ಜೋಳದರಾಶಿಯ ಶ್ರೀಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಮಾಜಿ ಯೋಧರಿಗೆ ಸನ್ಮಾನ

Ravi Talawar
ಜೋಳದರಾಶಿಯ ಶ್ರೀಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಮಾಜಿ ಯೋಧರಿಗೆ ಸನ್ಮಾನ
WhatsApp Group Join Now
Telegram Group Join Now
ಬಳ್ಳಾರಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ತಾಲೂಕಿನ ಜೋಳದರಾಶಿ ಬಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ಆವರಣದಲ್ಲಿ ಭಾನುವಾರ ಸಂಜೆ ಮಾಜಿ ಯೋಧರು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಸಂಡೂರು ವಿಧಾನಸಭಾ  ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಎಸ್.ದಿವಾಕರ್ ಅವರು, ನರೇಂದ್ರ ಮೋದಿ ಅವರು ವಿಶ್ವದ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಯ ವಿಚಾರದಲ್ಲಿ ಅತ್ಯಂತ ಕಾಳಜಿಯ ಕಾರ್ಯನಿರ್ವಹಿಸಿ, ಇಡೀ ದೇಶದ ಜನರ ಮನ ಗೆದ್ದು, ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗುತ್ತಿದ್ದಾರೆ. ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದ್ದು, ರಾಜ್ಯದ ಪ್ರಗತಿಯ ಹಾದಿಯಲ್ಲಿ ಸಾಗುವ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಶ್ರೀಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್‌ನ ಮಾಲೀಕ ತಿಮ್ಮಪ್ಪ ಜೋಳದರಾಶಿ, ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಮಾಡುತ್ತಿರುವ ಸಂದರ್ಭದಲ್ಲಿ ದೇಶದ ಜನರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ
ಮುಡುಪಾಗಿಟ್ಟು ಕೆಲಸ ಮಾಡಿರುವ ಮಾಜಿ ಯೋಧರನ್ನು ಸನ್ಮಾನಿಸಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಯಿತು. ಇದು ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ಮಾಡಿದ ಕಾರ್ಯಕ್ರಮವಲ್ಲ. ಯೋಧರ ಸ್ಮರಣೆ ಹಾಗೂ ಅವರ ಸೇವೆಯನ್ನು ಸ್ಮರಿಸುವುದೇ ನಮ್ಮ ಮುಖ್ಯ ಆಶಯವಾಗಿದೆ. ಅದೇ ರೀತಿಯಾಗಿ ಯೋಧರಂತೆಯೇ ಜನಪರ ಆಶಯಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಾ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ನಮ್ಮ ನಡುವಿನ ಕೆಲವೇ
ಕೆಲವು ನಿಷ್ಠಾವಂತ ಪತ್ರಕರ್ತರನ್ನು ಸನ್ಮಾನಿಸುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಜೋಳದರಾಶಿ ತಿಮ್ಮಪ್ಪನವರ ಬಾಲ್ಯ ಸ್ನೇಹಿತ ಕೆಎಎಸ್ ಅಧಿಕಾರಿ ವೀರಭದ್ರಯ್ಯಸ್ವಾಮಿ ಮಾತನಾಡಿ, ನರೇಂದ್ರ ಮೋದಿ ಅವರ ಪದಗ್ರಹಣ ಹಿನ್ನಲೆಯಲ್ಲಿ ಮಾತನಾಡಿದರು. ಜೋಳದರಾಶಿ ತಿಮ್ಮಪ್ಪ ಅವರೊಂದಿಗೆ ಬಾಲ್ಯದ ಒಡನಾಟ ಹಾಗೂ ಬಡತನದ ನಡುವೆ ಬೆಳೆದ ಬಂದ ಬಗೆಯ ಕುರಿತು ಸ್ಮರಿಸಿದರು.
ಬಳಿಕ ಜರುಗಿದ ಕಾರ್ಯಕ್ರಮದಲ್ಲಿ 10 ಜನ ಮಾಜಿ ಯೋಧರು, ಹಿರಿಯಪತ್ರಕರ್ತರಾದ ಶಶಿಧರ ಮೇಟಿ, ಕೆ.ಎಂ.ಮಂಜುನಾಥ್ ಹಾಗೂ ನಂದೀಶ್ ಅವರನ್ನು ಸನ್ಮಾನಿಸಲಾಯಿತು. ಭಾರತ್ ಪೆಟ್ರೋಲಿಂನ ಮಾರಾಟ ಅಧಿಕಾರಿ ದೀಪಕ್ ಸಿಂಗ್ ಮುಂಡಾ, ಕಾಂಗ್ರೆಸ್ ಮುಖಂಡರಾದ ಮುದಿ ಮಲ್ಲಯ್ಯ ಮೋಕಾ, ವಾಲ್ಮೀಕಿ ಸಮಾಜದ ಗಣ್ಯರಾದ ಎನ್.ಸತ್ಯಪ್ಪ, ದುರುಗಪ್ಪ, ಜನಾರ್ದನ ನಾಯಕ, ಬೆಣಕಲ್ ಸುರೇಶ್, ಕಾಯಿಪಲ್ಯೆ ಬಸವರಾಜ್, ಜೋಳದರಾಶಿ ತಿಕ್ಕಣ್ಣ, ರಮೇಶ್, ಎರಿಸ್ವಾಮಿ, ಶೇಕ್ಷಾವಲಿ, ಭೀಮೇಶ್‌ಸ್ವಾಮಿ, ಮಲ್ಲನಗೌಡ, ಉಪನ್ಯಾಸಕ ಜೆ.ಸೋಮಶೇಖರ್, ಎಲ್‌ಐಸಿ ಪ್ರತಿನಿಧಿ ವಿ.ಶಿವಾಚಾರಿ ಡಿ.ಕಗ್ಗಲ್, ಮಂಜುಸ್ವಾಮಿ ಬೈಲೂರು, ಕೃಷಿ ಇಲಾಖೆ ಅಧಿಕಾರಿ ಬಿ.ಗಾದಿಲಿಂಗಪ್ಪ, ಶಿವಗೌಡ, ತಿಮ್ಮನಗೌಡ, ಭಾರತೀಯ ಮಿಲ್ಕ್ ಡೈರಿಯ ಪುರುಷೋತ್ತಮಗೌಡ, ರವಿಸ್ವಾಮಿ, ಜಗದೀಶ್ (ಜಗ್ಗು), ಸಿ.ಎ.ಷಣ್ಮುಖ, ಟಾಟಾ ಷಣ್ಮುಖಪ್ಪ, ಅನ್ನಪೂರ್ಣ ಹೋಟೆಲ್ ಮಾಲೀಕ ಶ್ರೀಧರ್, ಎಲ್‌ಐಸಿ ಪ್ರತಿನಿಧಿ
ಹುಲುಗಪ್ಪ, ಬಿಡಿಹಳ್ಳಿ ವಂಡ್ರಿ, ಯರಗುಡಿ ರಾಮಾಂಜಿನಿ, ಶಿವು ಪರಮದೇವನಹಳ್ಳಿ, ಹಗರಿ ಗಾದಿಲಿಂಗಪ್ಪ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article