ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸನ್ಮಾನ

Hasiru Kranti
ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸನ್ಮಾನ
WhatsApp Group Join Now
Telegram Group Join Now

ಇಂಡಿ : ಪಟ್ಟಣದ ಮಾಡಲ್ ಪಬ್ಲಿಕ್ ಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಇಂಡಿ ಘಟಕಕ್ಕೆ  ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾನಿಪ ಇಂಡಿ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ ಪತ್ರಿಕೆ ಮತ್ತು ಮಧ್ಯಮ ಸಮಾಜದ ಅಂತರಂಗವನ್ನು ಪ್ರತಿಬಿಂಬಿಸುವ ಶಕ್ತಿಶಾಲಿ ಸಾಧನ. ಪತ್ರಿಕೆ ಎನ್ನುವುದು ಕೇವಲ ಸುದ್ದಿ ನೀಡುವ ಸಾಧನವಲ್ಲ. ಸಮಾಜದ ಜೀವಾಳ, ಪ್ರಜಾಪ್ರಭುತ್ವದ ಭದ್ರ ಅಡಿಪಾಯ.

ಇಷ್ಟೇ ಅಲ್ಲದೇ, ಜನ ಸಾಮಾನ್ಯರೊಂದಿಗೆ ಮತ್ತು ಸರ್ಕಾರದೊಂದಿಗೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತದೆ. ಜೊತೆಗೆ ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತದೆ. ಬಹುಮುಖ್ಯವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿ ಜವಾಬ್ದಾರಿ ನಿರ್ವಹಿಸುತ್ತಿರುವುದನ್ನ ನೆನಪು ಮಾಡಿಕೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಡಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಫೀಕ್ ಮುಲ್ಲಾ  ಜನರ ಸಮಸ್ಯೆಗಳ ಕುರಿತು ವರದಿ ಮಾಡುವ ಮೂಲಕ ಪತ್ರಕರ್ತರು ಸಮಾಜದ ಬೆನ್ನೆಲುಬಾಗಿದ್ದಾರೆ. ವೈಯುಕ್ತಿಕ ಜೀವನ ಬದಿಗಿಟ್ಟು ನಿತ್ಯ ಕೆಲಸ ಮಾಡುತ್ತಾರೆ. ಅವರ ಸೇವೆ ಅನನ್ಯ. ಪತ್ರಿಕೋದ್ಯಮ ಸಮಾಜದ 4ನೇ ಅಂಗವಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ಪತ್ರರ್ತರ ಕೊಡುಗೆ ಅಪಾರವಾಗಿದೆ. ಧ್ವನಿಯಿಲ್ಲದವರ ಪರವಾಗಿ ಪತ್ರಕರ್ತರು ನಿಲ್ಲಬೇಕು’ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ಘಟಕದ ಅಧ್ಯಕ್ಷ ಅಬುಶಾಮ ಅವಾಲ್ದಾರ, ಉಪಾಧ್ಯಕ್ಷ ಅರವಿಂದ ಖಡೆಖಡೆ, ಕಾರ್ಯದರ್ಶಿ ಸಿದ್ಧಯ್ಯ ಹಿರೇಮಠ, ಖಜಾಂಚಿ ಆನಂದ ಗಣಾಚಾರಿ,  ಜಿಲ್ಲಾ ಕಾರ್ಯದರ್ಶಿ ಸದ್ದಾಂ ಹುಸೇನ್‌ ಜಮಾದಾರ ಮಾಡಲ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು  ಅಬ್ದುಲ್ ಕದೀರ ಜಮಾದಾರ, ಬಶೀರ ಗಾಲಿಬಗೂಳ, ರಫೀಕ್ ಅವಟಿ,

ಕಾರ್ಯಕ್ರಮವನ್ನು  ಶಿರಾಜ  ಚಟ್ಟರಕಿ ನೀರೊಪಣೆ ಮಾಡಿದರು ಮುಜೀಬುರಹೇಮಾನ ಅಫಜಲಪೂರ ಸ್ವಾಗತಿಸಿದರು. ಸಲಾಉದ್ದಿನ ನಾಗೂರ ವಂದನಾರಪಣೆ ಮಾಡಿದರು.

WhatsApp Group Join Now
Telegram Group Join Now
Share This Article