ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾಗೆ ಟ್ರಂಪ್‌ ಅವಮಾನ; ಎಲ್ಲೆಡೆ ಟೀಕೆ

Ravi Talawar
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾಗೆ ಟ್ರಂಪ್‌ ಅವಮಾನ; ಎಲ್ಲೆಡೆ ಟೀಕೆ
WhatsApp Group Join Now
Telegram Group Join Now

ಅಮೆರಿಕ : ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿದೇಶಿ ಗಣ್ಯರನ್ನು ಓವಲ್ ಕಚೇರಿಗೆ ಕರೆಸಿಕೊಂಡು ಪದೇ ಪದೇ ಅವಮಾನ ಮಾಡುತ್ತಿದ್ದು, ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಟ್ರಂಪ್ ಅವರೊಂದಿಗೆ ಸೌಹಾರ್ದ ಮಾತುಕತೆಗಾಗಿ ಶ್ವೇತಭವನಕ್ಕೆ ಆಗಮಿಸಿದ್ದರು. ಸಭೆ ಪ್ರಾರಂಭವಾಗಿ 20 ನಿಮಿಷಗಳ ಬಳಿಕ ಟ್ರಂಪ್ ಕೋಣೆಯ ದೀಪಗಳನ್ನು ಮಂದಗೊಳಿಸಿದರು. ದೊಡ್ಡ ಪರದೆಯನ್ನು ಆನ್ ಮಾಡಿದ್ದರು. ರಾಮಫೋಸಾ ಒಮ್ಮೆ ಆಘಾತಕ್ಕೊಳಗಾದರು.

ದಕ್ಷಿಣ ಆಫ್ರಿಕಾದ ವಿರೋಧ ಪಕ್ಷದ ನಾಯಕರಾದ ಜಾಕೋಬ್ ಜುಮಾ ಮತ್ತು ಜೂಲಿಯಸ್ ಮಲೆಮಾ ಅವರು ಪ್ರಚೋದನಕಾರಿ ಭಾಷಣವನ್ನು ಪರದೆಯ ಮೇಲೆ ತೋರಿಸಲಾಯಿತು.ಹಾಗೆಯೇ ಟ್ರಂಪ್ ಕೆಲವು ಡ್ರೋನ್ ದೃಶ್ಯಾವಳಿಗಳನ್ನು ತೋರಿಸಿ ಇದು ಅಲ್ಲಿ ನಡೆದ ಬಿಳಿಯರ ಸಮಾಧಿ ಎಂದರು. ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ನರಮೇಧ ಏಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು.

ರಾಮಫೋಸಾ ತಾಳ್ಮೆಯ ಪ್ರತಿಕ್ರಿಯೆ ಟ್ರಂಪ್​ಗೆ ರಾಮಫೋಸಾ ತಾಳ್ಮೆಯಿಂದ ಉತ್ತರಿಸಿದರು. ಈ ಘೋಷಣೆಗಳು ಸರ್ಕಾರಿ ನೀತಿಯ ಭಾಗವಾಗಿಲ್ಲ, ದಕ್ಷಿಣ ಆಫ್ರಿಕಾವು ಬಹು-ಪಕ್ಷ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಅಲ್ಲಿ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಮಲೆನಾ ಅವರ ಪಕ್ಷ ಚಿಕ್ಕದಾಗಿದ್ದು, ಅವರ ಮಾತುಗಳು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು. ಆದರೂ ಟ್ರಂಪ್ ಮಾತು ಮುಂದುವರೆಸಿದರು. ಇದರ ನಡುವೆ ನಿಮಗೆ ಕೊಡಲು ನನ್ನ ಬಳಿ ವಿಮಾನ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ರಾಮಫೋಸಾ ವ್ಯಂಗ್ಯವಾಡಿದ್ದಾರೆ.ಅದಕ್ಕೆ ಕೂಡಲೇ ಉತ್ತರಿಸಿದ ಟ್ರಂಪ್ ನಿಮ್ಮ ದೇಶ ನನಗೆ ವಿಮಾನ ನೀಡಿದರೆ ಅದನ್ನೂ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article