ಬೆಳಗಾವಿ, ಅಕ್ಟೋಬರ್ 23: ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ಮತ್ತು ಬೆಳಗಾವಿ ಜಿಲ್ಲೆಯ ಲೋಂಡಾ ರೈಲು ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಎರಡು ನಿಲ್ದಾಣಗಳ ನಡುವೆ ರೈಲು ಸಂಚಾರ ಒಂದು ತಿಂಗಳು ರದ್ದಾಗಲಿದೆ.
ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 17333/17334 ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.