ಚಾಲಕರಹಿತ ಮೆಟ್ರೋ ರೈಲಿನ ಟ್ರಯಲ್ ರನ್ ಯಶಸ್ವಿ

Ravi Talawar
ಚಾಲಕರಹಿತ ಮೆಟ್ರೋ ರೈಲಿನ ಟ್ರಯಲ್ ರನ್ ಯಶಸ್ವಿ
WhatsApp Group Join Now
Telegram Group Join Now

ಬೆಂಗಳೂರು, ಜೂನ್.02: ಮೆಟ್ರೋ  ಪ್ರಯಾಣಿಕರಿಗೆ ಬಿಎಂಆರ್​ಸಿಎಲ್  ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಬಹು ನಿರೀಕ್ಷಿತ ಹಳದಿ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಕಳೆದ‌ ಹದಿನೈದು ದಿನಗಳ ಹಿಂದೆ ಲೋಕೋ ಪೈಲಟ್ ಲೆಸ್ ರೈಲಿನ ಟ್ರಯಲ್ ರನ್ ಮಾಡಿದ್ದ ಬಿಎಂಆರ್​ಸಿಎಲ್ ಟ್ರಯಲ್ ರನ್ ಅನ್ನು ಯಶಸ್ವಿಯಾಗಿ ಪೂರೈಸಿದ್ದು ಇದರ ಬೆನ್ನಲ್ಲೇ ಸಿಗ್ನಲಿಂಗ್ ಟೆಸ್ಟ್ ಆರಂಭಿಸಿದೆ.

ಹಳದಿ ಮಾರ್ಗದಲ್ಲಿ ಈಗ ಚಾಲಕರಹಿತ ಮೆಟ್ರೋ ರೈಲಿನ ಟ್ರಯಲ್ ರನ್‌ ಮುಕ್ತಾಯಗೊಂಡಿದ್ದು ಸಿಗ್ನಲಿಂಗ್ ಟೆಸ್ಟ್ ಆರಂಭವಾಗಿದೆ. ಹೀಗಾಗಿ ಆದಷ್ಟು ಬೇಗ ಲೋಕೋ ಪೈಲಟ್ ಲೆಸ್ ರೈಲು ಸೇವೆಗೆ ಸಿದ್ಧವಾಗಲಿದೆ. ರೈಲು ಚಾಲನೆಗೆ ಸಿದ್ಧವಾದ ನಂತರ ಮಾರ್ಗವನ್ನು ಉದ್ಘಾಟಿಸಲಾಗುತ್ತೆ.

ಬಿಎಂಆರ್​ಸಿಎಲ್‌ ಚೀನಾದ ಡ್ರೈವರ್ ಲೆಸ್ ಮೆಟ್ರೋ‌ ಮೂಲಕ ಸಿಗ್ನಲಿಂಗ್ ಟೆಸ್ಟ್ ನಡೆಸಿದೆ. ಮೆಟ್ರೋ ಅಧಿಕಾರಿಗಳು ಹಂತ ಹಂತವಾಗಿ ಸಿಗ್ನಲಿಂಗ್ ಟೆಸ್ಟ್ ಮಾಡಲಿದ್ದಾರೆ. ಇದು ಮುಗಿಯುತ್ತಿದ್ದಂತೆ ದೂರ ಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿವೆ. 18.82 ಕಿಮೀ ಉದ್ದವಿರುವ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗದಲ್ಲಿ ರೈಲು ಸಂಚರಿಸಲಿದೆ.

ಎಲ್ಲಾ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸಿ ವರದಿ ಸಲ್ಲಿಸಲಾಗುತ್ತೆ. ಕೇಂದ್ರ ರೇಲ್ವೆ ಸುರಕ್ಷಿತ ಅಧಿಕಾರಿಗಳ ಪರಿಶೀಲನೆ ನಂತರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ. ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್ ಗಳು ಇರಲಿವೆ.

WhatsApp Group Join Now
Telegram Group Join Now
Share This Article