ಘಟಪ್ರಭಾ. ಘಟಪ್ರಭಾ ಪಿ ಐ ಠಾಣೆಗೆ ನೂತನ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ(ಎಸ್ಪಿ) ಕೆ. ರಾಮರಾಜನ ಅವರು ಬೇಟಿ ಕೊಟ್ಟ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ಪದಾಧಿಕಾರಿಗಳು ಅವರಿಗೆ ಸತ್ಕರಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ವಕೀಲರು, ಕರವೇ ಮೂಡಲಗಿ ತಾಲೂಕ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಅರಭಾವಿ, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿವೇಕ ಕತ್ತಿ, ಸಂಗನಕೇರಿ ಘಟಕದ ಅಧ್ಯಕ್ಷರಾದ ಕಾಶಪ್ಪ ನಿಂಗನ್ನವರ, ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಶಿಧರ ಚೌಕಶಿ, ಘಟಪ್ರಭಾ ನಗರ ಘಟಕದ ಅಧ್ಯಕ್ಷ ಯಲ್ಲಪ್ಪ ಅಟ್ಟಿಮಿಟ್ಟಿ, ಗೋಕಾಕ ತಾಲೂಕ ಉಪಾಧ್ಯಕ್ಷ ಬಸವರಾಜ ಹುಬ್ಬಳ್ಳಿ, ಮೂಡಲಗಿ ತಾಲೂಕ ಉಪಾಧ್ಯಕ್ಷ ಸುರೇಶ ಚಿಗಡೊಳ್ಳಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಸಿ, ಕಾರ್ಯದರ್ಶಿ ಮಲ್ಲೇಶ ಚೌಕಸಿ ಉಪಸ್ಥಿತರಿದ್ದರು.


