ಮುದ್ದೇಬಿಹಾಳ : ಅಂತರಾಷ್ಟ್ರೀಯ ಬಂಜಾರ ಲೋಕ ಕಲಾ ಪರಿಷತ್ತ ದುಬೈ, ದುಬೈ ಬಿಲ್ಡರ್ ಶಂಕರ ರಾಠೋಡ ಖ್ಯಾತ ಅಂತರಾಷ್ಟ್ರೀಯ ಗಾಯಕ ಸುಭಾಸ ರಾಠೋಡ ಇವರ ನೇತೃತ್ವದ ಅಂತರಾಷ್ಟ್ರೀಯ ಬಂಜಾರ ಸಂಸ್ಕೃತಿ ಕಾರ್ಯಕ್ರಮಕ್ಕೆ ಮುದ್ದೇಬಿಹಾಳ ತಾಲೂಕಿನಿಂದ ಸತತ ಒಂದು ವಾರಗಳ ಕಾಲ ವಿದೇಶಕ್ಕೆ ತೆರಳಿ ಬಂಜಾರ ಸಮುದಾಯದ ಪ್ರವಾಸ ಮುಗಿಸಿ ತಾಯ್ನಾಡಿಗೆ ಆಗಮಿಸಿದ ಬಂಜಾರ ಕಲಾವಿದ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಧ್ಯಕ್ಷ, ಗ್ರಾಮ ಪಂಚಾಯತ ಸದಸ್ಯ, ಪತ್ರಕರ್ತ ಶಿವಾನಂದ ಲಮಾಣಿ ಇವರಿಗೆ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ, ಸರ್. ಎಂ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರವಿ ನಾಯಕ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯತ ಉಪಾಧ್ಯಕ್ಷ ಕೃಷ್ಣಾ ಚವ್ಹಾಣ,ಅಮರೇಶ ಕೂಡಲಗಿ ಗ್ರಾ.ಪಂ ಸದಸ್ಯ, ಹಣಮಂತ ಪಾಟೀಲ ಗ್ರಾ.ಪಂ ಸದಸ್ಯ, ಮಂಜುನಾಥ ಬೆಳ್ಳಿಕಟ್ಟಿ ಗುತ್ತಿಗೆದಾರ ಹಾಗೂ ಸಿಬ್ಬಂದಿ ವರ್ಗದವರಾದ ಪ್ರದೀಪ ಚವ್ಹಾಣ, ಎಮ್ ಎಮ್ ಭಾವೂರ, ಸಂಜು ಕೌಲಗಿ, ಬಂಜಾರ ಯುವ ಮುಖಂಡ ವಿಕಾಸ ಚವ್ಹಾಣ, ಪ್ರಕಾಶ ಅಂಬಳನೂರಿ, ಲಕ್ಷ್ಮಣ ಚವ್ಹಾಣ, ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ, ಸರ್. ಎಂ ಶಿವಾಚಾರ್ಯ ಕಾಲೇಜೆನ ಸಂಸ್ಥಾಪಕ ಅಧ್ಯಕ್ಷ ರವಿ ನಾಯಕ, ಬಂಜಾರ ಸಮುದಾಯ ಮುಖಂಡ ಶಿವಾನಂದ ಲಮಾಣಿಯವರು ನಿರಂತರ ಸಮುದಾಯದಲ್ಲಿ ಹೋರಾಟ ಚಿಂತನೆ, ಸಾಧನೆಯತ್ತ ಸಾಗುತ್ತಿದ್ದು ನಮಗೆ ಸಂತೋಷದ ಸಂಗತಿ ಈ ಒಂದು ವಾರಗಳ ಹಿಂದೆ ದುಬೈ ಬಂಜಾರ ಕಲಾ ಪರಿಷತ್ತ ಸಂಘಟನೆ ನೇತೃತ್ವದಲ್ಲಿ ನಡೆದ ಬಂಜಾರ ಕಲಾ ಕಾರ್ಯಕ್ರಮಕ್ಕೆ ತೆರಳಿ ಕಾರ್ಯಕ್ರಮವನ್ನು ಯಶಸ್ವಿಗೊಳಸಿ ಮರಳಿ ತಾಯನಾಡಿಗೆ ಆಗಮಿಸಿದ್ದು ಸಮುದಾಯಕ್ಕೆ ಹೆಮ್ಮೆಯ ವಿಷಯ ಎಂದರು.


