ಬಳ್ಳಾರಿ, ಫೆ.09;. ಸ್ಥಳೀಯ ಗಾಂಧಿನಗರದ ಟ್ರೆಂಡ್ಸ್ ಪೇಪರ್ ಮಾರ್ಟ್ ಸಭಾಂಗಣದಲ್ಲಿಂದು ಬೆಳಿಗ್ಗೆ 10 ಗಂಟೆಗೆ ಟ್ರೆಂಡಿ ಪೇಪರ್ ಚೆಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು ಕನಕದುರ್ಗ ಚೆಸ್ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಂಯೋಗದೊಂದಿಗೆ ಈ ಪಂದ್ಯವನ್ನ ನಡೆಸಲಾಯಿತು.
ಈ ಸಂದರ್ಭದಲ್ಲಿ ಗಣ್ಯರಾದ ವೀರೇಶ್ ತೋಟದ್ ವೆಂಕಟೇಶ್ ಕೊಲ್ಲೂರ್, ಸಿದ್ದಲಿಂಗ ಮೂರ್ತಿ ಮರಿಸ್ವಾಮಿ ರೆಡ್ಡಿ ಶ್ರೀನಿವಾಸ್. ನಾಗರಾಜ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೆಂಕಟೇಶ್ ಕೊಲ್ಲೂರ್ ಅವರ ಮಾತನಾಡುತ್ತಾ, ಬುದ್ಧಿವಂತಿಕೆ ಗೇಮ್, ಸಂಘಟನೆ ಮಾಡಿದ ಬಸವರಾಜ್ ರವರಿಗೆ ಧನ್ಯವಾದಗಳು ತಿಳಿಸಿದರು ಹಾಗೂ ೬೦*೮೦ ಇರುವ ನಮ್ಮ ಲೇಔಟ್ ನಲ್ಲಿ ಒಂದು ಸೈಟನ್ನು ಕೊಡುತ್ತೇವೆ ಎಂದು ಈ ಸಭೆಯಲ್ಲಿ ಒಪ್ಪಿಕೊಂಡರು. ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿದ್ದಲಿಂಗ ಮೂರ್ತಿಯವರು ಮಾತನಾಡುತ್ತಾ, ರಜದ ಸಮಯದಲ್ಲಿ ಬೇರೆಡೆ ಹೋಗುವ ಬದಲು ಈ ತರ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದರೆ ಮಕ್ಕಳ ಬುದ್ಧಿಮಟ್ಟ ಬೆಳೆಯುತ್ತದೆ ಎಂದು ತಿಳಿಸಿದರು ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯನವರು ಮಾತನಾಡುತ್ತಾ 2017ರಲ್ಲಿ ಪ್ರಾರಂಭವಾದ ಈ ಅಸೋಸಿಯೇಷನ್ ಕೇವಲ ಕೆಲವು ಮಾತ್ರ ಆಟಗಾರರನ್ನು ಹೊಂದಿತ್ತು. ಈಗ ಸುಮಾರು ನೂರಾರು ಆಟಗಾರರನ್ನು ಹೊಂದಿರುವುದು ಬಹಳ ಸಂತೋಷವನ್ನು ತಂದಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು


