ಗುಜರಾತ್ ಪ್ರವಾಸದಲ್ಲಿ ಮಹೇಂದ್ರ ಸಿಂಘಿ ಅವರಿಗೆ ಸನ್ಮಾನ

Pratibha Boi
ಗುಜರಾತ್ ಪ್ರವಾಸದಲ್ಲಿ ಮಹೇಂದ್ರ ಸಿಂಘಿ ಅವರಿಗೆ ಸನ್ಮಾನ
WhatsApp Group Join Now
Telegram Group Join Now
ಹುಬ್ಬಳ್ಳಿ: ಪ್ರಧಾನಮಂತ್ರಿಗಳವರಿಂದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುಷ್ಠಾನಗೊಳ್ಳುತ್ತಿರುವ 15 ಅಂಶಗಳ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆಂದು  ಕರ್ನಾಟಕ ರಾಜ್ಯ ಮಟ್ಟದ ಸಮಿತಿಗೆ ಸಮಾಜಸೇವಕ ಮಹೇಂದ್ರ ಸಿಂಘಿ ಅವರನ್ನು ಸದಸ್ಯರಾಗಿ ನೇಮಿಸಿದ ಹಿನ್ನೆಲೆಯಲ್ಲಿ, ಅವರ ಗುಜರಾತ್ ಪ್ರವಾಸದ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಪ್ರವಾಸದ ವೇಳೆ ಸಿಂಘಿ ಅವರು ಕಾಂಠಾ ಪ್ರಾಂತೀಯ ಅಂಕ್ಲೇಶ್ವರ, ನೇತ್ರಂಗ್, ಮಾಂಗರೋಲ್ ಸಮಿತಿ ಹಾಗೂ ಯುವ ಕ್ರಿಕೆಟ್ ಸಮಿತಿಯ ಅಧಿಕಾರಿಗಳು ಮತ್ತು ಸದಸ್ಯರನ್ನು ಸ್ನೇಹಪೂರ್ಣವಾಗಿ ಭೇಟಿಯಾಗಿ ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿದರು.
ಸಿಂಘಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತ ವರ್ಗದ ಸಮಗ್ರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಎಂದು ತಿಳಿಸಿ, ಅದರ ಲಾಭವನ್ನು ಸಮಾಜದ ಕೊನೆಯ ವ್ಯಕ್ತಿಯ ತನಕ ತಲುಪಿಸುವುದೇ ಸಮಿತಿಯ ಪ್ರಮುಖ ಉದ್ದೇಶ ಎಂದು ಹೇಳಿದರು.
ಕಾಂಠಾ ಪ್ರಾಂತದ ಬಂಧುಗಳು ಅವರ ನೇಮಕವನ್ನು ಸಮಾಜಕ್ಕೆ ಗೌರವದ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವನರಾಜ್ ಬೋಹ್ರಾ, ಪ್ರಫುಲ್ಲ ಬೋಹ್ರಾ, ಪದ್ಮ ಬೋಹ್ರಾ, ಮಾಂಗಿಲಾಲ್ ಛಾಣೋಡಿಯಾ, ಪ್ರಕಾಶ್ ಮುನೋತ್, ಸುನೀಲ್ ವೋರಾ, ಜಯಂತಿಲಾಲ್ ಗಾಂಧಿ, ಲಲಿತ್ ಧೋಕಾ, ಶಕ್ತಿ ಕರ್ಣಾವಟ್, ರಾಜೇಶ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
WhatsApp Group Join Now
Telegram Group Join Now
Share This Article