ಸಂಕೇತ ಎಂದು ಆಶೀರ್ವಚನ ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ಮುಳಗುಂದ ಎಸ್ ಜೆ ಜೆ ಎಂ ಪದವಿ ಪೂರ್ವ ಕಾಲೇಜಿನ ಶರಣ ರವೀಂದ್ರ ಆರ್ ಪಟ್ಟಣ ಮಾತನಾಡಿ, ಸತ್ಯ ಮತ್ತು ಅಹಿಂಸೆ ಎಲ್ಲಾ ಧರ್ಮಗಳ ಸಾರ. ಗಾಂಧೀಜಿಯವರ ದಿವ್ಯ ವ್ಯಕ್ತಿತ್ವವನ್ನು ಲಾರ್ಡ್ ಮೌಂಟ್ ಬ್ಯಾಟನ್, ಮಾರ್ಟೀನ್ ಲೂಥರ್ ಕಿಂಗ್ ಅನೇಕ ಬ್ರಿಟಿ? ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಗಾಂಧಿ ಅಹಿಂಸೆ ಮೇ ಪರಮೋಧರ್ಮ ಎಂದು ಪಾಲಿಸಿದರು. ಬಸವಣ್ಣನವರು ಸತ್ಯ ಮತ್ತು ಅಹಿಂಸೆ ಮಾನವನ ಬದುಕಿನಲ್ಲಿ ವಿಶಿ? ಗುಣಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ನಮ್ಮದಾಗುತ್ತದೆ ಎಂದರು. ಬಸವಣ್ಣನವರು ನಾನೇ ಸಣ್ಣವ ಎಂದು, ನೊಂದವರ ಧ್ವನಿಯಾಗಿ ಸಮಸಮಾಜದ ಕಲ್ಪನೆಯನ್ನು ಹೊಂದಿದ್ದರು. ಸತ್ಯ ಮತ್ತು ಅಹಿಂಸೆಯನ್ನು ಮಾನವನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದ ವ್ಯವಸ್ಥೆ ಮಾಡಿದ ಬಗ್ಗೆ ಅಭಿಮಾನದಿಂದ ಹಂಚಿಕೊಂಡರು ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ ಎಸ್ ಚಟ್ಟಿ ಉಪಸ್ಥಿತರಿದ್ದರು. ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ತಿಂಗಳ ಪಯಂತ ಮಹಾದಂಡನಾಯಕರಂತೆ ಮುಂಚೂಣಿಯಲ್ಲಿ ಇದ್ದು ಯಶಸ್ಸಿಗೆ ಕಾರಣರಾದ ಜಗದ್ಗುರು ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಗಳನ್ನು ಗದಗ ಜಿಲ್ಲೆಯ ಲಿಂಗಾಯತ ಮಹಾಸಭಾದ ಎಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು.
ವಚನಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಕುಮಾರ ಮಹೇಶ್ ರವಿಕುಮಾರ್ ಪುರಾಣಿಕಮಠ ಹಾಗೂ ವಚನ ಚಿಂತನವನ್ನು ಕುಮಾರ ಮಹಾಂತೇಶ ರವಿಕುಮಾರ್ ಪುರಾಣಿಕಮಠ ನಡೆಸಿದರು. ದಾಸೋಹ ಸೇವೆಯನ್ನು ಶ್ರೀ ಸಿದ್ದಲಿಂಗಪ್ಪ ಕಾತರಕಿ, ಶ್ರೀಮತಿ ಉಮಾದೇವಿ ಕಾತರಕಿ, ಹಾಗೂ ಶೋಭಾ ಕಾತರಕಿ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳರವರು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
WhatsApp Group Join Now
Telegram Group Join Now
Share This Article