ಎಣ್ಣೆಕಾಳು ಬೆಳೆಗಳ ಕುರಿತು ರೈತರಿಗೆ ತರಬೇತಿ

Ravi Talawar
ಎಣ್ಣೆಕಾಳು ಬೆಳೆಗಳ ಕುರಿತು ರೈತರಿಗೆ ತರಬೇತಿ
WhatsApp Group Join Now
Telegram Group Join Now

ನೇಸರಗಿ.23: ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಎಡಿಎಮ್ ಅಗ್ರೋ ಇಂಡಸ್ಟ್ರೀಜ್ ಇಂಡಿಯಾ ಪ್ರೈ. ಲಿ., ಧಾರವಾಡ ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಬಿ.ವಿ.ಬಿ. ಇಂಜೀನಿಯರಿಂಗ್ ಕಾಲೇಜು ಆವರಣದಲ್ಲಿ ರೈತರಿಗಾಗಿ ಪೂರ್ವ ಮುಂಗಾರು ಸಿದ್ಧತೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಪ್ತರ್ಷಿಗಳ  ರಿಶ್ರಮದಿಂದ ಸ್ಥಾಪಿಸಲಾದ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯು ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ೩೧೦ ಅಂಗ ಸಂಸ್ಥೆಗಳನ್ನು ಸ್ಥಾಪಿಸಿ ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನೂ ಅನೇಕ ರಂಗಗಳಲ್ಲಿ ಶಿಕ್ಷಣ ಸೇವೆಯನ್ನು ಒದಗಿಸುತ್ತಿದೆ. ಅದರಂತೆ, ೨೦೧೧ ರಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡ ಕೆಎಲ್‌ಇ ಕೃಷಿವಿಜ್ಞಾನ ಕೇಂದ್ರವು ರೈತರಿಗೆ ಉತ್ತಮ ಗುಣಮಟ್ಟದ ಬೀಜ, ಮಣ್ಣು ಪರೀಕ್ಷೆ, ಸಸ್ಯ ಸಂರಕ್ಷಣೆ ಹಾಗೂ ಅನೇಕ ತಂತ್ರಜ್ಞಾನದ ವಿಸ್ತರಣೆಯಲ್ಲಿ ರೈತರಿಗೆ ಸೇವೆ ಸಲ್ಲಿಸಿ ಯಶಸ್ವಿಯಾಗಿದೆ. ಇಂದು ರೈತರಿಗೆ ಎಣ್ಣೆಕಾಳು ಬೆಳೆಯ ಸಮಗ್ರ ನಿರ್ವಹಣೆ ಕುರಿತು ತಜ್ಞರಿಂದ ತರಬೇತಿ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರವಾಡ ಕೃಷಿ ವಿಶ್ವವಿದ್ಯಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎಸ್. ಎ. ಗದ್ದನಕೇರಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಬೀಜ ಪೂರೈಕೆ ಹಾಗೂ ತಂತ್ರಜ್ಞಾನ ಪ್ರಸಾರದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಅದರಂತೆ ಎಡಿಎಮ್ ಅಗ್ರೋ ಇಂಡಸ್ಟ್ರೀಜ್ ಇಂಡಿಯಾ ಪ್ರೈ. ಲಿ., ಕಂಪನಿಯು ವಿಶ್ವದಲ್ಲೇ ಎಣ್ಣೆ ಉತ್ಪಾದನೆಯಲ್ಲಿ ಖ್ಯಾತಿಯನ್ನು ಪಡೆದಿದೆ. ಈ ಎರಡು ಸಂಸ್ಥೆಗಳು ಒಟ್ಟಾಗಿ ರೈತರಿಗೆ ಸೋಯಾಬಿನ್  ಬೆಳೆಯ ತರಬೇತಿಯನ್ನು ಹಮ್ಮಿಕೊಂಡು ತಂತ್ರಜ್ಞಾನದ ಮಾಹಿತಿ ವಿಸ್ತರಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ದೇಶ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಾದ ಅವಶ್ಯಕತೆ ಇದ್ದು, ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿ ಪಡಿಸಿದ ನೂತನ ತಳಿಯ ಬೀಜ ಪೂರೈಕೆ, ಬೇಸಾಯ ಕ್ರಮ ಹಾಗೂ ಮಣ್ಣು ಆರೋಗ್ಯ ಕುರಿತಾದ ತರಬೇತಿಯು ನಿರೀಕ್ಷಿತ ಫಲಿತಾಂಶವನ್ನು ನೀಡಿ, ಬೆಳೆ ಉತ್ಪಾದಕತೆ ಅಧಿಕಗೊಳ್ಳುವ ಮೂಲಕ ರೈತನ ಆದಾಯ ಹೆಚ್ಚು  ಗುವುದರಲ್ಲಿ ಸಂಶಯವಿಲ್ಲ ಎಂದರು.

ಹಾಗೂ ರೈತರ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರಿಸಿದರು. ಎಡಿಎಮ್ ಅಗ್ರೋ ಇಂಡಸ್ಟ್ರೀಜ್ ಇಂಡಿಯಾ ಪ್ರೈ. ಲಿ., ಧಾರವಾಡದ ಸಹ ವ್ಯವಸ್ಥಾಪಕರಾದ ಶ್ರೀ  ಗರಾಜ ಕಾಮತ ಮಾತನಾಡಿ, ಎಡಿಮ್ ಸಂಸ್ಥೆಯು ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಖಾದ್ಯ ತೈಲ ಉತ್ಪಾದನೆ ಮಾಡುತ್ತಿದ್ದು ಭಾರತ ದೇಶದಲ್ಲಿಯೂ ಗುಣಮಟ್ಟದ ಖಾದ್ಯ ತೈಲ ಉತ್ಪಾದನೆಯಲ್ಲಿ ತೊಡಗಿದೆ. ಎಡಿಎಮ್ ಸಂಸ್ಥೆಯ ಕಾರ್ಪೋರೆಟ್ ಸೋಸಿಯಲ್ ಜವಾಬ್ದಾರಿ ಭಾಗವಾಗಿ ಸಾಮಾಜಿಕ ಕಾಳಜಿ ಯೋಜನೆಯಡಿ ರೈತರಿಗೆ ಬೀಜ ವಿತರಣೆ ಹಾಗೂ ತಂತ್ರಜ್ಞಾನದ ವರ್ಗಾವಣೆಗಾಗಿ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರೈತರು ತರಬೇತಿಯ ಲಾಭ ಪಡೆಯಬೇಕೆಂದು ಕರೆ ನೀಡಿದರು ಹಾಗೂ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಬಿ. ಅಂಗಡಿಯವರು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಿಂದ ರೈತರ ಜಮೀನುಗಳಲ್ಲಿ ತಂತ್ರಜ್ಞಾನದ  ಪರೀಕ್ಷೆ, ಪ್ರಾತ್ಯಕ್ಷಿಕೆ, ತರಬೇತಿ, ಬೀಜೋತ್ಪಾದನೆ ಹಾಗೂ ಕೇಂದ್ರದ ಇತರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನೆಟಾಫೇಮ್ ಇರಿಗೇಶನ್ ಇಂಡಿಯಾ ಪ್ರೈ .ಲಿ. ಬೇಸಾಯ ತಜ್ಞ, ಶ್ರೀ ಅಂಜಿನಪ್ಪ ಹನಿ ನೀರಾವರಿ ಕುರಿತು ಮಾಹಿತಿ ನೀಡಿದರು, ಕೇಂದ್ರದ  ವಿಜ್ಞಾನಿಗಳಾದ ಎಸ್. ಎಮ್. ವಾರದ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಹಾಗೂ ಜಿ. ಬಿ. ವಿಶ್ವನಾಥ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಡಾ. ಆರ್. ಆರ್. ಪಾಟೀಲ ಸೋಯಾಬಿನ್‌ನಲ್ಲಿ ಕೀಟ ನಿರ್ವಹಣೆ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಎಡಿಎಮ್ ಅಗ್ರೋ ಇಂಡಸ್ಟ್ರೀಸ್ ಇಂಡಿಯಾ ಪ್ರೈ. ಲಿ., ಧಾರವಾಡದ ಸಹಾಯಕ ವ್ಯವಸ್ಥಾಪಕರಾದ ಶ್ರೀಮತಿ ರಕ್ಷಿತಾ ಕೆ. ಆರ್, ಸ್ವಾಗತಿಸಿದರು, ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಪ್ರಾಸ್ತಾವಿಕ ಮಾತನಾಡಿದರು ಹಾಗೂ ವಿಜ್ಞಾನಿ ಜಿ. ಬಿ. ವಿಶ್ವನಾಥ ವಂದಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಸೋಯಾಬಿನ್ ಬೆಳೆಯುವ ೪೦೦ ರೈತರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article